ಮಂಡೆಕೋಲು ಗ್ರಾಮ ಗ್ರಂಥಾಲಯದಲ್ಲಿ ಜಿಲ್ಲಾಧಿಕಾರಿಗಳನ್ನು ಸ್ವಾಗತಿಸಿದ ವಿದ್ಯಾರ್ಥಿಗಳು

0

 

ಅಮ್ಮನಿಗೊಂದು ಪುಸ್ತಕ ಯೋಜನೆಯ ಕುರಿತು ಜಿಲ್ಲಾಧಿಕಾರಿ ಶ್ಲಾಘನೆ

 

ಮಂಡೆಕೋಲು ಗ್ರಾಮ ಗ್ರಂಥಾಲಯಕ್ಕೆ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ.ಯವರು ಇಂದು ಭೇಟಿ ನೀಡಿದರು. ಈ ವೇಳೆ ಅಮ್ಮನಿಗೊಂದು ಪುಸ್ತಕ ವಿಚಾರವಾಗಿ ಗ್ರಂಥಾಲಯದಲ್ಲಿ ನಡೆಯುತ್ತಿರುವ ಕಾರ್ಯಚಟುವಟಿಕೆಗಳ ಕುರಿತು ಮೆಚ್ಚುಗೆ ವ್ಯಕ್ತ ಪಡಿಸಿದರು.

 

ಜಿಲ್ಲಾಧಿಕಾರಿ ಗಳು ಗ್ರಂಥಾಲಯಕ್ಕೆ ಆಗಮಿಸಿದಾಗ ಗ್ರಂಥಾಲಯಕ್ಕೆ ಪ್ರತಿದಿನ ಬರುವ ವಿದ್ಯಾರ್ಥಿಗಳು ಗುಲಾಬಿ ಹೂ ನೀಡಿ ಸ್ವಾಗತಿಸಿದರು.

ಬಳಿಕ ಮಾತನಾಡಿದ ಜಿಲ್ಲಾಧಿಕಾರಿ ಗಳು “ಗ್ರಾಮದಲ್ಲಿ ಹುಟ್ಟಿಕೊಂಡ ಚಿಂತನೆ ರಾಜ್ಯಕ್ಕೆ ಪಸರಿಸಿರೋದು ಈ ಗ್ರಾಮಕ್ಕೆ ಹೆಮ್ಮೆ. ಪುಸ್ತಕಗಳು ಹಾಗೂ ಪತ್ರಿಕೆಯನ್ನು ಓದಿದರೆ ಅದೊಂದು ಜ್ಞಾನಭಂಡಾರ ಸೃಷ್ಠಿಯಾದಂತೆ. ಇದು ಹೀಗೆ ಮುಂದುವರಿಯಲಿ. ಓದುವ ಹವ್ಯಾಸ ಮಕ್ಕಳಿಗೆ ಕಳಿಸಬೇಕು” ಎಂದು ಅವರು ಹಾರೈಸಿದರು.


ಎಸಿ ಗಿರೀಶ್ ನಂದನ್, ಡಿಎಫ್ ಒ ಡಾ.ದಿನೇಶ್ ಕುಮಾರ್, ಗ್ರಾ.ಪಂ. ಅಧ್ಯಕ್ಷೆ ವಿನುತಾ ಪಾತಿಕಲ್ಲು, ತಹಶೀಲ್ದಾರ್ ಅನಿತಾಲಕ್ಷ್ಮೀ, ಗ್ರಂಥಾಲಯ ಮೇಲ್ಚಿಚಾರಕಿ ಸಾವಿತ್ರಿ ಕಣೆಮರಡ್ಕ ಮೊದಲಾದವರಿದ್ದರು.

ತಶ್ವಿನ್ ಸ್ವಾಗತಿಸಿದರು. ಪ್ರಶಣ್ಯ ಕಾರ್ಯಕ್ರಮ ನಿರೂಪಿಸಿದರು. ಸ್ಮಿತಾ ವಂದಿಸಿದರು.

LEAVE A REPLY

Please enter your comment!
Please enter your name here