‘ಸುದ್ದಿ’ ದೀಪಾವಳಿ ವಿಶೇಷಾಂಕ ಬಿಡುಗಡೆ ಕಾರ್ಯಕ್ರಮ

0

 

ಸುಳ್ಯ ಸುದ್ದಿ ಬಿಡುಗಡೆ ವತಿಯಿಂದ ಹೊರತರಲಾಗಿರುವ ‘ಸುದ್ದಿ ದೀಪಾವಳಿ ವಿಶೇಷಾಂಕ’ ಬಿಡುಗಡೆ ಸಮಾರಂಭ ಇಂದು (ಅ. 23) ಸುಳ್ಯದ ರಂಗ ಮಯೂರಿ ಕಲಾ ಶಾಲೆಯಲ್ಲಿ ನಡೆಯಿತು.

ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ. ಯುಪಿ. ಶಿವಾನಂದ, ರಾಜ್ಯ ಮೀನುಗಾರಿಕಾ ನಿಗಮದ ಅಧ್ಯಕ್ಷ ಎ.ವಿ. ತೀರ್ಥರಾಮ, ಸರ್ಕಲ್ ಇನ್ಸ್‌ಪೆಕ್ಟರ್ ನವೀನ್‌ಚಂದ್ರ ಜೋಗಿ, ದ್ವಾರಕಾ ಹೋಟೆಲ್ ಮಾಲಕ ವಸಂತ ರಾವ್ ನಾವೂರು, ಉದ್ಯಮಿ ಚಂದ್ರಶೇಖರ ಸೆಂಚುರಿ, ಲಯನ್ಸ್ ಕ್ಲಬ್ ಅಧ್ಯಕ್ಷೆ ಶ್ರೀಮತಿ ರೂಪಾ ಜೆ. ರೈ, ಮುಖ್ಯ ಅತಿಥಿಗಳಾಗಿ ಆಗಮಿಸಿ ದೀಪಾವಳಿ ಸಂಚಿಕೆಯನ್ನು ಬಿಡುಗಡೆಗೊಳಿಸಿ, ಶುಭ ಹಾರೈಸಿದರು. ಬೆಳ್ತಂಗಡಿ ಸುದ್ದಿ ಪತ್ರಿಕೆಯ ಸಿ.ಇ.ಒ. ಸಿಂಚನಾ ಊರುಬೈಲು, ಸುಳ್ಯ ಸುದ್ದಿ ಬಿಡುಗಡೆಯ ಮುಖ್ಯ ವರದಿಗಾರ ಹರೀಶ್ ಬಂಟ್ವಾಳ್, ದೀಪಾವಳಿ ವಿಶೇಷಾಂಕದ ಕಾರ್ಯ ನಿರ್ವಾಹಕ ಸಂಪಾದಕ ದುರ್ಗಾಕುಮಾರ್ ನಾಯರ್‌ಕೆರೆ, ದೀಪಾವಳಿ ಸಂಪಾದಕ ಮಂಡಳಿಯ ರಮೇಶ್ ನೀರಬಿದಿರೆ, ಶ್ರೀಧರ್ ಕಜೆಗದ್ದೆ, ಮಾಹಿತಿ ವಿಭಾಗದ ಮುಖ್ಯಸ್ಥ ಕೃಷ್ಣ ಬೆಟ್ಟ ಮತ್ತು ಸುದ್ದಿ ಬಳಗದವರು ಉಪಸ್ಥಿತರಿದ್ದರು. 

 

ಈ ಸಂದರ್ಭದಲ್ಲಿ ಲಂಚ, ಭ್ರಷ್ಟಾಚಾರ ನಿರ್ಮೂಲನೆಯ ಘೋಷಣೆ ಮಾಡಲಾಯಿತು.
ದೀಪಾವಳಿ ವಿಶೇಷಾಂಕದ ಕಾರ್ಯ ನಿರ್ವಾಹಕ ಸಂಪಾದಕ ದುರ್ಗಾಕುಮಾರ್ ನಾಯರ್‌ಕೆರೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶ್ರೀಮತಿ ಸೌಮ್ಯಾ ರಾಘವೇಂದ್ರ ಪ್ರಾರ್ಥಿಸಿದರು.
ರಮೇಶ್ ನೀರಬಿದಿರೆ ಸ್ವಾಗತಿಸಿ, ಕಚೇರಿ ವ್ಯವಸ್ಥಾಪಕ ಯಶ್ವಿತ್ ಕಾಳಂಮನೆ ವಂದಿಸಿದರು. ಸುದ್ದಿ ವರದಿಗಾರ ಶಿವಪ್ರಸಾದ್ ಆಲೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here