ವೇಣೂರು: ಶ್ರೀ ಮಹಮ್ಮಾಯಿ ಮರಾಟಿ ಸಮಾಜ ಸೇವಾ ಸಂಘ ಉತ್ತುರ್ಲೊಟ್ಟು, ಕರಿಮಣೇಲು, ಮೂಡುಕೋಡಿ, ಕರಿಮಣೇಲು ಗ್ರಾಮದ ಉತ್ತುರ್ಲೊಟ್ಟು ಮಹಾಮ್ಮಾಯಿ ಕ್ಷೇತ್ರದಲ್ಲಿ 23ನೇ ವರ್ಷದ ವಾರ್ಷಿಕ ಮಹಾಸಭೆ ಮತ್ತು ರಾಶಿ ಪೂಜಾ ಮಹೋತ್ಸವ ಜರಗಲಿರುವುದು.
ಬೆಳಿಗ್ಗೆ ಗಂಟೆ 7ಕ್ಕೆ ನಾಗಬನದಲ್ಲಿ ನಾಗತಂಬಿಲ, 10ಕ್ಕೆ ಗಣಹೋಮಹಾಗೂ ಅಣ್ಣಪ್ಪ ಸ್ವಾಮಿ ದೈವಕ್ಕೆ ಪರ್ವ, ಮಧ್ಯಾಹ್ನ ಗಂಟೆ 12ಕ್ಕೆ ಶ್ರೀ ಮಹಮ್ಮಾಯಿ ದೇವಿಗೆ ಮಹಾ ಪೂಜೆ, ಪ್ರಸಾದ ವಿತರಣೆ, ಸಾರ್ವಜನಿಕ ಅನ್ನಸಂತರ್ಪಣೆ, ಸಂಜೆ 6ರಿಂದ ಶ್ರೀ ಮಹಮ್ಮಾಯಿ ಭಜನಾ ಮಂಡಳಿ ಉಟ್ಟುರ್ಲೊಟ್ಟು ಮತ್ತು ಶ್ರೀ ಮಂಜುನಾಥೇಶ್ವರ ಭಜನಾ ಮಂಡಳಿ ಪಡ್ಡಂದಡ್ಕ ಇವರಿಂದ ಭಜನಾ ಕಾರ್ಯಕ್ರಮ, ಮಹಾ ಪೂಜೆ, ರಾತ್ರಿ 7.30ರಿಂದ ಅಂಗನವಾಡಿ ಮಕ್ಕಳಿಂದ ಹಿಡಿದು ಪದವಿ ವರೆಗಿನ ಮಕ್ಕಳಿಂದ ಸಾಂಸ್ಕೃಕ ಕಾರ್ಯಕ್ರಮ, ರಾತ್ರಿ 9ರಿಂದ ಸಭಾ ಕಾರ್ಯಕ್ರಮ, ಲೆಕ್ಕ ಪತ್ರ ಮಂಡನೆ, ಬಹುಮಾನ ವಿತರಣೆ, ರಾತ್ರಿ 10ರಿಂದ ಭೈರವ ದೇವರಿಗೆ ರಾಶಿ ಪೂಜಾ ಮಹೋತ್ಸವ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ ಎಂದು ಅಧ್ಯಕ್ಷ ಲಕ್ಷ್ಮಣ ನಾಯ್ಕ ತಿಳಿಸಿದ್ದಾರೆ.