ರಾಜ್ಯ ಮಟ್ಟಕ್ಕೆ ಆಯ್ಕೆಯಾದ ನೋಯಲ್ ರವರಿಗೆ ಶಿರ್ಲಾಲು ಸೈಂಟ್ ಮೇರಿಸ್ ಚರ್ಚ್ ವತಿಯಿಂದ ಅಭಿನಂದನಾ  ಕಾರ್ಯಕ್ರಮ

0

ಶಿರ್ಲಾಲು: 17 ರ  ವಯೋಮಿತಿಯ  ಬಾಲಕರ ಉದ್ದ ಜಿಗಿತ, ತ್ರಿವಿಧ ಜಿಗಿತ, 100 ಮೀಟರ್ ಓಟ  ಎಂಬ ವಿಭಾಗಗಳಲ್ಲಿ  ವಲಯ ಹಾಗೂ  ತಾಲೂಕು  ಮಟ್ಟಗಳಲ್ಲಿ  ಚಿನ್ನದ ಪದಕಗಳನ್ನು  ಹಾಗೂ ಚಾಂಪಿಯನ್ ಪಟ್ಟವನ್ನು ಪಡೆದು  ಜಿಲ್ಲಾ ಮಟ್ಟದಲ್ಲಿ  ತ್ರಿವಿಧ ಜಿಗಿತದಲ್ಲಿ ಕಂಚು ಹಾಗೂ ಉದ್ದ ಜಿಗಿತದಲ್ಲಿ  ಬೆಳ್ಳಿ ಪದಕವನ್ನು ಪಡೆದು  ರಾಜ್ಯಮಟ್ಟಕ್ಕೆ  ಆಯ್ಕೆಯಾದ ನೋಯಲ್  ಆರ್. ಪಿ ಇವರನ್ನು ಸೈಂಟ್ ಮೇರಿಸ್ ಚರ್ಚ್ ಶಿರ್ಲಾಲು ಇದರ ವತಿಯಿಂದ ಡಿ.11 ರಂದು ಸನ್ಮಾನಿಸಲಾಯಿತು.

ತೆಂಕಕಾರಂದೂರು ರಜಿ ಹಾಗೂ ಓಮನ  ದಂಪತಿಗಳ   ಪುತ್ರನಾದ ನೋಯಲ್ ಆರ್. ಪಿ ಇವರು  ಸೈಂಟ್ ಮೇರಿಸ್ ಚರ್ಚ್ ಶಿರ್ಲಾಲು ಇದರ ಸದಸ್ಯನಾಗಿದ್ದು  ದೇವಾಲಯದ  ಸರ್ವ ಸದಸ್ಯರ ಸಮ್ಮುಖದಲ್ಲಿ  ದೇವಾಲಯದ ಧರ್ಮ ಗುರುಗಳಾದ ವಂ. ಫಾ. ಬಿನೋಯಿ ಏ. ಜೆ ಹಾಗೂ ದೇವಾಲಯದ ವಿವಿಧ  ಸಂಘಟನೆಗಳ ಪದಾಧಿಕಾರಿಗಳ ನೇತೃತ್ವದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ನೋಯಲ್ ಆರ್ .ಪಿ ಇವರಿಗೆ ಸನ್ಮಾನ ಹಾಗೂ ಅಭಿನಂದನೆಯನ್ನು ಸಲ್ಲಿಸಿ ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಶುಭ ಹಾರೈಸಲಾಯಿತು.

LEAVE A REPLY

Please enter your comment!
Please enter your name here