ಎಸ್.ಕೆ.ಎಸ್.ಎಸ್.ಎಫ್ ಅಜ್ಜಾವರ ಕ್ಲಸ್ಟರ್: ಜನ ಸಂಚಲನ

0

 

ನವೆಂಬರ್ 01 ಕನ್ನಡ ರಾಜ್ಯೋತ್ಸವದ ಅಂಗವಾಗಿ ಮಾದಕ ವ್ಯಸನದ ವಿರುದ್ದ ಜನಸಂಚಲನ ಕಾರ್ಯಕ್ರಮವು SKSSF ಅಜ್ಜಾವರ ಕ್ಲಸ್ಟರ್ ವತಿಯಿಂದ ಅಬ್ದುಲ್ ಖಾದರ್ ನೆಲ್ಯಡ್ಕ ರವರ ಅಧ್ಯಕ್ಷತೆಯಲ್ಲಿ
ಅಡ್ಕ ಜಂಕ್ಷನ್ ನಲ್ಲಿ ನಡೆಯಿತು. ಸ್ಥಳೀಯ ಮದರಸ ಸದರ್ ಮುಹಲ್ಲಿಮರಾದ ಸಿ ಕೆ ಅಬ್ದುಲ್ಲ ಹಾಮಿದಿ ಉಸ್ತಾದರು ದುಆ ನೆರವೇರಿಸಿದರು. ಶ್ರೀ ಕ್ಷೇತ್ರ ಮೇನಾಲ ಇದರ ಗುರುಗಳಾದ ಪದ್ಮನಾಭ ಸ್ವಾಮೀಜಿಯವರು ಕರಪತ್ರ ಬಿಡುಗಡೆಗೊಳಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟನೆಗೈದು ಮಾತನಾಡಿದರು.


ಎಸ್.ಕೆ.ಎಸ್.ಎಸ್.ಎಫ್ ಸುಳ್ಯ ವಲಯ ಅಧ್ಯಕ್ಷರಾದ ಅಬ್ದುಲ್ಲ ಫೈಝಿ ಪೈಂಬಚ್ಚಾಲ್ ಮಾದಕ ವ್ಯಸನ ವಿರುದ್ಧ ಪ್ರತಿಜ್ಞಾ ವಿಧಿ ಬೋಧಿಸಿದರು.
ಭಾಷಣಗಾರರಾಗಿ ಆಗಮಿಸಿದಅಹ್ಮದ್ ನಹೀಂ ಪೈಝಿ ಮುಕ್ವೆ ಮಾತನಾಡಿ ಸಮಾಜದ ಸ್ವಾಸ್ಥ್ಯ ಕೆಡಿಸುವ ಮಾದಕ ವ್ಯಸನವನ್ನು ಎಲ್ಲರೂ ಒಟ್ಟಾಗಿ ಪ್ರತಿರೋಧಿಸಬೇಕು ಎಂದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಅಜ್ಜಾವರ ಗ್ರಾ.ಪಂ ಸದಸ್ಯರಾದ ರಾಹುಲ್, ಅಲೆಟ್ಟಿ ಗ್ರಾ.ಪಂ ಸದಸ್ಯರಾದ ಧರ್ಮಪಾಲ ಕೊಯಿಂಗಾಜೆ, ಸುಳ್ಯ ತಾಲೂಕು ಜಂಇಯತುಲ್ ಫಲಾಹ್ ಅಧ್ಯಕ್ಷರಾದ ಹಸೈನಾರ್ ಹಾಜಿ ಗೋರಡ್ಕ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಅಹ್ವಾನಿತ ಅತಿಥಿಗಳು, SKSSF ಅಜ್ಜಾವರ ಕ್ಲಸ್ಟರ್ ವ್ಯಾಪ್ತಿಯ ಅಜ್ಜಾವರ, ಅಡ್ಕ ಇರುವಂಬಳ್ಳ, ಮೇನಾಲ ಅಜ್ಜಾವರ, ಪೈಂಬಚ್ಚಾಲ್ ಮತ್ತು ಮಂಡೆಕೋಲು ಶಾಖೆಯ ಕಾರ್ಯಕರ್ತರು,ಸಮಸ್ತ ಅಭಿಮಾನಿಗಳು ಮತ್ತು ಕನ್ನಡ ಅಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕ್ಲಸ್ಟರ್ ಪ್ರಧಾನ ಕಾರ್ಯದರ್ಶಿ ಫೈಝಲ್ ಮಂಡೆಕೋಲು ಸ್ವಾಗತಿಸಿ, ಸಂಘಟನಾ ಕಾರ್ಯದರ್ಶಿ ಸಿದ್ದೀಕ್ ಅಡ್ಕ ನಿರೂಪಿಸಿದರು.

LEAVE A REPLY

Please enter your comment!
Please enter your name here