ಓಡಿಲ್ನಾಳ : ಪ್ರಾಚೀನ ದೇವಾಲಯ ಶ್ರೀ ಕಿರಾತಮೂರ್ತಿ ಮಹಾಲಿಂಗೇಶ್ವರ ಈಗಾಗಲೇ ಊರವರು ಸೇರಿಕೊಂಡು ಕಟ್ಟಿ ಡಿ. 25 ರಿಂದ ಅಧಿಕೃತ ಬ್ರಹ್ಮ ಕಲಶೋತ್ಸವ ನಡೆಯಲಿದೆ.
ಮೂರು ವರ್ಷಗಳ ಹಿಂದೆ ನಾವು ಬಂದಾಗ ಜಾಗವೇ ಇರಲಿಲ್ಲ ಅಂತಹ ಈ ಜಾಗ ದೇವರ ಸನ್ನಿಧಿ ಯಾಗಿದೆ ಎಂದು ಹೇಳಲು ಸಂತೋಷವಾಗುತ್ತದೆ. ಡಿಸೆಂಬರ್ 22 ರಂದು ಬೆಳಾಲ್ ನಿಂದ ಆ ದೇವರಮೂರ್ತಿ
ಎರಡು ಎತ್ತಿನ ಗಾಡಿಯಲ್ಲಿ ಬರಲಿದೆ. ಆ ಕಾರ್ಯಕ್ರಮ ಯಶಸ್ವಿಯಾಗಲಿ ಈ ಸನ್ನಿಧಿ ಬೆಳ್ತಂಗಡಿ ಅಲ್ಲದೆ ಊರ ಪರ ವೂರಿನಿಂದ ಬರುವ ಭಕ್ತರಿಗೆ ಕಿರಾತ ಮೂರ್ತಿ ಅನುಗ್ರಹ ಮಾಡಲಿ. ಎಲ್ಲರ ಒಗ್ಗೂಡುವಿಕೆ ಮತ್ತು ಸಹಕಾರಯಿರಲಿ ಎಂದು ಮುಗುಳಿ ನಾರಾಯಣ ಭಟ್ ಹೇಳಿದರು.
ಶ್ರೀ ಕಿರಾತಮೂರ್ತಿ ಮಹಾಲಿಂಗೇಶ್ವರ ದೇವಸ್ಥಾನ ಮೈರಲ್ಕೆ ಓಡಿಲ್ನಾಳದಲ್ಲಿ ಡಿ.25ರಿಂದ ಜ.3ರತನಕ ನಡೆಯುವ ನವೀಕರಣ ಪುನರ್ ಪ್ರತಿಷ್ಠೆ ಅಷ್ಟಬಂಧ ಬ್ರಹ್ಮಕಲಶೋತ್ಸವ ಸಲುವಾಗಿ ಡಿಸೆಂಬರ್ 9ರಂದು ಕಾರ್ಯಾಲಯ ಉದ್ಘಾಟಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿಯ ಕೋಶಾಧಿಕಾರಿ ಗೋಪಾಲ ಶೆಟ್ಟಿ ಕೋರ್ಯಾರು, ಬ್ರಹ್ಮ ಕಲಶೋತ್ಸವ ಕಾರ್ಯ ಅಧ್ಯಕ್ಷ ರಾಜ್ ಪ್ರಕಾಶ್ ಶೆಟ್ಟಿ ಪಡ್ಡೆಲು, ಪ್ರಧಾನ ಕಾರ್ಯದರ್ಶಿ ಧರಣೇಂದ್ರ ಕೆ ಜೈನ್. ಕೋಶಾಧಿಕಾರಿ ಮನೋಹರ್ ಪಿ.ಸಿ, ಓಡಿಲ್ನಾಳ ಧರ್ಮೊತ್ಥಾನ ಟ್ರಸ್ಟ್ ಮೈರಲ್ಕೇ ಅಧ್ಯಕ್ಷ ವೃಷಭ ಆರಿಗ, ಪವಿತ್ರ ಪಾಣಿ ಮೋಹನ್ ಭಟ್ ಕೆರ್ಮುಣ್ಣಾಯ ಮೈರಾರು, ಪುರೋಹಿತ ರವಿಕುಮಾರ್ ಕಲ್ಮಂಜ, ಯುವ ಸಮಿತಿ ಅಧ್ಯಕ್ಷ ಚಿದಾನಂದ ಇಡ್ಯಾ, ಚಪ್ಪರ ಸಮಿತಿಯ ಸಂಚಾಲಕ ದಿನೇಶ್ ಕೊಂಡಮಾರು, ಸಹ ಸಂಚಾಲಕರಾದ ವಾಮನ ಮೂಲ್ಯ ಮಡಂತಿಲ, ಕಾರ್ಯಾಲಯ ಸಮಿತಿಯ ಸಂಚಾಲಕ ಜಗನ್ನಾಥ್ ಕುವೆಟ್ಟು, ಗ್ರಾಮ ಪಂಚಾಯತ್ ಸದಸ್ಯರಾದ ಲಕ್ಷ್ಮೀಶ, ನಿತೇಶ್, ಸದಾನಂದ ಮತ್ತು ಬ್ರಹ್ಮಕಲಶ ಸಮಿತಿ ಸದಸ್ಯರು, ಜೀರ್ಣೋದ್ಧಾರ ಸಮಿತಿಯ ಸದಸ್ಯರು, ಬಯಲು ವಾರ್ ಸಮಿತಿ ,ಮಹಿಳಾ ಸಮಿತಿ ,ಯುವ ಸಮಿತಿ ಹಾಗೂ ಗ್ರಾಮದ ಭಕ್ತರು ಉಪಸ್ಥಿತರಿದ್ದರು.