ಮದರಸ ಧಾರ್ಮಿಕ, ನೈತಿಕ ಪ್ರಜ್ಞೆ ಮೂಡಿಸುವ ಕೇಂದ್ರ : ಕಡಲುಂಡಿ ತಂಙಳ್

0

 

 ಮುಹಿಯುದ್ದೀನ್ ಜುಮಾ ಮಸೀದಿ ಹಾಗೂ ಖಿದ್ಮತುಲ್ ಇಸ್ಲಾಂ ಜಮಾಅತ್ ಕಮಿಟಿ ನೇತೃತ್ವದಲ್ಲಿ ನಿರ್ಮಾಣಗೊಂಡ ಚೆನ್ನಾವರ ಸಿರಾಜುಲ್ ಉಲೂಂ ನೂತನ ಮದ್ರಸ ಕಟ್ಟಡ ಉದ್ಘಾಟನೆ ಅ.27 ರಂದು ನಡೆಯಿತು. ಸಯ್ಯದ್ ಬದರುಸ್ಸಾದಾತ್ ಇಬ್ರಾಹಿಂ ಖಲೀಲ್ ಅಲ್ ಬುಖಾರಿ ತಂಗಳ್ ಕಡಲುಂಡಿಯವರು ಮದ್ರಸ ಕಟ್ಟಡವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಮದರಸ ಎಂಬುವುದು ಧಾರ್ಮಿಕ, ನೈತಿಕ ಪ್ರಜ್ಞೆಯನ್ನು ಬೋಧಿಸುವ ಶಿಕ್ಷಣ ಕೇಂದ್ರವಾಗಿದ್ದು ಮದ್ರಸಗಳಲ್ಲಿ ಕಲಿತ ಮಕ್ಕಳು ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ಬಾಳುತ್ತಾರೆ ಎಂದು ಹೇಳಿದರು.

 

ಸಂಜೆ ನಡೆದ ಸಭಾ ಕಾರ್ಯಕ್ರಮದಲ್ಲಿ ಚೆನ್ನಾವರ ಮಸೀದಿ ಮುದರ್ರೀಸ್ ಸಯ್ಯದ್ ಅಬ್ದುಲ್ ಲತೀಫ್ ಬಾಅಲವಿ ತಂಗಳ್ ಅಲ್-ಕಾಮಿಲ್ ಸಖಾಫಿ ಅಧ್ಯಕ್ಷತೆ ವಹಿಸಿ ದುವಾ ನಿರ್ವಹಿಸಿದರು.
ಸಯ್ಯದ್ ಹಾಮಿದ್ ತಂಜಳ್ ಮಹಿಮ್ಮಾತ್ ಕಾರ್ಯಕ್ರಮ ಉದ್ಘಾಟಿಸಿದರು.

ವೇದಿಕೆಯಲ್ಲಿ ಉಪಸ್ಥಿತರಿದ್ದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ,ದ.ಕ ಜಿಲ್ಲಾ ವಕ್ಸ್ ಬೋರ್ಡ್ ಅಧ್ಯಕ್ಷ ನಾಸಿರ್ ಲಕ್ಕಿಸ್ಟಾರ್, ಸುಳ್ಯ ಕೇಂದ್ರ ಜುಮಾ ಮಸೀದಿ ಅಧ್ಯಕ್ಷ ಹಾಜಿ ಮುಸ್ತಫಾ ಜನತಾ ಕೆ ಎಂ,ಕೊಡಗು ವಕ್ಸ್ ಬೋರ್ಡ್ ಮಾಜಿ ಚೇರ್‌ಮೆನ್ ಹಮೀದ್ ಮಡಿಕೇರಿ ಈ ಸಂದರ್ಭದಲ್ಲಿ ಮಾತನಾಡಿ ಶುಭ ಹಾರೈಸಿದರು.
ಪ್ರಾಸ್ತಾವಿಕ ಮಾತುಗಳನ್ನಾಡಿದ ಗಫೂರ್ ಸಾಹೇಬ್ ಪಾಲ್ತಾಡ್‌ರವರು ಇಂದು ನಮಗೆಲ್ಲಾ ಸಂತಸದ ದಿನವಾಗಿದ್ದು ಎಲ್ಲರ ಪರಿಶ್ರಮದ ಫಲವಾಗಿ ಸುಮದರವಾದ ಮದ್ರಸ ಚೆನ್ನಾರ್‌ನಲ್ಲಿ ನಿರ್ಮಾಣವಾಗಿದೆ ಎಂದರು.
ಸಂಜೆ ನಡೆದ ಕಾರ್ಯಕ್ರಮದಲ್ಲಿ ಸಯ್ಯದ್ ಕುಂಞಕೋಯ ತಂಙಳ್ ಸಅದಿ ನಾವೂರು ಸುಳ್ಯ, ಇಸ್ಮಾಯಿಲ್ ತಂಗಳ್ ಮಾಡಾವು, ಚೆನ್ನಾವರ ಮಸೀದಿ ಮಾಜಿ ಅಧ್ಯಕ್ಷ ಪಿ.ಎ ಉಸ್ಮಾನ್ ಹಾಜಿ, ಉದ್ಯಮಿಗಳಾದ ಅಬೂಬಕ್ಕರ್ ಹಾಜಿ ಮಂಗಳ, ಯೂಸುಫ್ ಗೌಸಿಯಾ ಸಾಜ ಯೂಸುಫ್ ಹಾಜಿ ಕೈಕಾರ, ಖಾದರ್ ಹಾಜಿ ಬಾಯಂಬಾಡಿ, ಹಾಜಿ ಅಬ್ದುಲ್ ಖಾದರ್ ಮೇರ್ಲ, ಇಸಾಕ್ ಹಾಜಿ ಪಾಜಪಳ್ಳ, ಮಮ್ಮಾಲಿ ಹಾಜಿ ಬೆಳ್ಳಾರೆ, ಕೆ.ಎಂ ಹನೀಫ್ ಮಾಡಾವು, ಬಶೀರ್ ವಿಟ್ಲ, ಬಶೀರ್ ಇಂದ್ರಾಜೆ, ಚೆನ್ನಾರ್ ಮಸೀದಿಯ ಮಾಜಿ ಅಧ್ಯಕ್ಷ ಸಾಬು ಸಾಹೇಬ್ ಪಾಲ್ತಾಡ್, ಶಾಕಿರ್ ಹಾಜಿ ಮಿತ್ತೂರು, ಪಾಲ್ತಾಡ್ ಮಸೀದಿ ಅಧ್ಯಕ್ಷ ಹಾಜಿ ಮೊಯ್ದಿನ್ ಕುಂಞ, ಚೆನ್ನಾರ್ ಸದರ್ ಮುಅಲ್ಲಿಂ ಮಹಮ್ಮದ್ ಅಲಿ ಸಖಾಫಿ, ಚೆನ್ನಾ‌ ಮಸೀದಿ ಆಡಳಿತ ಕಮಿಟಿ ಅಧ್ಯಕ್ಷ ಮಹಮ್ಮದ್ ಶಾಫಿ ಚೆನ್ನಾರ್, ಮದ್ರಸ ನಿರ್ಮಾಣ ಸಮಿತಿ ಅಧ್ಯಕ್ಷ ಹಸೈನಾರ್ ಓಟಚಾರಿ, ಕಾರ್ಯದರ್ಶಿ ಅಬ್ಬಾಸ್ ಪೆರ್ಜಿ, ಇಬ್ರಾಹಿಂ ಕುಂಬಮೂಲೆ, ಆಹಾರ ನಿರೀಕ್ಷಕ ಮಹಮ್ಮದ್ ರಫೀಕ್ ಮತ್ತಿತರರು ಉಪಸ್ಥಿತರಿದ್ದರು.


ಸಭಾ ಕಾರ್ಯಕ್ರಮದ ಮೊದಲು ಗುರು ಶಿಷ್ಯ ಸಂಗಮ ಕಾರ್ಯಕ್ರಮ ನಡೆಯಿತು. ಚೆನ್ನಾವರ ಮಸೀದಿ ಆಡಳಿತ ಕಮಿಟಿ ಪದಾಧಿಕಾರಿಗಳಾದ ಇಸ್ಮಾಯಿಲ್ ಕಾನಾವು, ಹನೀಫ್ ಕುಂಡಡ್ಕ ಜಮಾಲ್ ಸಿ.ವೈ, ಶರೀಫ್ ಕುಂಡಡ್ಕ ಅಬ್ದುರಹ್ಮಾನ್ ಪಾಲ್ತಾಡ್ ಹಾಗೂ ಜಮಾಅತರು ಸಹಕರಿಸಿದರು.
ದ.ಕ ಜಿಲ್ಲಾ ವಕ್ಸ್ ಬೋರ್ಡ್ ಉಪಾಧ್ಯಕ್ಷ ಅಬ್ದುರಹ್ಮಾನ್ ಮೊಗರ್ಪಣೆ ಸ್ವಾಗತಿಸಿ,ಇಕ್ಬಾಲ್ ಪಾಲ್ತಾಡ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಗೌರವಾರ್ಪಣೆ:

ಕೆಪಿಸಿಸಿ ಪ್ರ.ಕಾರ್ಯದರ್ಶಿ ಇನಾಯತ್ ಅಲಿ, ವಕ್ಷ ಜಿಲ್ಲಾಧ್ಯಕ್ಷ ನಾಸಿರ್ ಲಕ್ಕಿಸ್ಟಾರ್, ಪೆರುವಾಜೆ ಗ್ರಾ.ಪಂ ಸದಸ್ಯ ಸಚಿನ್‌ರಾಜ್ ಶೆಟ್ಟಿ, ಇಂಜಿನಿಯರ್ ಶಮೀರ್ ಬಯಂಬಾಡಿ, ಮಹಮ್ಮದ್ ಗಟ್ಟಮನೆ ಮೊದಲಾದವರನ್ನು ಸನ್ಮಾನಿಸಲಾಯಿತು.
ಧಾರ್ಮಿಕ ಪ್ರಭಾಷಣ:

ಹಾರಿಸ್ ಸಿಹಾಬ್ ತಂಂಞಳ್ ಪಾಣಕ್ಕಾಡ್ ದುವಾಶೀರ್ವಚನ ನೀಡಿದರು. ಆಶಿಕ್ ದಾರಿಮಿ ಆಲಪ್ಪುಝ ಹಾಗೂ ಪೇರೋಡ್ ಮುಹಮ್ಮದ್ ಅಝರಿ ಮುಖ್ಯ ಪ್ರಭಾಷಣ ನಡೆಸಿದರು.

LEAVE A REPLY

Please enter your comment!
Please enter your name here