ಸೌಖ್ಯವನ ಸ್ವಾಗತ ಗೋಪುರದ ಉದ್ಘಾಟನಾ ಸಮಾರಂಭ

0

ಧರ್ಮಸ್ಥಳ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ಸೌಖ್ಯವನ ಸಂಸ್ಥೆಗೆ ಮತ್ತೊಂದು ಗರಿಯಾಗಿ ಪರೀಕ ರಾಜಮಾರ್ಗದ ಹತ್ತಿರ ಸುಂದರವಾದ ಸ್ವಾಗತಗೋಪುರವನ್ನು ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಆರ್ಶೀವಾದಗಳೊಂದಿಗೆ, ಉಡುಪಿ ಅಷ್ಟ ಮಠಗಳಲ್ಲಿ ಒಂದಾಗಿರುವ ಪಲಿಮಾರು ಮಠದ ಪೀಠಾಧಿಪತಿಗಳಾದ ಶ್ರೀಶ್ರೀಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದಂಗಳವರು ಮೇ 08ರಂದು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಟ್ರಸ್ಟ್ ನ ಡಿ.ಹರ್ಷೇಂದ್ರ ಕುಮಾರ್‌ರವರು ಮತ್ತು ಶಾಂತಿವನ ಟ್ರಸ್ಟ್, ಕಾರ್ಯದರ್ಶಿಗಳಾದ ಬಿ.ಎಸ್.ತೋಳ್ಪಾಡಿತ್ತಾಯರವರು ಉಪಸ್ಥಿತರಿದ್ದರು.ಊರಿನ ಗಣ್ಯಮಾನ್ಯರು ಭಾಗವಹಿಸಿದ್ದರು.

ನಂತರ ಪೂಜ್ಯ ಸ್ವಾಮೀಜಿಗಳು ಶಾಂತಿವನ ಟ್ರಸ್ಟ್, ಧರ್ಮಸ್ಥಳ ಇದರ ಆಡಳಿತಕ್ಕೆ ಒಳಪಟ್ಟ ಶ್ರೀನಿವಾಸ ದೇವಸ್ಥಾನಕ್ಕೆ ತೆರಳಿ ಪೂಜೆಯನ್ನು ಸಲ್ಲಿಸಿ ನಂತರ ಆಸ್ಪತ್ರೆಯ ಕ್ಷೇಮ ಹಾಲ್‌ನಲ್ಲಿ ಜರಗಿದ ಸಭಾಕಾರ್ಯಕ್ರಮದಲ್ಲಿ ದಿವ್ಯ ಉಪಸ್ಥಿತರಿದ್ದು, ಡಾ|ಡಿ.ವೀರೇಂದ್ರ ಹೆಗ್ಗಡೆಯವರು ನಡೆಸಿಕೊಂಡು ಬಂದಿರುವ ಈ ಸೌಖ್ಯವನ ಆಸ್ಪತ್ರೆಯ ಬೆಳವಣಿಗೆಗಳ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿ ಪ್ರಕೃತಿ ಚಿಕಿತ್ಸಾ ವಿಧಾನದಿಂದ ಯಾವುದೇ ಔಷಧವಿಲ್ಲದೆ ಮಾನವನ ದೇಹವನ್ನು ಯಾವ ರೀತಿ ಸಮತೋಲನದಲ್ಲಿ ಕಾಪಾಡಿಕೊಳ್ಳುವ ಬಗ್ಗೆ ಉತ್ತಮ ತಾತ್ವಿಕ ಸಲಹೆಗಳನ್ನು ನೀಡಿದರು.

ಶಾಂತಿವನ ಸಂಸ್ಥೆಯ ಟ್ರಸ್ಟೀಗಳಾದ ಡಿ.ಹರ್ಷೇಂದ್ರ ಕುಮಾರ್‌ರವರು ಗ್ರಾಮೀಣ ಪ್ರದೇಶದಲ್ಲಿ ಇಂತಹ ಸಂಸ್ಥೆಯನ್ನು ಕಟ್ಟಿ ಬೆಳೆಸಿದ ಬಗ್ಗೆ ತಿಳಿಸಿ ಇನ್ನು ಮುಂದೆಯೂ ಈ ಆಸ್ಪತ್ರೆಯನ್ನು ಅಭಿವೃದ್ಧಿಯ ಪಥದಲ್ಲಿ ಕೊಂಡೊಯ್ಯುವುದಾಗಿ ತಿಳಿಸಿದರು. ಕಾರ್ಯದರ್ಶಿಗಳಾದ ಬಿ ಸೀತಾರಾಮ ತೋಳ್ಪಾಡಿತ್ತಾಯನವರು ಪ್ರಸ್ತಾವನೆಗೈದು ಎಲ್ಲರನ್ನು ಸ್ವಾಗತಿಸಿದರು.

ಆಸ್ಪತ್ರೆಯ ಮುಖ್ಯವೈದ್ಯಾಧಿಕಾರಿ ಡಾ||ಗೋಪಾಲ ಪೂಜಾರಿಯವರು ಶುಭನುಡಿಗಳನ್ನಾಡಿದರು.ಸಂಸ್ಥೆಯ ವತಿಯಿಂದ ಸ್ವಾಮೀಜಿಗಳನ್ನು ಟ್ರಸ್ಟೀಗಳಾದ ಡಿ.ಹರ್ಷೇಂದ್ರ ಕುಮಾರ್‌ರವರು ಸನ್ಮಾನಿಸಿ ಗೌರವಾರ್ಪಣೆಗೈದರು. ಡಾ||ಶೋಭಿತ್ ಶೆಟ್ಟಿ ನಿರೂಪಿಸಿ, ಆಸ್ಪತ್ರೆಯ ವ್ಯವಸ್ಥಾಪಕ ಪ್ರವೀಣ್ ಕುಮಾರ್‌ ಧನ್ಯವಾದಗೈದರು.

p>

LEAVE A REPLY

Please enter your comment!
Please enter your name here