ಸಮಾಜದಲ್ಲಿ ಬಡತನದಲ್ಲಿರುವವರ ಬಾಳಿಗೆ ಬೆಳಕಾಗುವುದು :ರೋಟರಿ ಸಂಸ್ಥೆಯ ಮುಖ್ಯ ಧ್ಯೇಯ:ರೋ| ಪ್ರಕಾಶ್ ಕಾರಂತ್: ಪತ್ರಿಕಾಗೋಷ್ಠಿ

0



ಬೆಳ್ತಂಗಡಿ : ಸಮಾಜದಲ್ಲಿ ಬಡತನದಲ್ಲಿರುವ ಹಾಗೂ ಸಂಕಷ್ಟಗಳನ್ನು ಎದುರಿಸುತ್ತಿರುವವರ ಬಾಳಿಗೆ ಬೆಳಕಾಗುವುದು ರೋಟರಿ ಸಂಸ್ಥೆಯ ಮುಖ್ಯ ಧ್ಯೇಯವಾಗಿದ್ದು, ಪ್ರಸಕ್ತ ಸಾಲಿನಲ್ಲಿ ಜಲಸಿರಿ, ವನಸಿರಿ, ಆರೋಗ್ಯಸಿರಿ ಹಾಗೂ ವಿದ್ಯಾಸಿರಿ ಯೋಜನೆಯಡಿಯಲ್ಲಿ ಕ್ಲಬ್ ವ್ಯಾಪ್ತಿಯಲ್ಲಿ ವಿವಿಧ ಜನೋಪಯೋಗಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ ಎಂದು ರೋಟರಿ ಜಿಲ್ಲಾ ಗವರ್ನರ್ ರೋ| ಎನ್. ಪ್ರಕಾಶ್ ಕಾರಂತ್ ಹೇಳಿದರು.

ಅವರು ಡಿ.15 ರಂದು ಬೆಳ್ತಂಗಡಿ ರೋಟರಿ ಕ್ಲಬ್‌ವತಿಂದ ಕಾಶಿಬೆಟ್ಟು ಅರಳಿಯ ರೋಟರಿ ಸೇವಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, 117 ವರ್ಷಗಳ ಹಿಂದೆ ೪ ಸದಸ್ಯರಿಂದ ಆರಂಭಗೊಂಡ ರೋಟರಿ ಕ್ಲಬ್, ಇಂದು 220 ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, 12ಕ್ಕೂ ಮಿಕ್ಕಿ ಸದಸ್ಯರನ್ನು ಹೊಂದಿದೆ. ಸೇವೆ ಮತ್ತು ಜನರ ಜೀವನದ ಸುಧಾರಣೆಗೆ ಕಾರ್ಯಕ್ರಮ ರೂಪಿಸುವುದೇ ಈ ಸಂಸ್ಥೆಯ ಉದ್ದೇಶವಾಗಿದೆ. ರೋಟರಿ ಕ್ಲಬ್‌ನಲ್ಲಿ ತೊಡಗಿಸಿಕೊಂಡರೆ, ಅವರಲ್ಲಿ ನಾಯಕತ್ವ ಗುಣ ಬೆಳೆಸಿಕೊಳ್ಳಲು ಅವಕಾಶವಾಗುತ್ತದೆ. ಜಿಲ್ಲಾ ರೋಟರಿ ಕ್ಲಬ್ ವತಿಯಿಂದ ಆನೇಕ ಸಮಾಜ ಮುಖಿ ಕಾರ್ಯಕ್ರಮಗಳನ್ನು ಈ ವರ್ಷ ನಡೆಸಲಾಗಿದ್ದು, ಮಂಗಳೂರು ಲೇಡಿಗೋಷನ್ ಆಸ್ಪತ್ರೆಗೆ ಐಸಿಯು ಯೂನಿಟ್, ಮಕ್ಕಳ ಅನುಕೂಲಕ್ಕಾಗಿ ಬ್ಲೆಡ್ ಬ್ಯಾಂಕ್ ಸೇರಿದಂತೆ ಆನೇಕ ಪರಿಕರಗಳನ್ನು ನೀಡಲಾಗಿದೆ. ಆನೇಕ ಕಡೆಗಳಲ್ಲಿ ಡಯಾಲೀಸಿಸ್ ಯೂನಿಟ್ ನೀಡಲಾಗಿದ್ದು, ರೋಟರಿ ವತಿಯಿಂದ ಶಾಲೆಗಳನ್ನು, ಅನಾಥಾಶ್ರಮಗಳನ್ನು ಕೂಡಾ ನಡೆಸಲಾಗುತ್ತಿದೆ. ಬೆಳ್ತಂಗಡಿ ರೋಟರಿ ಕ್ಲಬ್ ವತಿಯಿಂದಲೂ ಇಂದು ಹಲವಾರು ಯೋಜನೆಗಳನ್ನು ಅನುಷ್ಠಾನ ಮಾಡಲಾಗಿದ್ದು, ಇದರ ಪ್ರಯೋಜನ ತಾಲೂಕಿನ ಜನತೆಗೆ ದೊರೆಯಲಿದೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷೆ ರೋ| ಮನೋರಮ ಭಟ್, ಸಹಾಯಕ ಗವರ್ನರ್ ರೋ, ಮೇಜರ್ ಜನರಲ್ ಎಂ.ಎ.ಭಟ್ (ನಿವೃತ್ತ), ರೋಟರಿ ಕ್ಲಬ್ ಕಾರ್ಯದರ್ಶಿ ರಕ್ಷಾ ರಾಗ್ನೇಶ್, ರೋಟರಿ ಜಿಲ್ಲಾ ಅಡಳಿತ ಕಾರ್ಯದರ್ಶಿ ನಾರಾಯಣ ಹೆಗ್ಡೆ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here