ಬೆಳ್ತಂಗಡಿ: ಪರಿಶಿಷ್ಟ ವರ್ಗದ ವಿವಿಧೋದ್ದೇಶ ಸಹಕಾರ ಸಂಘ ಬೆಳ್ತಂಗಡಿ ಇದರ ವಾರ್ಷಿಕ ಮಹಾ ಸಭೆ

0

ಕಲ್ಮಂಜ : ಬೆಳ್ತಂಗಡಿ  ತಾಲೂಕು ಪರಿಶಿಷ್ಟ ವರ್ಗದ ವಿವಿಧೋದ್ದೇಶ ಸಹಕಾರ ಸಂಘ ಬೆಳ್ತಂಗಡಿ ಇದರ ವಾರ್ಷಿಕ ಮಹಾ ಸಭೆಯು ಸೆಪ್ಟೆಂಬರ್ 20ರಂದು ಸಂಘದ ಅಧ್ಯಕ್ಷರಾದ  ಲಿಂಗಪ್ಪ  ನಾಯ್ಕ ಉರುವಾಲು ಇವರ ಅಧ್ಯಕ್ಷತೆಯಲ್ಲಿ ಮರಾಠಿ ಸಮಾಜ ಸೇವಾ ಭವನ ಕಲ್ಮಂಜ ಉಜಿರೆ ಸಭಾಂಗಣದಲ್ಲಿ ನಡೆಯಿತು.

ಮುಖ್ಯ ಕಾರ್ಯನಿರ್ವಹಣಾಧಿಕಾರಿ   ಜಯಂತಿ  ವಾರ್ಷಿಕ ಲೆಕ್ಕಪತ್ರಗಳನ್ನು ಮಂಡಿಸಿದರು . ಪ್ರಸ್ತುತ ಅಸ್ಸಾಂನಲ್ಲಿ ಭೂಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಬಾಬು ನಾಯ್ಕ ಮತ್ತು ಕಲ್ಯಾಣಿ ಇವರ ಸುಪುತ್ರನಾದ ಮಂಜುನಾಥ ನಾಯ್ಕ ಮದ್ದಡ್ಕ ಇವರನ್ನ ಕರ್ಮ ಯೋಗಿ ಪುರಸ್ಕಾರದೊಂದಿಗೆ ಇವರ ಅನುಪಸ್ಥಿತಿಯಲ್ಲಿ ಇವರ ಧರ್ಮಪತ್ನಿ ಪದ್ಮಾವತಿ ಮತ್ತು ಮಕ್ಕಳದ ಮನ್ವಿತ ಹಾಗೂ ಮನೀಶ್ ಹಾಗೂ ಇವರ ತಾಯಿ ಕಲ್ಯಾಣಿ ಇವರನ್ನ ಫಲ ಪುಷ್ಪ ನೀಡಿ ಪದ್ಮಾವತಿ ಅವರಿಗೆ ಮುತ್ತೈದೆಯರು ಬಾಗಿನವನ್ನು ನೀಡಿದರು.

ಅಧ್ಯಕ್ಷರು ಕರ್ಮ ಯೋಗಿ ಪುರಸ್ಕಾರವನ್ನು ನೀಡಿ ಸನ್ಮಾನಿಸಿದರು. ಮಂಜುನಾಥ ಇವರು 20   ಸೆಪ್ಟೆಂಬರ್ 2000 ರಂದು ಸೇನೆಗೆ ಸೇರಿದ್ದು ಪಂಜಾಬಿ, ರಾಜಸ್ಥಾನ, ಗುಜರಾತು ,ಕಲ್ಕತ್ತಾ, ದೆಹಲಿ ,ಬೆಂಗಳೂರಿನಲ್ಲಿ ಸೇವೆ ಸಲ್ಲಿಸಿದ್ದು ಪ್ರಸ್ತುತ ಅಸ್ಸಾಂನಲ್ಲಿ ಭಾರತೀಯ ಭೂಸೇನೆಯಲ್ಲಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ ಇವರಿಗೆ ಅಮೋಘ ಸೇವೆಯನ್ನು ಪರಿಗಣಿಸಿ ಕರ್ಮಯೋಗಿ ಪುರಸ್ಕಾರ ನೀಡಿ ಗೌರವಿಸಲಾಯಿತು .

ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಸಿಂಚನ, ಶರತ್ ,ಯಶಸ್ವಿನಿ, ರಚನ, ಹರ್ಷಿತ ಇವರನ್ನ ಸನ್ಮಾನ ಪತ್ರ ಹಾಗೂ ಪ್ರೋತ್ಸಾಹವನ್ನು ನೀಡಿ ಗೌರವಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿ ಉಪಾಧ್ಯಕ್ಷ ಸಂತೋಷ್ ನಾಯಕ್,  ನಿರ್ದೇಶಕರುಗಳಾದ ಚೆನ್ನಕೇಶವ ನಾಯ್ಕ, ಸೀತಾರಾಮ ಬಿ ಎಸ್ ,ತಿಮ್ಮಪ್ಪ ನಾಯ್ಕ ,ಪ್ರಸಾದ್ ನಾಯ್ಕ, ಪ್ರಶಾಂತ ನಾಯ್ಕ ಉಪಸ್ಥಿತರಿದ್ದರು ಹಾಗೂ ಸಂಘದ ಸಿಬ್ಬಂದಿ ವರ್ಗ ಪಿಗ್ಮಿ ಸಂಗ್ರಹಗಾರರು ಹಾಗೂ ಸಂಘದ ಸದಸ್ಯರು ಹಾಜರಿದ್ದರು.

ಸಂಘದ ಅಭಿವೃದ್ಧಿಯ ಬಗ್ಗೆ ಚರ್ಚಿಸಲಾಯಿತು. ಸಂಘದ ಅಧ್ಯಕ್ಷ ಲಿಂಗಪ್ಪನಾಯಕ ಇವರು ಸಂಘದ ಕಾರ್ಯ ಚಟುವಟಿಕೆಗಳ ಬಗ್ಗೆ ತಿಳಿಸುತ್ತಾ ಸಂಘದ ಕೇಂದ್ರ ಕಚೇರಿಗೆ ಒಂದು ಕೋಟಿ ರೂಪಾಯಿ ಅನುದಾನದ ಗೋಧಾಮ ಹಾಗೂ ಬ್ಯಾಂಕ್ ಕಚೇರಿಗೆ ಶಾಸಕ ಹರೀಶ್ ಪೂಂಜ ಇವರು ಅನುದಾನ ನೀಡುತ್ತಿರುವ ಬಗ್ಗೆ ಸಂಘದ ಅಧ್ಯಕ್ಷರು ತಿಳಿಸಿದರು. ಕುಮಾರಿ ಚಂದ್ರಿಕಾ ಇವರು ಪ್ರಾರ್ಥನೆಯನ್ನು ಮಾಡಿದರು.   ಚನ್ನಕೇಶವ ನಾಯ್ಕ ಇವರು ಧನ್ಯವಾದ ಗೈದರು, ಸ್ಥಾಪಕರಾದ ಚಿದಾನಂದ ಇವರು ಕಾರ್ಯಕ್ರಮವನ್ನು ನಿರೂಪಿಸಿದರು.

LEAVE A REPLY

Please enter your comment!
Please enter your name here