ಪಡಂಗಡಿ: ಜೈನ ಧರ್ಮದ ಸಮ್ಮೇದ ಶಿಖರ್ಜಿಯನ್ನು ಪ್ರವಾಸಿ ತಾಣವನ್ನಾಗಿಮಾಡಲು ಜಾರ್ಖಂಡ್ ಸರಕಾರ ನಿರ್ಧಾರ: ಆದೇಶವನ್ನು ಹಿಂಪಡೆಯುವಂತೆ ಪಡಂಗಡಿ ಬಸದಿಯಿಂದ ಮನವಿ

0

ಪಡಂಗಡಿ: ಜೈನ ಧರ್ಮದ ಪವಿತ್ರ ಕ್ಷೇತ್ರ ಸಮ್ಮೇದ ಶಿಖರ್ಜಿಯನ್ನು ಪ್ರವಾಸಿ ತಾಣವನ್ನಾಗಿ ಮಾಡಲು ಹೊರಟಿರುವ ಜಾರ್ಖಂಡ್ ಸರಕಾರದ ಆದೇಶವನ್ನು ಹಿಂಪಡೆಯುವಂತೆ ಶ್ರೀ ಪಾರ್ಶ್ವ ಪದ್ಮ ಪಡಂಗಡಿ, ಶ್ರೀಶಾ ಜೈನ ಮಹಿಳಾ ಸಂಘ ಪಡಂಗಡಿ ಬಸದಿಗಳ ಸ್ವಚ್ಛತಾ ತಂಡಗಳ ಅಧ್ಯಕ್ಷರುಗಳು , ಕಾರ್ಯದರ್ಶಿಗಳು , ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ಬೆಳ್ತಂಗಡಿಯ ತಹಶೀಲ್ದಾರರ ಮೂಲಕ ಗೌರವಾನ್ವಿತ ರಾಷ್ಟ್ರಪತಿಗಳಿಗೆ, ಪ್ರಧಾನ ಮಂತ್ರಿಗಳಿಗೆ, ಸನ್ಮಾನ್ಯ ಗೃಹ ಮಂತ್ರಿಗಳಿಗೆ, ಜಾರ್ಖಂಡ್ ಸರಕಾರದ ಮುಖ್ಯಮಂತ್ರಿಗಳಿಗೆ, ಕರ್ನಾಟಕ ಸರಕಾರದ ಮುಖ್ಯಮಂತ್ರಿಗಳಿಗೆ ಮನವಿಪತ್ರಗಳನ್ನು ಸಲ್ಲಿಸಿದರು.

ಈ ಸಂದರ್ಭದಲ್ಲಿ ರತನ್ ಕುಮಾರ್ ಬೀಡು, ಅಮರನಾಥ ಮಲ್ಲಿಪಾಡಿ ವಿನಯಪ್ರಸಾದ್, ಲಾಲ್ ಚಂದ್ರ ಬಂಗ, ಪುಷ್ಪರಾಜ್ ಜೈನ್, ಸತೀಶ್ ಕುಮಾರ್ ಪದ್ಮಶ್ರೀ, ಪ್ರವೀಣ್ ಕುಮಾರ್ ಅಜ್ರಿ, ವಿತೇಶ್ ಕುಮಾರ್ ಜೈನ್ ನಮನ್ ರಾಜ್, ಪ್ರಣಯ್, ಪ್ರವರ್ತನ್, ಹೇಮಲತಾ ನೀತಾ ವಿನಯ ಪ್ರಸಾದ್, ಸುಪ್ರಿಯ ಹರಿಹಂತ್ ಭಾಗಿಯಾಗಿದ್ದರು.

p>

LEAVE A REPLY

Please enter your comment!
Please enter your name here