

ಮಡಂತ್ಯಾರು: ಸೇಕ್ರೆಡ್ ಹಾರ್ಟ್ ಕಾಲೇಜು ಮಡಂತ್ಯಾರು ಇಲ್ಲಿನ ವಾಣಿಜ್ಯ ಸಂಘ ಮತ್ತು ಕಛೇರಿ ನಿರ್ವಹಣೆ ಮತ್ತು ಅಭ್ಯಾಸ ವಿಭಾಗದ ಸಹಭಾಗಿತ್ವದಲ್ಲಿ ಉದ್ಯಮ ಶೀಲತೆ ಅಭಿವೃದ್ಧಿ ಬಗ್ಗೆ ವಿಚಾರ ಸಂಕೀರ್ಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಪ್ರಾಂಶುಪಾಲರಾದ ಡಾ.ಜೋಸೆಫ್ ಎನ್.ಎಂ ವಹಿಸಿದ್ದರು.ಕಾರ್ಯಕ್ರಮವನ್ನು ಸಂಸ್ಥೆಯ ಹಳೆಯ ವಿದ್ಯಾರ್ಥಿ ಹಾಗೂ ಲೆಕ್ಸಾ ಲೈಟಿಂನ್ಗ್ ಟೆಕ್ನಾಲೊಜಿ ಪ್ರೈವೇಟ್ ಲಿಮಿಟೆಡ್ ಇದರ ಸ್ಥಾಪಕರಾದ ರೊನಾಲ್ಡ್ ಸಿಲ್ವನ್ ಡಿ’ಸೋಜ ದೀಪವನ್ನು ಬೆಳಗಿಸಿ ಉದ್ಘಾಟಿಸಿದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಬಿದಿರು ಬಾನೆತ್ತರದಲ್ಲಿ ಬೆಳೆಯಲು ಎಲೆವೆಯಲ್ಲೇ ಮಣ್ಣಿನ ಅಡಿಯಲ್ಲಿ ತಯಾರಿಯನ್ನು ನಡೆಸುತ್ತದೆ. ಹಾಗೆಯೇ ನಮ್ಮ ಜೀವನದಲ್ಲಿ ನಾವು ಯಶಸ್ಸನ್ನು ಗಳಿಸಬೇಕಾದರೆ ವಿದ್ಯಾರ್ಥಿ ದೆಸೆಯಲ್ಲೇ ತಯಾರಿಯನ್ನು ನಡೆಸಬೇಕು.ಬೀಜ ಬಿತ್ತಿದ ಕೂಡಲೇ ಫಲ ನಿರೀಕ್ಷಿಸಲು ಸಾಧ್ಯವಿಲ್ಲ, ಹಾಗೆಯೇ ಜೀವನದಲ್ಲಿ ಯಶಸ್ಸು ಒಮ್ಮೆಲೇ ಬರಲು ಸಾಧ್ಯವಿಲ್ಲ. ತಾಳ್ಮೆ ಹಾಗೂ ಜೀವನ ನಿಷ್ಠೆ ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದ ಅವರು ಪ್ರಾಮಾಣಿಕವಾದ ಸತತ ಪ್ರಯತ್ನಗಳೇ ಭವಿಷ್ಯದ ಯಶಸ್ಸಿಗೆ ಬುನಾದಿ ಎಂದು ನುಡಿದರು.
ಕಾರ್ಯಕ್ರಮದಲ್ಲಿ ವಾಣಿಜ್ಯ ಸಂಘದ ಸಂಯೋಜಕ ಪ್ರೊ.ಎಮರ್ಸನ್ ಕ್ರಾಸ್ತ ಸಂಪನ್ಮೂಲ ವ್ಯಕ್ತಿಯ ಪರಿಚಯ, ಸಾಧನೆ ಮತ್ತು ಪ್ರಶಸ್ತಿಯ ಮಾಹಿತಿ ನೀಡಿ ಅವರನ್ನು ಸನ್ಮಾನಿಸಲಾಯಿತು.

. ವೇದಿಕೆಯಲ್ಲಿ ವಿದ್ಯಾರ್ಥಿ ಪ್ರತಿನಿಧಿಗಳಾದ ಮರಿಯಾ ಜೋಸೆಫ್, ಸಿಸ್ಟರ್ ಮೇರಿ, ಮೆಲಿಟ, ಯೂಸುಫ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕಾರ್ಯಕ್ರಮದ ಸಂಯೋಜಕ ಪ್ರೊ.ಜೋನ್ ಬಾಪ್ಟಿಸ್ಟ್ ಡಿ’ಸೋಜಾ ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿದರು. ಮರ್ಝುಕ್ ಮತ್ತು ತೇಜಶ್ರೀ ಕಾರ್ಯಕ್ರಮವನ್ನು ನಿರೂಪಿಸಿದರು. ವಾಣಿಜ್ಯ ವಿಭಾಗದ ಮುಖ್ಯಸ್ಥ ಪ್ರೊ. ವಿಂಸಿನ್ಟ್ ಡಿ’ಸೋಜಾ ಧನ್ಯವಾದ ಸಮರ್ಪಿಸಿದರು. ಸಭಾ ಕಾರ್ಯಕ್ರಮದ ನಂತರ ಆವಿಷ್ಕಾರ -2022 ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. 15 ತಂಡಗಳು ಭಾಗವಹಿಸಿದ್ದವು.