ಪಂಬೆತ್ತಾಡಿ: ಸುಸಜ್ಜಿತ ರಸ್ತೆಯ ಕೊರತೆ ಕಾಣುತ್ತಿರುವ ಆರೋಗ್ಯ ಕೇಂದ್ರ

0

ಪಂಬೆತ್ತಾಡಿ ಗ್ರಾಮದಲ್ಲಿ ಕಳೆದ 20 ವರ್ಷಗಳಿಂದ ಸುಸಜ್ಜಿತ ಆರೋಗ್ಯ ಕೇಂದ್ರ ವಿದ್ದರೂ, ಸರಿಯಾದ ಸಂಪರ್ಕ ರಸ್ತೆಯ ಕೊರತೆ ಎದ್ದು ಕಾಣುತ್ತಿದೆ.
ಮುಖ್ಯ ರಸ್ತೆಯಿಂದ ಸುಮಾರು 30 ಮೀಟರ್ ಕಡಿದಾದ ಜಾರುವ ರಸ್ತೆ ಇರುವ ಆರೋಗ್ಯ ಕೇಂದ್ರಕ್ಕೆ, ಬಾಣಂತಿಯರು, ಮಕ್ಕಳು, ಅಸಕ್ತರು ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಗಳಿಗೂ ನಡೆದುಕೊಂಡು ಬರುವುದೇ ಕಷ್ಟವಾಗಿದೆ. ಈ ಬಗ್ಗೆ ಸಂಬಂಧಿಸಿದ ಇಲಾಖೆಯವರು, ಜನಪ್ರತಿನಿಧಿಗಳು ಗಮನ ಹರಿಸಬೇಕೆಂದು ಊರವರು ಆಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here