ಬೆಳ್ತಂಗಡಿ: ತಾಲೂಕು ಯುವಜನ ಒಕ್ಕೂಟದ ಅಧ್ಯಕ್ಷರಾಗಿ ರಮಾನಂದ ಸಾಲ್ಯಾನ್ ಮುಂಡೂರು

0

ಬೆಳ್ತಂಗಡಿ : ತಾಲೂಕು ಯುವಜನ ಒಕ್ಕೂಟ (ರಿ). ಬೆಳ್ತಂಗಡಿ ಇದರ ಮಹಾಸಭೆಯು ಬೆಳ್ತಂಗಡಿ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಡಿ.10 ರಂದು ಯುವಜನ ಒಕ್ಕೂಟದ ಅಧ್ಯಕ್ಷರಾದ ಪ್ರಭಾಕರ ಶೆಟ್ಟಿ ಉಪ್ಪಡ್ಕ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.  ದಕ್ಷಿಣ ಕನ್ನಡ ಜಿಲ್ಲಾ ಯುವಜನ ಒಕ್ಕೂಟದ ಅಧ್ಯಕ್ಷರು ಹಾಗೂ  ರಾಜ್ಯ ಯುವಜನ ಒಕ್ಕೂಟದ ಕಾರ್ಯದರ್ಶಿ ಸುರೇಶ್ ರೈ ಸೂಡಿಮುಳ್ಳು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಜಿಲ್ಲಾ ಯುವಜನ ಒಕ್ಕೂಟದ ಗೌರವಾಧ್ಯಕ್ಷರಾದ ರಾಜೀವ್ ಸಾಲಿಯಾನ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ಥಳೀಯ ಕೆಲವೊಂದು  ಯುವಕ ಯುವತಿ ಹವ್ಯಾಸಿ ಮಂಡಳಿಗಳು  ಉತ್ತಮ ಚಟುವಟಿಕೆಗಳನ್ನು ಮಾಡುತ್ತಿದ್ದಾರೆ.
 ಸರಕಾರದ ನಿರ್ಲಕ್ಷ ಧೋರಣೆಯಿಂದ ಯುವಜನ ಮೇಳ ಹಾಗೂ ಇವುಗಳಿಗೆ ಪ್ರೋತ್ಸಾಹ ಕಡಿಮೆಯಾಗಿ ನಿಷ್ಕ್ರಿಯವಾಗಿದೆ. ಇದನ್ನು ಸಕ್ರೀಯಗೊಳಿಸಲು ಅನುಭವಿ ಮತ್ತು ಆಸಕ್ತರು ಮುಂದೆ ಬಂದು ಯುವಜನ ಒಕ್ಕೂಟವನ್ನು ಬಲಗೊಳಿಸಬೇಕಾಗಿದೆ ಎಂದರು. ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು  ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ರಮಾನಂದ ಸಾಲ್ಯಾನ್ ಮುಂಡೂರು, ಪ್ರಧಾನ ಕಾರ್ಯದರ್ಶಿ ಕೆ.ಸದಾಶಿವ ಹೆಗ್ಡೆ ಸಾವ್ಯ, ಕೋಶಾಧಿಕಾರಿ ಆನಂದ ಕೋಟ್ಯಾನ್ ಕುವೆಟ್ಟು, ಉಪಾಧ್ಯಕ್ಷರಾಗಿ  ರವಿ ಮುಂಡತ್ತೋಡಿ ಮತ್ತು ಅರುಣಾಕ್ಷಿ ಬದನಾಜೆ,  ಜೊತೆ ಕಾರ್ಯದರ್ಶಿಯಾಗಿ ಸ್ಮಿತೇಶ್ ಎಸ್ ಬಾರ್ಯ ಮತ್ತು ಜಗನ್ನಾಥ  ಪಣೆಜಾಲು,  ಸಂಘಟನಾ ಕಾರ್ಯದರ್ಶಿ ಸಾಂತಪ್ಪ ಮುಂಡಾಜೆ ಮತ್ತು ಜನಾರ್ಧನ ಕಾನರ್ಪ, ಸಾಂಸ್ಕ್ರತಿಕ ಕಾರ್ಯದರ್ಶಿ ಚಂದ್ರಹಾಸ ಬಳೆಂಜ, ಕ್ರೀಡಾ ಕಾರ್ಯದರ್ಶಿ ಜಗದೀಶ್ ಮೇಲಂತಬೆಟ್ಟು,  ಮಾಧ್ಯಮ ಕಾರ್ಯದರ್ಶಿ ಪ್ರಶಾಂತ್ ಮಚ್ಚಿನ ಇವರುಗಳನ್ನು ಆಯ್ಕೆ ಮಾಡಲಾಯಿತು ಹಾಗೂ ಜಿಲ್ಲಾ ಯುವಜನ ಒಕ್ಕೂಟಕ್ಕೆ ಪದ ನಿಮಿತ್ತವಾಗಿ  ತಾಲೂಕು ಒಕ್ಕೂಟದ ಅಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿ, ನಿರ್ದೇಶಕರಾಗಿ ವಿಜಯ್ ಗೌಡ ವೇಣೂರು, ಚಿದಾನಂದ ಇಡ್ಯಾ  ಇವರುಗಳನ್ನು ಆಯ್ಕೆ ಮಾಡಲಾಯಿತು.
 ರಜತ್ ಗೌಡ ಮಾಚಾರು,  ಅಕ್ಷಿತ್ ರಾಜ್ ಇಂದಬೆಟ್ಟು, ಸುಧಾಮಣಿ ಆರ್, ಸುಜನ್ ಕುಮಾರ್ ಪಜಿರಡ್ಕ, ಕೆ. ಮಹಮ್ಮದ್ ಪೆರಿಂಜೆ, ಸುಶೀಲ ಶೆಟ್ಟಿ ಮುಂಡೂರು, ನಾಗೇಶ್ ಆದೇಲು, ರಮೇಶ್ ಶಿಶಿಲ  ಇವರುಗಳನ್ನು ಕಾರ್ಯಕಾರಿ ಸದಸ್ಯರಾಗಿ ಆಯ್ಕೆ ಮಾಡಲಾಯಿತು.
 ಸಭೆಯಲ್ಲಿ ಬೇರೆ ಬೇರೆ ಯುವಕ, ಯುವತಿ ಮಂಡಲ ಮತ್ತು ಹವ್ಯಾಸಿ ಮಂಡಳಿಗಳಿಂದ ಭಾಗವಹಿಸಿದ  ಪ್ರತಿನಿಧಿಗಳು ಸಂಘಟನೆಗಳ  ಸಕ್ರಿಯತೆ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. 
ನೂತನ ಅಧ್ಯಕ್ಷರಾದ ರಮಾನಂದ ಸಾಲಿಯಾನ್ ತನ್ನ ಅನಿಸಿಕೆಗಳನ್ನು ವ್ಯಕ್ತಪಡಿಸಿ ಯುವಜನ ಒಕ್ಕೂಟವನ್ನು ಬಲಪಡಿಸಲು ಎಲ್ಲರ ಸಹಕಾರ ಕೋರಿದರು. 
ಸಭೆಯಲ್ಲಿ ತಾಲೂಕು ಒಕ್ಕೂಟದ ಮಾಜಿ ಅಧ್ಯಕ್ಷ ವಿಠಲ್ ಸಿ. ಪೂಜಾರಿ, ದ.ಕ. ಜಿಲ್ಲಾ ಒಕ್ಕೂಟದ ಉಪಾಧ್ಯಕ್ಷರಾದ ಸುಧಾಮಣಿ ಆರ್. ಉಪಸ್ಥಿತರಿದ್ದರು.
 ಕೆ ಸದಾಶಿವ ಹೆಗ್ಡೆ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು.
 ಯುವ ಸಬಲೀಕರಣ ಇಲಾಖೆ ಮತ್ತು ನೆಹರು ಯುವಕೇಂದ್ರ ಪ್ರತಿನಿಧಿ ಸಾಂತಪ್ಪ ಧನ್ಯವಾದವಿತ್ತರು. 

p>

LEAVE A REPLY

Please enter your comment!
Please enter your name here