ಮೊಗರ್ಪಣೆ : ನಿಂತಿದ್ದ ಕಾರಿಗೆ ಲಾರಿ ಡಿಕ್ಕಿ, ಕಾರಿನ ಹಿಂಭಾಗ ಸಂಪೂರ್ಣ ಜಖಂ

0

 

ಸುಳ್ಯ ಮೊಗರ್ಪಣೆ ಸೇತುವೆಯ ಬಳಿ ನಿನ್ನೆ ರಾತ್ರಿ ಸುಮಾರು 10:30 ರ ಸಮಯದಲ್ಲಿ ಹಾರಿಸ್ ಕಾಂಪ್ಲೆಕ್ಸ್ ಮುಂಬಾಗದಲ್ಲಿ ನರ್ಸರಿ ಅಂಗಡಿಯ ಬಳಿ ನಿಂತಿದ್ದ ಕ್ರೇಟಾ ಕಾರಿನ ಹಿಂಭಾಗಕ್ಕೆ ಸುಳ್ಯ ಭಾಗದಿಂದ ಬಂದ ಲಾರಿ ಡಿಕ್ಕಿ ಹೊಡೆದು ಕಾರಿನ ಹಿಂಬದಿ ಸಂಪೂರ್ಣ ಜಖಂಗೊಂಡ ಘಟನೆ ವರದಿಯಾಗಿದೆ.
ಹಾರಿಸ್ ಕಾಂಪ್ಲೆಕ್ಸ್ ನಲ್ಲಿ ಇಂದು ಶುಭಾರಂಭಗೊಳ್ಳಲಿರುವ ನೂತನ ಸಂಸ್ಥೆಯೊಂದಕ್ಕೆ ಪುತ್ತೂರು ಭಾಗದಿಂದ ಬಂದವರ ಕಾರು ಇದಾಗಿದ್ದು, ಘಟನೆಯ ಸಂದರ್ಭ ಕಾರಿನಲ್ಲಿ ಯಾರೂ ಇಲ್ಲದ ಕಾರಣ ಹೆಚ್ಚಿನ ಅನಾಹುತ ತಪ್ಪಿದೆ ಎಂದು ತಿಳಿದುಬಂದಿದೆ.

LEAVE A REPLY

Please enter your comment!
Please enter your name here