ನಿಡ್ಲೆ: ಪಾರ್ಪಿಕಲ್ಲಿನಲ್ಲಿ ನದಿಗೆ ಸ್ನಾನಕ್ಕಿಳಿದ ಯುವಕ ನೀರಿನಲ್ಲಿ ಮುಳುಗಿ ಮೃತ್ಯು

0

ಕೊಕ್ಕಡ: ಸ್ನೇಹಿತರೊಂದಿಗೆ ನದಿಗೆ ಸ್ನಾನಕ್ಕಿಳಿದ ಯುವಕನೋರ್ವ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ನಿಡ್ಲೆ ಗ್ರಾಮದ ಪಾರ್ಪಿಕಲ್ಲು ಎಂಬಲ್ಲಿ ಅ.20ರಂದು ಮಧ್ಯಾಹ್ನ ನಡೆದಿದೆ.

ಕೌಕ್ರಾಡಿ ಗ್ರಾಮದ ಮೂಡುಬೈಲ್ ನಿವಾಸಿ ಜನಾರ್ದನ್ ಗೌಡ ಅವರ ಪುತ್ರ ಕೀರ್ತನ್ (21) ಮೃತಪಟ್ಟ ಯುವಕ.ಕೀರ್ತನ್ ಹಾಗೂ ಅವರ ಸ್ನೇಹಿತರು ಮಧ್ಯಾಹ್ನ ಸ್ನಾನಕ್ಕಾಗಿ ನಿಡ್ಲೆ ಗ್ರಾಮದ ಪಾರ್ಪಿಕಲ್ಲಿಗೆ ಬಂದಿದ್ದರು.

ಎಲ್ಲರೂ ನದಿಗೆ ಇಳಿದು ಸ್ನಾನ ಮಾಡುತ್ತಿದ್ದ ಸಂದರ್ಭದಲ್ಲಿ ನೀರಿನ ಆಳದ ಅರಿವಿಲ್ಲದೆ ಕೀರ್ತನ್ ಮುಳುಗಿ ಮೃತಪಟ್ಟಿದ್ದಾರೆನ್ನಲಾಗಿದೆ. ಕೂಡಲೇ ಸ್ಥಳೀಯರು ಕೀರ್ತನ್ ಅವರ ಮೃತದೇಹವನ್ನು ನೀರಿನಿಂದ ಮೇಲಕ್ಕೆತ್ತಿ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ.

ಘಟನೆಯ ಕುರಿತು ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.

LEAVE A REPLY

Please enter your comment!
Please enter your name here