ಕೊಕ್ಕಡ ಕೇಚೋಡಿ ಎಂಬಲ್ಲಿ ಕತ್ತಿಯಿಂದ ಕಡಿದು, ಕೊಲೆಗೆ ಯತ್ನ ಆರೋಪ: ಆರೋಪಿಗಳನ್ನು ದೋಷ ಮುಕ್ತಗೊಳಿಸಿ ನ್ಯಾಯಾಲಯ ತೀರ್ಪು

0

ಕೊಕ್ಕಡ : ಕಳೆದ 5 ವರ್ಷಗಳ ಹಿಂದೆ ಕೊಕ್ಕಡ ಗ್ರಾಮದ ಕೇಚೋಡಿ ಎಂಬಲ್ಲಿ ಕತ್ತಿಯಿಂದ ಕಡಿದು, ಕೊಲೆಗೆ ಯತ್ನಿಸಿದರೆಂಬ ಆರೋಪದ ಪ್ರಕರಣದ ವಿಚಾರಣೆ ನಡೆಸಿದ
ದ.ಕ. ಜಿಲ್ಲಾ, ಮಂಗಳೂರು 3ನೇ ಹೆಚ್ಚುವರಿ ಸತ್ರ ನ್ಯಾಯಾಲಯ ಆರೋಪಿಗಳನ್ನು ದೋಷಯುಕ್ತ ಗೊಳಿಸಿ ತೀಪು೯ ನೀಡಿದೆ.

2017ರಲ್ಲಿ ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮದ ಕೆಜೋಡಿ ಮನೆ ನಿವಾಸಿಗಳಾದ ಈರಪ್ಪ ಗೌಡ ಮತ್ತು ಮಾದವ ಗೌಡ ಮತ್ತಿತರರು ಸೇರಿ ಕೊಕ್ಕಡದ ಕೆಂಪಕೋಡಿ ನಿವಾಸಿಗಳಾದ ಕುಂಞ, ಆನಂದ ಮತ್ತು ಪದ್ಮನಾಭ ರವರ ಮೇಲೆ ಕತ್ತಿಯಿಂದ ಕಡಿದು ಹಲ್ಲೆ ಮಾಡಿ ತೀವ್ರ ಸ್ವರೂಪದ ಗಾಯ ಉಂಟು ಮಾಡಿ, ಕೊಲೆಯ ಪ್ರಯತ್ನವನ್ನು ನಡೆಸಿರುತ್ತಾರೆ ಮತ್ತು ಅವಾಚ್ಯ ಶಬ್ದಗಳಿಂದ ಬೈದಿರುತ್ತಾರೆ ಮತ್ತು ನಿಮ್ಮನ್ನು ಮುಗಿಸದೆ ಬಿಡುವುದಿಲ್ಲ ಎಂದು ಜೀವ ಬೇದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಧಮ೯ಸ್ಥಳ ಠಾಣೆಯಲ್ಲಿ ದೂರು ನೀಡಲಾಗಿತ್ತು. ಠಾಣೆಯಲ್ಲಿ ಕಲಂ 307 ಸಹಿತ ಕೇಸು ದಾಖಲಿಸಿದ ಧರ್ಮಸ್ಥಳ ಉಪನಿರೀಕ್ಷರು ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು.
ದ.ಕ. ಜಿಲ್ಲಾ, ಮಂಗಳೂರು 3ನೇ ಹೆಚ್ಚುವರಿ ಸತ್ರ ನ್ಯಾಯಾಧೀಶರು ವಿಚಾರಣೆ ನಡೆಸಿ, ಆರೋಪಿತರ ವಿರುದ್ಧ ಅಪಾದಿಸಿದ ಆರೋಪಗಳನ್ನು ಸಾಭೀತುಪಡಿಸಲು ಸಾಕ್ಷಿಗಳ ಕೊರತೆ ಇರುವುದು ಕಂಡು ಬಂದಿದೆ ಎಂದು ತೀರ್ಮಾನಿಸಿ ಆರೋಪಿಗಳನ್ನು ಭಾರತೀಯ ದಂಡ ಸಂಹಿತೆ ಕಲಂ 341, 504, 324, 326, 307 ಜೊತೆ 34 ಅಪರಾಧಗಳಿಂದ ದೋಷಮುಕ್ತಗೊಳಿಸಿ ಬಿಡುಗಡೆಗೊಳಿಸಿರುತ್ತಾರೆ.

ಆರೋಪಿಗಳ ಪರವಾಗಿ ಬೆಳ್ತಂಗಡಿ ನ್ಯಾಯಾವಾದಿಗಳಾದ ಶಿವಯ್ಯ ಎಸ್‌.ಎಲ್‌., ಸುಜಾತ ಮತ್ತು ಕೃಪಾಮಣಿ ರವರು ವಾದಿಸಿದ್ದರು.

LEAVE A REPLY

Please enter your comment!
Please enter your name here