







ಮರೋಡಿ: ಮರೋಡಿ ಗ್ರಾಮದ ಪೊಸರಡ್ಕ ದೇವಿಪ್ರಸಾದ್ ಮನೆಯ ಮಹಾಬಲ ಸುವರ್ಣ ಅವರ ಮಾತೃಶ್ರೀ, ಹಿರಿಯರಾದ ದುಗ್ಗಮ್ಮ ಪೂಜಾರ್ತಿ (98) ಅವರು ವಯೋ ಸಹಜ ಅನಾರೋಗ್ಯದಿಂದ ಡಿ. 15ರಂದು ಬೆಳಿಗ್ಗೆ ನಿಧನರಾದರು.


ಮರೋಡಿ ಬ್ರಹ್ಮಶ್ರೀ ನಾರಾಯಣಗುರು ಸ್ವಾಮಿ ಸೇವಾ ಸಂಘದ ಚಟುವಟಿಕೆಗಳಿಗೆ ಸದಾ ಪ್ರೋತ್ಸಾಹ ನೀಡುತ್ತಿದ್ದ ಅವರು, ಕೂಕ್ರಬೆಟ್ಟು ಅಂಗನವಾಡಿ ಕೇಂದ್ರದಲ್ಲಿ ಕೆಲ ವರ್ಷ ಸಹಾಯಕಿಯಾಗಿ ಸೇವೆ ಸಲ್ಲಿಸಿದ್ದರು. ಮೃತರು ಇಬ್ಬರು ಪುತ್ರರು, ಒಂದು ಪುತ್ರಿ, ಮೊಮ್ಮಕ್ಕಳು, ಮರಿಮಕ್ಕಳು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.








