ಬರೆಂಗಾಯ: ದ.ಕ.ಜಿ.ಪ.ಸ.ಉ.ಹಿ.ಪ್ರಾ ಶಾಲೆಯಲ್ಲಿ ಸಂಯುಕ್ತ ವಾರ್ಷಿಕೋತ್ಸವ

0

ಬರೆಂಗಾಯ: ದ.ಕ.ಜಿ ಪ .ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಬರೆಂಗಾಯ ಮತ್ತು ಜ್ಯೋತಿ ಹಳೆ ವಿದ್ಯಾರ್ಥಿ ಸಂಘ ಬರೆಂಗಾಯ ಇವುಗಳ ಸಂಯುಕ್ತ ವಾರ್ಷಿಕೋತ್ಸವವು ಡಿ.10 ರಂದು ಜರುಗಿತು.

ಕಾರ್ಯಕ್ರಮವನ್ನು ಶಾಸಕ ಹರೀಶ್ ಪೂಂಜ ಉದ್ಘಾಟಿಸಿದರು. ನಿಡ್ಲೆ ಗ್ರಾ.ಪಂ ಅಧ್ಯಕ್ಷ ಪ್ರವೀಣ್ ಹೆಬ್ಬಾರ್ ಅಧ್ಯಕ್ಷತೆಯನ್ನು ವಹಿಸಿದ್ದರು.

ವೇದಿಕೆಯಲ್ಲಿ ನಿಡ್ಲೆ ಗ್ರಾ.ಪಂ ಸದಸ್ಯರಾದ ವಿಜಯ, ಶೈಲಜಾ, ಮಾಜಿ ಸೈನಿಕರು ರಾಜಾ ಆಚಾರ್ ಮತ್ತು ಬಳೆಂಜ ಸರಕಾರಿ ಫ್ರೌಢ ಶಾಲಾ ಮುಖ್ಯೋಪಾಧ್ಯಾಯರು ಸುಲೋಚನಾ ಉಪಸ್ಥಿತರಿದ್ದರು.

ಬರೆಂಗಾಯ ಶಾಲಾ ವಾರ್ಷಿಕೋತ್ಸವ ಸಮಿತಿಯ ಅಧ್ಯಕ್ಷ ಅವಿನಾಶ್ ರಾವ್ ಬರೆಂಗಾಯ, ಬರೆಂಗಾಯ ಶಾಲಾ ಎಸ್ ಡಿ ಎಂಸಿ ಅಧ್ಯಕ್ಷರು ರುಕ್ಮಯ್ಯ ಪೂಜಾರಿ, ಬರೆಂಗಾಯ ಶಾಲಾ ಮುಖ್ಯ ಶಿಕ್ಷಕ ಗೋಪಾಲ್ , ಸರ್ವಸದಸ್ಯರು ಹಾಗೂ ಅಧ್ಯಾಪಕ ವೃಂದ , ಶಾಲಾ ವಿದ್ಯಾರ್ಥಿ ನಾಯಕ ಕೌಶಿಕ್ ಮತ್ತು ವಿದ್ಯಾರ್ಥಿ ವೃಂದ ಮತ್ತು ಜ್ಯೋತಿ ಹಳೆ ವಿದ್ಯಾರ್ಥಿ ಸಂಘ ಬರೆಂಗಾಯ ಶಾಲಾ ಅಧ್ಯಕ್ಷ ಶಿವರಂಜನ್ ಅಠವಳೆ ಹಾಗೂ ಸರ್ವಸದಸ್ಯರು ಭಾಗಿಯಾಗಿದ್ದರು.

LEAVE A REPLY

Please enter your comment!
Please enter your name here