ವೇಣೂರು ಸೂರ್ಯ-ಚಂದ್ರ ಜೋಡುಕರೆ ಬಯಲು ಕಂಬಳ: ಕಂಬಳ ಕೂಟ ನಿರಾತಂಕವಾಗಿ ಮುಂದುವರಿಯಲಿ: ರಮಾನಾಥ ರೈ

0


ವೇಣೂರು: ಕಂಬಳ ಹಿಂಸೆಯ ಕೂಟ ಎಂಬ ಮಾತಿತ್ತು. ಅನುವಂಶಿಕವಾಗಿ, ಪರಂಪರಗತವಾಗಿ ಬಂದಿದ್ದ ಕಂಬಳ ಕೂಟವನ್ನು ಅಹಿಂಸೆಯ ಕೂಟ ಎಂದು ಸಾಬೀತುಪಡಿಸಲು ಹೋರಾಟ ಮಾಡಬೇಕಾಯಿತು. ಸೂರ್ಯ-ಚಂದ್ರ ಇರುವಷ್ಟು ದಿನ ವೇಣೂರು ಕಂಬಳ ಕೂಟ ಯಶಸ್ವಿಯಾಗಿ ಮುಂದುವರಿಯಲಿ, ಸಂತೋಷದ ಕೂಟವಾಗಿ ಮುಂದುವರಿಯಲಿ ಎಂದು ಮಾಜಿ ಸಚಿವ ಬಿ. ರಮಾನಾಥ ರೈ ಹೇಳಿದರು.

ಜಿಲ್ಲೆಯ ಇತಿಹಾಸ ಪ್ರಸಿದ್ಧವಾದ ವೇಣೂರು ಪೆರ್ಮುಡ ಹೊನಲು ಬೆಳಕಿನ 30ನೇ ವರ್ಷದ ಸೂರ್ಯ-ಚಂದ್ರ ಜೋಡುಕರೆ ಬಯಲು ಕಂಬಳದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸ್ಥಗಿತಗೊಂಡಿದ್ದ ಬಂಟ್ವಾಳದ ಮುಡೂರು-ಪಡೂರು ಕಂಬಳ ಕೂಟಕ್ಕೆ ದೇವಸಪಡೂರುನಲ್ಲಿ ಜಾಗ ಗುರುತಿಸಿ 24 ದಿನದಲ್ಲೇ ಕರೆ ನಿರ್ಮಿಸಲಾಗಿದೆ. ಮುಂಬರುವ ಮಾ. 4ಕ್ಕೆ ಯಶಸ್ವಿಯಾಗಿ ಮಾಡಲು ಇರಾದೆ ಇದ್ದು, ಬಂಟ್ವಾಳದ ಕಂಬಳ ಕೂಟ ಎಂದು ಹೆಸರಿಡಲಾಗಿದೆ ಎಂದು ರೈ ಹೇಳಿದರು.

ಕಂಬಳ ಸಮಿತಿ ಗೌರವಾಧ್ಯಕ್ಷ, ಮಾಜಿ ಶಾಸಕ ಕೆ. ವಸಂತ ಬಂಗೇರ ಅಧ್ಯಕ್ಷತೆ ವಹಿಸಿ, ಸಾಂಸ್ಕೃತಿಕ ಕ್ರೀಡೆಯಾಗಿರುವ ಕಂಬಳಕ್ಕೆ ಅಡ್ಡಿ ಆತಂಕ ಸಲ್ಲದು. ನಿರಾತಂಕವಾಗಿ ನಡೆಯಲು ಸರಕಾರ ಶ್ರಮಿಸಬೇಕು ಎಂದರು.

ಮಾಜಿ ಸಚಿವ ಗಂಗಾಧರ ಗೌಡ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ, ನಾರಾಯಣಗುರು ವಿಚಾರ ವೇದಿಕೆ ಅಧ್ಯಕ್ಷ ಸತ್ಯಜಿತ್ ಸುರತ್ಕಲ್, ವಿಧಾನ ಪರಿಷತ್ ಶಾಸಕ ಕೆ. ಹರೀಶ್ ಕುಮಾರ್, ಅವಿಭಜಿತ ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಎರ್ಮಾಲ್ ರೋಹಿತ್ ಹೆಗ್ಡೆ, ಬೆಳ್ತಂಗಡಿ ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಜನ್ ಜಿ. ಗೌಡ, ಸರಪಾಡಿ ಜಿ.ಪಂ. ಮಾಜಿ ಸದಸ್ಯ ಪದ್ಮಶೇಖರ ಜೈನ್, ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕಂ, ಶೈಲೇಶ್ ಕುಮಾರ್ ಕುರ್ತೋಡಿ, ನವೋದಯ ಗ್ರಾ.ವಿ.ಚಾ. ಟ್ರಸ್ಟ್‌ನ ಟ್ರಸ್ಟಿ ಸುನಿಲ್ ಕುಮಾರ್ ಬಜಗೋಳಿ, ಕಾಶಿಪಟ್ಣ ಗ್ರಾ.ಪಂ. ಅಧ್ಯಕ್ಷೆ ಶಿಲ್ಪಾ ಕಾಶಿಪಟ್ಣ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ರಾಜಶೇಖರ ಶೆಟ್ಟಿ, ಪ್ರಮುಖರಾದ ಸದಾನಂದ ಶೆಟ್ಟಿ ಬಂಟ್ವಾಳ, ನಿತೀಶ್ ಜೈನ್, ಪ್ರಮೋದ್ ಬಜಗೋಳಿ, ಸುಧಾಕರ ಶೆಟ್ಟಿ, ಜಯಶೀಲ, ಪ್ರವೀಣ್ ಪಿಂಟೋ, ಸುಧೀರ್ ಭಂಡಾರಿ, ನವೀನ್ ಪೂಜಾರಿ ಪಚ್ಚೇರಿ, ಓಬಯ್ಯ ಆರಂಬೋಡಿ, ಎಂಜಿನಿಯರ್ ಪ್ರದೀಪ್, ಕುಕ್ಕೇಡಿ ಹಾಲು ಉ.ಸ. ಸಂಘದ ಅಧ್ಯಕ್ಷ ನಿರ್ಮಲ್ ಕುಮಾರ್, ಉಪಾಧ್ಯಕ್ಷ ಗಣೇಶ್ ಕುಕ್ಕೇಡಿ, ಪ್ರವೀಣ್ ಫೆರ್ನಾಂಡಿಸ್, ಅನಿಲ್ ಪೈ, ಪ್ರಜ್ವಲ್ ಜೆ., ವಂದನಾ ಭಂಡಾರಿ ಮತ್ತಿತರರು ಉಪಸ್ಥಿತರಿದ್ದರು.

ಇತ್ತೀಚೆಗೆ ನಿಧನರಾದ ಇರುವೈಲು ಪಾಣಿಲ ಬಾಡ ಪೂಜಾರಿಯವರ ಆತ್ಮಕ್ಕೆ ಮೌನಪ್ರಾರ್ಥನೆ ಮೂಲಕ ಚಿರಶಾಂತಿ ಕೋರಲಾಯಿತು.
ಸಮ್ಮಾನ:
ಪ್ರತಿಷ್ಠಿತ ಮಾಸ್ ಇದರ ನಿರ್ದೇಶಕರಾಗಿ ಆಯ್ಕೆಯಾದ ಸತೀಶ್ ಕೆ. ಕಾಶಿಪಟ್ಣ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹೊನ್ನಯ್ಯ ಕಾಟಿಪಳ್ಳ, ಕಂಬಳ ಕ್ಷೇತ್ರದ ಸಾಧಕರಾದ ಸತೀಶ್ ದೇವಾಡಿಗ ಅರ್ವ, ರವಿಕುಮಾರ್ ಅಳದಂಗಡಿ, ಶ್ರೀಹರಿ ಎರೆಂಜರ್‍ಸ್‌ನ ಜಗದೀಶ್, ಕಬ್ಬಡಿ ಆಟಗಾರ ಸುಶಾಂತ್ ಶೆಟ್ಟಿ ಅವರನ್ನು ಸಮ್ಮಾನಿಸಲಾಯಿತು.

ಕಂಬಳ ಸಮಿತಿ ಅಧ್ಯಕ್ಷ ನಿತೀಶ್ ಕೋಟ್ಯಾನ್ ಸ್ವಾಗತಿಸಿ, ಕಾರ್ಯಾಧ್ಯಕ್ಷ ಶೇಖರ ಕುಕ್ಕೇಡಿ ವಂದಿಸಿದರು. ಸತೀಶ್ ಹೊಸ್ಮಾರು ನಿರೂಪಿಸಿದರು.

LEAVE A REPLY

Please enter your comment!
Please enter your name here