ಮಚ್ಚಿನ : ತುಳು ನಾಡಿನ ಇತಿಹಾಸ ಪ್ರಸಿದ್ಧ ನಾಗ ಕ್ಷೇತ್ರ ಎಂದೇ ಪ್ರಸಿದ್ಧಿ ಪಡೆದ ಮಹತೋಭಾರ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನದ ತೇರಾ ಬಾಕಿಮಾರು ಗದ್ದೆಯಲ್ಲಿ ಶ್ರೀ ಅನಂತೇಶ್ವರ ಸ್ವಾಮಿ ಕಂಬಳ ಸಮಿತಿ ನಡೆಸುತ್ತಿರುವ 25ನೇ ವರ್ಷದ ಶೇಷ ನಾಗ ಜೋಡುಕರೆ ಕಂಬಳದ ಸಮಾರೋಪ ಸಮಾರಂಭವು ಡಿ.18ರಂದು ಸಂಜೆ ಶಾಸಕ ಹರೀಶ್ ಪೂಂಜರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಮುಖ್ಯ ಅತಿಥಿ ಗಳಾಗಿ ರತ್ನಾಳರ ಶೆಟ್ಟಿ ಮೂಡಾಯೂರು ಮಾಜಿ ಆಡಳಿತ ಮೊತ್ತೇಸರರು, ಶ್ರೀ ಕ್ಷೇತ್ರ ಪಾರಂಕಿ, ಜಗದೀಶ್ ಶೆಟ್ಟಿ ಬೋಳದಗುತ್ತು ಕೋಣ ಮಲಕರು ಮತ್ತು ಉದ್ಯಮಿಗಳು ಮುಂಬಾಯಿ, ಸತೀಶ್ ಶೆಟ್ಟಿ ಬೋಳ ಕೋಣ ಮಾಲಕರು ಮತ್ತು ಉದ್ಯಮಿಗಳು ಮುಂಬಯಿ, ಎನ್ ಪ್ರಕಾಶ್ ಕಾರಂತ್, ಭರತ್ ಶೆಟ್ಟಿ ಬೆಂಗಳೂರು, ಮಡಂತ್ಯಾರು ಚರ್ಚ್ ಪಾಲನಾ ಪರಿಷತ್ ಉಪಾಧ್ಯಕ್ಷ ಲಿಯೋ ರೊಡ್ರಿಗಸ್, ಮಾಣಿಂಜ ಪ್ರವೀಣ್ ಬಂಗೇರ ಉಪಪ್ರಧಾನ ವ್ಯವಸ್ಥಾಪ, ಶಿಪ್ಪಿಂಗ್ ಕಂ. ಮಂಗಳೂಂರು, ಕರುಣಾಕರ ಕೋಟ್ಯಾನ್ ಕಜೇಕಾರ್ ಕ್ರಷರ್, ದುಗ್ಗಪ್ಪ ಗೌಡ ಪೊಸಂದೋಡಿ ಪ್ರಗತಿಪರ ಕೃಷಿಕರು,
ಸುಂದರ ಪೂಜಾರಿ ಚಂದ್ರ ನಿವಾಸ ಬಳ್ಳಮಂಜ, ಪಾರೇಂಕಿ ದೇವಸ್ಥಾನದ ಆಡಳಿತ ಮೊಕ್ತೇಸರ ವಿಠಲ ಶೆಟ್ಟಿ ಮೂಡಯುರು. ಪ್ರಶಾಂತ್ ಎಂ. ಪ್ರತಿಮಾ ನಿಲಯ, ಮಾಜಿ ರೋಟರಿ ಕ್ಲಬ್ ಅಧ್ಯಕ್ಷ ಕಾಂತಪ್ಪ ಗೌಡ, ಮಡಂತ್ಯಾರು ಜೇಸಿ ಅಧ್ಯಕ್ಷ ಅಶೋಕ್ ಗುಂಡಿಯಲ್ಕೆ, ವರದರಾಜು ಸುವರ್ಣ, ಮುಗೆರೋಡಿ ಸಂಜೀವ ಶೆಟ್ಟಿ, ಮಚ್ಚಿನ ಗ್ರಾಮ ಪಂಚಾಯತ್ ಅಧ್ಯಕ್ಷ ಚಂದ್ರಕಾಂತ ನಿಡ್ಡಾಜೇ, ಕರ್ನಾಟಕ ರತ್ನ ಪ್ರಶಸ್ತಿ ವಿಜೇತ ಶ್ರೀಧರ್ ಕುಲಾಲ್ ಮರೋಡಿ, ಕಂಬಳ ಸಮಿತಿ ಅಧ್ಯಕ್ಷ ಪದ್ಮನಾಭ ಸುವರ್ಣ, ಶ್ರೀ ಕ್ಷೇತ್ರದ ಆನುವಂಶೀಯ ಆಡಳಿತ ಮೊಕ್ತೇಸರರಾದ ಡಾ ಎಂ. ಹರ್ಷ ಸಂಪಿಗೆತ್ತಾ ಯಾ,ಗೌರವಾಧ್ಯಕ್ಷ ಸುಧೀರ್ ಶೆಟ್ಟಿ ಕೊರಬೇಟ್ಟು, ಉಪದ್ಯಕ್ಷ ಪ್ರಮೋದ್ ಕುಮಾರ್,ಕಾರ್ಯದರ್ಶಿ ವಸಂತ ಮಾರಕಡ, ಗೌರವ ಸಲಹೆಗಾರ ಪ್ರಕಾಶ್ ಸಂಪಿಗೇತ್ತಾಯ, ಜೊತೆ ಕಾರ್ಯದರ್ಶಿ ಅವಿನಾಶ್ ಮಾನೂರು. ಸದಾಶಿವ ಹೆಗ್ಡೆ, ಮೊದಲಾದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಮತ್ತು ಮಂಗಳೂರು ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ ಯವರ ಸಹಾಕಾರ ದಿಂದ ಬಳ್ಳ ಮಂಜ ದೇವಸ್ಥಾನಕ್ಕೆ ಅಭಿವೃದ್ಧಿ ಕಾಮಗಾರಿ ಗಳಿಗೆ ರೂ.10ಲಕ್ಷ ಮಂಜೂರು ಗೊಂಡಿದ್ದು ಕಾಮಗಾರಿಗೆ ಶಾಸಕ ಹರೀಶ್ ಪೂಂಜ ಶಿಲಾನ್ಯಾಸ ಕಾರ್ಯಕ್ರಮ ನೆರವೇರಿಸಿದರು.