ಬಸ್‌ನಿಂದ ಇಳಿದ ಮಹಿಳೆಯ ಕಾಲಿನ ಮೇಲೆ ಬಸ್ ಚಲಿಸಿ ಗಂಭೀರ ಗಾಯ

0

ಬಸ್ ನಿಲ್ಲಿಸುವ ಮೊದಲೇ ಬಸ್‌ನಿಂದ ಇಳಿದ ಮಹಿಳೆಯ ಕಾಲಿನ ಮೇಲೆ ಹಿಂಬದಿ ಟಯರ್ ಚಾಲನೆಗೊಂಡ ಪರಿಣಾಮ ಮಹಿಳೆ ಗಂಭೀರವಾಗಿ ಗಾಯಗೊಂಡ ಘಟನೆ ಸೋಣಂಗೇರಿಯಲ್ಲಿ ನಡೆದಿದೆ.


ಬೆಳ್ಳಾರೆಯಿಂದ ಸುಳ್ಯಕ್ಕೆ ಬರುತ್ತಿದ್ದ ಬಸ್‌ನ್ನು ಚಾಲಕ ಸೋಣಂಗೇರಿಯಲ್ಲಿ ನಿಲ್ಲಿಸುತ್ತಿದ್ದಂತೆ ದುಗಲಡ್ಕದ ಮೈಮೂನಾ ಎಂಬ ಮಹಿಳೆ ಕೆಳಗೆ ಇಳಿದರೆನ್ನಲಾಗಿದೆ. ಆದರೆ ಆ ವೇಳೆಗೆ ಬಸ್ ನಿಲ್ಲದ ಪರಿಣಾಮ ಬಸ್‌ನ ಹಿಂಬದಿ ಚಕ್ರ ಮೈಮೂನಾರವರ ಕಾಲಿನ ಮೇಲೆ ಚಲಾಯಿಸಲ್ಪಟ್ಟಿತು. ಇದರಿಂದ ಗಂಭೀರವಾಗಿ ಗಾಯಗೊಂಡ ಅವರನ್ನು ಸುಳ್ಯ ಆಸ್ಪತ್ರೆಗೆ ಕೊಂಡೊಯ್ಯಲಾಯಿತು.

LEAVE A REPLY

Please enter your comment!
Please enter your name here