ಕಣಿಯೂರು: ಕಣಿಯೂರು ಗ್ರಾಮ ಪಂಚಾಯತ್ ನಲ್ಲಿ ಕಣಿಯೂರು ಮತ್ತು ಉರುವಾಲು ಗ್ರಾಮದ ಅಕ್ರಮ ಸಕ್ರಮ ಅರ್ಜಿ ವಿಲೇವಾರಿಯು ಶಾಸಕ ಹರೀಶ್ ಪೂಂಜ ರವರ ಅಧ್ಯಕ್ಷತೆಯಲ್ಲಿ ನ 25 ರಂದು ಜರುಗಿತು.
ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾಣಿಕಂ, ಅಕ್ರಮ ಸಕ್ರಮ ಸಮಿತಿ ಸದಸ್ಯರಾದ ಜಯಂತ್ ಕೋಟ್ಯಾನ್, ಶಾರದ ಗೋಪಾಲಕೃಷ್ಣ, ಕೊಕ್ಕಡ ಕಂದಾಯ ನಿರೀಕ್ಷಕ ದೊಡ್ಡಮಣಿ ಪವಾಡಪ್ಪ, ಕಣಿಯೂರು ಗ್ರಾಮಕರಣಿಕ ಸತೀಶ್, ಉರುವಾಲು ಗ್ರಾಮ ಕರಣಿಕ ರಫೀಖ್, ಪೋಲಿಸ್ ಅಧಿಕಾರಿಗಳು, ಅರಣ್ಯಾಧಿಕಾರಿಗಳು, ಕಂದಾಯ ಅಧಿಕಾರಿಗಳು ,ಪಂ ಅಭಿವೃದ್ಧಿ ಅಧಿಕಾರಿ ಪೂರ್ಣಿಮ, ಸಿ ಎ ಬ್ಯಾಂಕ್ ಅಧ್ಯಕ್ಷರಾದ ರಕ್ಷಿತ್ ಶೆಟ್ಟಿ, ಪಂಚಾಯತ್ ಅಧ್ಯಕ್ಷೆ ಗಾಯತ್ರಿ, ಉಪಾಧ್ಯಕ್ಷೆ ಜಲಜಾಕ್ಷಿ ಹಾಗೂ ಪಂ ಸದಸ್ಯರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಹರೀಶ್ ಪೂಂಜ ಅರ್ಜಿದಾರರಾದ ಕೃಷಿಕರು ಮಧ್ಯವರ್ತಿಗಳ ಮುಖಾಂತರ ಹಣ ಖರ್ಚು ಮಾಡಿ ತಾಲೂಕು ಕಛೇರಿಯಲ್ಲಿ ಅಲೆದಾಡುವುದನ್ನು ತಡೆಯುವ ಉದ್ದೇಶದಿಂದ ಗ್ರಾಮ ಗ್ರಾಮಕ್ಕೆ ನಾನೇ ಬಂದು ಹಕ್ಕು ಪತ್ರ ನೀಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದೇನೆ ಎಂದರು. ಕಂದಾಯ ನಿರೀಕ್ಷಕ ದೊಡ್ಡಮಣಿ ಪವಾಡಪ್ಪ ರವರು ಸ್ವಾಗತಿಸಿ ಧನ್ಯವಾದ ಸಲ್ಲಿಸಿದರು.