ಸುಳ್ಯ ದಸರಾ: ವಿಠಲ ನಾಯಕ್ ಗೀತ ಸಾಹಿತ್ಯ ಸಂಭ್ರಮ ; ನಗೆಗಡಲಲ್ಲಿ ತೇಲಿದ ಪ್ರೇಕ್ಷಕರು

0

ಇಂದು ಸಂಜೆ ಸಂಗೀತ ರಸಮಂಜರಿ

 

ಸುಳ್ಯ ದಸರಾದ ೨ನೇ ದಿನ ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿಠಲ ನಾಯಕ್ ಕಲ್ಲಡ್ಕ ಮತ್ತು ಬಳಗದವರಿಂದ ಗೀತ ಸಾಹಿತ್ಯ ಸಂಭ್ರಮ ಕಾರ್ಯಕ್ರಮ ಮೂಡಿಬಂತು. ಹಾಸ್ಯಭರಿತವಾಗಿದ್ದ ಈ ಕಾರ್ಯಕ್ರಮ ಸೇರಿದ್ದ ಜನರನ್ನು ನಗೆಗಡಲಲ್ಲಿ ತೇಲಿಸಿತ್ತು.

ಫೆಂಡಾಲ್‌ನಲ್ಲಿ ಹಾಕಿದ್ದ ಆಸನಗಳು ತುಂಬಿ ಜನರು ಫೆಂಡಾಲ್‌ನ ಸುತ್ತ ನಿಂತು ಕಾರ್ಯಕ್ರಮ ವೀಕ್ಷಿಸಿದರು. ಗೀತ ಸಾಹಿತ್ಯ ಸಂಭ್ರಮಕ್ಕೂ ಮೊದಲು ದೀಪಾಂಜಲಿ ಮಹಿಳಾ ಭಜನಾ ಮಂಡಳಿ ಸುಳ್ಯ ಶಾಂತಿನಗರ ಇವರಿಂದ ಭಜನಾ ಕಾರ್ಯಕ್ರಮ ನಡೆಯಿತು. ಸುಜಾತಾ ನಾಟ್ಯ ಕಲಾ ತಂಡದ ಸುಳ್ಯ ಶಾಖೆಯ ವತಿಯಿಂದ ನೃತ್ಯ ಕಾರ್ಯಕ್ರಮ ನಡೆಯಿತು.


ಆಸರೆ ತಂಡ ಆಗಮನ : ಬೀರಮಂಗಲದ ಹಾರ್ದಿಕ್ ಎಂಬ ಬಾಲಕ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದು, ಆತನ ಚಿಕಿತ್ಸೆಗಾಗಿ ಸುಳ್ಯದ ಆಸರೆ ತಂಡದವರು ವಿಶೆಷ್ಟ ರೀತಿಯಲ್ಲಿ ವೇಷ ಧರಿಸಿ ನಿನ್ನೆ ಧನ ಸಂಗ್ರಹ ನಡೆಸಿದರು. ಸಂಜೆ ಈ ತಂಡ ಸುಳ್ಯ ದಸರಾ ಸಭಾಂಗಣಕ್ಕೆ ಬಂದು ತಮ್ಮ ಯೋಜನೆಯನ್ನು ಮುಂದಿಟ್ಟರು. ಈ ತಂಡವನ್ನು ಎಸ್‌ಸಿಕ್ಸ್ ಹಾಗೂ ದಸರಾ ಸಮಿತಿಯವರು ಸ್ವಾಗತಿಸಿದರು. ಯುವಕರ ಈ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ.
ಅ. ೪ ರಂದು ಸಂಜೆ ೬.೩೦ಕ್ಕೆ ಅಯ್ಯಪ್ಪ ಭಜನಾ ಮಂದಿರ ದುಗಲಡ್ಕ ಇವರಿಂದ ಭಜನಾ ಸೇವೆ ನಡೆಯುವುದು. ಫ್ರೆಂಡ್ಸ್ ರಸಮಂಜರಿ ನಡೆಯಲಿದೆ.

LEAVE A REPLY

Please enter your comment!
Please enter your name here