ಮತದಾರರ ಪಟ್ಟಿಯಲ್ಲಿ ಅವ್ಯವಹಾರ: ಸೂಕ್ತ ತನಿಖೆಗೆ ಕಾಂಗ್ರೆಸ್ ವಕ್ತಾರರಿಂದ ತಹಶೀಲ್ದಾರ್ ಗೆ ಮನವಿ

0

ಬೆಳ್ತಂಗಡಿ : ಬೆಂಗಳೂರಿನಲ್ಲಿ ಚಿಲುಮೆ ಎಂಬ ಖಾಸಗಿ ಸಂಸ್ಥೆಯ ಮೂಲಕ ಮತದಾರರ ಪಟ್ಟಿ ಪರಷ್ಕರಣೆಯ ಹೆಸರಲ್ಲಿ ಬೂತ್‌ ಮಟ್ಟದ ಚುನಾವಣಾಧಿಕಾರಿಗಳ ನಕಲಿ ಸೋಗಿನಲ್ಲಿ ಆದ ಅವ್ಯವಹಾರದಂತೆಯೇ ಬೆಳ್ತಂಗಡಿ ತಾಲೂಕಿನಲ್ಲಿಯೂ ಸಹ ಮತದಾರರ ಪಟ್ಟಿ ಪರಿಷ್ಕರಣೆ ಮತ್ತು ಮತದಾರರ ಜಾಗೃತಿ ಹೆಸರಲ್ಲಿ ವೋಟರ್ ಐಡಿ ಅವ್ಯವಹಾರ ನಡೆದಿರುವ ಸಂಶಯದ ಕುರಿತಂತೆ ನ.30 ರಂದು ಬೆಳ್ತಂಗಡಿಯ ಚುನಾವಣಾಧಿಕಾರಿ ತಹಶಿಲ್ದಾರರನ್ನು ಭೇಟಿ ಮಾಡಿ ಈ ಬಗ್ಗೆ ಸೂಕ್ತ ತನಿಖೆ ನಡೆಸಿ ತಪ್ಪುಗಳು ನಡೆದಿದ್ದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್ ಮನವಿ ನೀಡಿದರು .

ಮತದಾರರ ಪಟ್ಟಿಯಿಂದ ಅರ್ಹ ಮತದಾರರ ಹೆಸರನ್ನು ಲೋಪ ಪಡಿಸಿದ್ದಲ್ಲಿ ಆ ಬಗ್ಗೆ ಪ್ರತಿಭಟನೆ ಅನಿವಾರ್ಯವಾಗಿದೆ. ಅಲ್ಲದೆ ಹೊಸ ಸೇರ್ಪಡೆಗೊಂಡಿರುವ ಪಟ್ಟಿ ಮತ್ತು ತೆಗೆಯಲ್ಪಟ್ಟವರ ಪಟ್ಟಿ ನೀಡುವಂತೆ ಅವರಲ್ಲಿ ಕೇಳಿದಾಗ ಅವರು ನಿರಾಕರಿಸಿ ಸದ್ರಿ ಪಟ್ಟಿಯನ್ನು ಕೇಳಿದಾಗ ತಹಸೀಲ್ದಾರ್ ಜಿಲ್ಲಾಧಿಕಾರಿಗಳ ಕಚೇರಿಯಿಂದ ಪಡಕೊಳ್ಳುವಂತೆ ಹಿಂಬರಹ ನೀಡಿರುತ್ತಾರೆ.ಇವರೊಂದಿಗೆ ನ್ಯಾಯವಾದಿ ಮನೋಹರ್ ಕುಮಾರ್ ಇಳಂತಿಲ, ಪ್ರಮುಖರಾದ ರಾಘವೇಂದ್ರ, ಸುಧೀರ್ ದೇವಾಡಿಗ ಮತ್ತಿತರರು ಉಪಸ್ಥಿತರಿದ್ದರು.

p>

LEAVE A REPLY

Please enter your comment!
Please enter your name here