ಬೆಳಾಲು : ಬೆಳಾಲು ಶ್ರೀ ಮಾಯ ಮಹಾದೇವ ದೇವಸ್ಥಾನದ ವಠಾರದಲ್ಲಿ ಡಿ.11 ರಂದು ಹಿಂದೂ ರಾಷ್ಟ್ರ ಜಾಗೃತಿ ಸಭೆ ನಡೆಯಿತು.
ಕಾರ್ಯಕ್ರಮದಲ್ಲಿ ಹಿಂದೂ ಜಾಗರಣ ವೇದಿಕೆ ಮಾತೃ ಸುರಕ್ಷಾ ಪ್ರಮುಖ್ ಬಿ.ಗಣರಾಜ್ ಭಟ್ ಕೆದಿಲ ಇವರು ಮಾತನಾಡುತ್ತ ಮತಾಂದರು ಹಿಂದೂ ಹೆಣ್ಣು ಮಕ್ಕಳಿಗೆ ಪ್ರೀತಿಯ ನಾಟಕವಾಡಿ ಅವರ ಫೋಟೋ ಕೇಳಿ ಪಡೆದುಕೊಂಡು ಅದನ್ನು ದುರುಪಯೋಗಕ್ಕೆ ಬಳಸಿಕೊಂಡು ಬ್ಲಾಕ್ ಮೇಲ್ ಮಾಡುವುದರ ಮೂಲಕ ಹಿಂದೂ ಹುಡುಗಿಯರ ಜೀವನದಲ್ಲಿ ಆಟವಾಡುತ್ತಾ ಲವ್ ಜಿಹಾದ್ ನ ಷಡ್ಯಂತ್ರಕ್ಕೆ ಸಿಲುಕಿಸುತ್ತಾರೆ.ಹಿಂದೂ ಸ್ತ್ರೀಯರಿಗೆ ಹಿಂದೂ ಧರ್ಮದ ಮಹತ್ವವನ್ನು ತಿಳಿಸಿಕೊಡುವುದು ಅತ್ಯಂತ ಅವಶ್ಯಕ ಇದೆ ಎಂದು ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಸನಾತನ ಸಂಸ್ಥೆಯ ಆನಂದ ಗೌಡರವರು ಮಾತನಾಡುತ್ತ ಹಿಂದುಗಳು ಧರ್ಮ ಶಿಕ್ಷಣದ ಅಭಾವದಿಂದಾಗಿ ಆತ್ಮಬಲವನ್ನು ವೃದ್ಧಿಮಾಡುವಲ್ಲಿ ವಂಚಿತರಾಗಿ ವೈಯಕ್ತಿಕ ಜೀವನದಲ್ಲಿ ಮತ್ತು ರಾಷ್ಟ್ರೀಯ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇದಕ್ಕೆ ಪರಿಹಾರೋಪಾಯವಾಗಿ ಪ್ರತಿಯೊಬ್ಬ ಹಿಂದೂಗಳು ಧಾರ್ಮಿಕ ಶಿಕ್ಷಣ ಪಡೆದುಕೊಂಡು ಯೋಗ್ಯ ಧರ್ಮಚರಣೆಯನ್ನು ಮಾಡಬೇಕು ಎಂದರು.
ಹಿಂದೂ ಜನಜಾಗೃತಿಯ ದಕ್ಷಿಣ ಕನ್ನಡ ಜಿಲ್ಲಾ ಸಮನ್ವಯಕರಾದಂತಹ ಸೌ. ಪವಿತ್ರ ಕುಡ್ವರವರು ಮಾತನಾಡುತ್ತಾ ಇಂದು ಹಲಾಲ್ ಜಿಹಾದ್ ಮೂಲಕ ಭಾರತದ ಎಲ್ಲ ಕ್ಷೇತ್ರದ ಮಾರುಕಟ್ಟೆಯ ಮೇಲೆ ಹಿಡಿತ ಸಾಧಿಸಿ ಭಾರತವನ್ನು ಇಸ್ಲಾಮಿಕರಣ ಮಾಡುವುದು ಇದರ ಮುಖ್ಯ ಉದ್ದೇಶವಾಗಿದೆ. ಅಲ್ಲದೆ ಹಲವಾರು ಜಿಹಾದ್ ಗಳ ಸಮಸ್ಯೆಗಳಿಗೆ ಒಂದೇ ಪರಿಹಾರ ಹಿಂದೂ ರಾಷ್ಟ್ರ ಅದಕ್ಕಾಗಿ ನಾವೆಲ್ಲರೂ ಕಟ್ಟಿಬದ್ದರಾಗೋಣ ಎಂದು ಕರೆ ನೀಡಿದರು.
ಮಾಯಾ ಮಹಾದೇವ ದೇವಸ್ಥಾನದ ವ್ಯವಸ್ಥಾಪಕ ಶೇಖರ ಗೌಡ ಕೊಲ್ಲಿಮಾರು ಕಾರ್ಯಕ್ರಮದ ಕುರಿತು ಮಾತನಾಡಿದರು.ಈ ಸಂದರ್ಭದಲ್ಲಿ ಓಡಿಲ್ನಾಳ ಮೈರಲ್ಕೆ ಬ್ರಹ್ಮ ಕಲಶೋತ್ಸವದ ಕಳಸ ಕೂಪನ್ ನ್ನು ಅಲ್ಲಿಯ ಧರ್ಮೋತ್ತಾ ನ ಟ್ರಸ್ಟ್ ಅಧ್ಯಕ್ಷ ಪಿ. ವೃಷಭ ಅರಿಗ ಮಾಯಾ ಮಹಾದೇವ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹೆಚ್. ಪದ್ಮ ಗೌಡರಿಗೆ ಹಸ್ತಾಂತರಿಸಿದರು.
ದೇವಸ್ಥಾನದ ವ್ಯವಸ್ಥೆಪನಾ ಸಮಿತಿ ಸದಸ್ಯರು, ಶ್ರೀ ಮಾಯಾ ಮಹೇಶ್ವರ ಭಜನಾ ಮಂಡಳಿ ಅಧ್ಯಕ್ಷ ಕೃಷ್ಣಪ್ಪ ಗೌಡ ಬೆರ್ಕೆಜಾಲು, ಕಾರ್ಯದರ್ಶಿ ಹರೀಶ ಆಚಾರ್ಯ, ಗೌರವ ಅಧ್ಯಕ್ಷ ವಸಂತ ಬಿ., ಪದಾಧಿಕಾರಿಗಳು, ಸದಸ್ಯರು, ಊರ ಮಹನೀಯರು ಉಪಸ್ಥಿತರಿದ್ದರು.ಸನಾತನ ಸಂಸ್ಥೆಯ ಕಾರ್ಯಕರ್ತರು ಸಹಕರಿಸಿದರು ಸನಾತನ ಸಂಸ್ಥೆಯ ಶಶಿಧರ್ ಪ್ರಾಸ್ತವಿಕವಾಗಿ ಮಾತನಾಡಿ ಹರೀಶ್ ನಿರೂಪಿಸಿದರು.