ಸೋಜಾ ಎಲೆಕ್ಟ್ರಾನಿಕ್ಸ್ ಸಂಸ್ಥೆಗೆ ಶ್ರೀ ಭದ್ರಕಾಳಿ ಭಜನಾ ಮಂಡಳಿ ಯುವಕೇಸರಿ ಬಳಗ ಮಾರಿಗುಡಿ ಕಿಲ್ಲೂರು ತಂಡದವರಿಂದ ಭೇಟಿ

0

ಬೆಳ್ತಂಗಡಿ: ಸೋಜಾ ಎಲೆಕ್ಟ್ರಾನಿಕ್ಸ್ ಮತ್ತು ಫರ್ನಿಚರ್ಸ್ ಸಂಸ್ಥೆಗೆ ಶ್ರೀ ಭದ್ರಕಾಳಿ ಭಜನಾ ಮಂಡಳಿ ಯುವಕೇಸರಿ ಬಳಗ ಮಾರಿಗುಡಿ ಕಿಲ್ಲೂರು ಇಲ್ಲಿಯ ಕುಣಿತ ಭಜನಾ ಮಂಡಳಿಯ ಮಕ್ಕಳು ಮತ್ತು ತಂಡದ ಸಂಚಾಲಕಿಯಾದ ಶ್ರೀಮತಿ ಸೌಮ್ಯ ಹಾಗೂ ಸೋಜಾದಲ್ಲಿ ಉದ್ಯೋಗ ಮಾಡುತ್ತಿರುವ ಶ್ರೀಮತಿ ರಶ್ಮಿತಾ ಅ 17 ರಂದು ಆಗಮಿಸಿದ್ದರು.

ಸಂಸ್ಥೆಯ ಮಾಲಕರಾದ ಅಲ್ಫೋನ್ಸ್ ಫ್ರಾಂಕೋರವರು ಮಕ್ಕಳಿಗೆ ಚಟುವಟಿಕೆಗಳ ಮೂಲಕ ಜ್ಞಾನ ತುಂಬಿದರು. ವಿದ್ಯಾರ್ಥಿಗಳು ಹಲವು ಕಾರ್ಯಚಟುವಟಿಕೆಯನ್ನು ಮಾಡಿ ಮನರಂಜನೆಗೊಂಡರು. ಮಕ್ಕಳು ವಿದ್ಯಾಭ್ಯಾಸದಲ್ಲಿ ತೊಡಗಿಕೊಳ್ಳಲು ಹಾಗೂ ಮುಂದಿನ ಭವಿಷ್ಯ ಸುಖಕರವಾಗಿರಲಿ ಎಂದು ಸ್ಮರಣಿಕೆಯನ್ನು ನೀಡಿ ಶುಭಹಾರೈಸಿದರು.

LEAVE A REPLY

Please enter your comment!
Please enter your name here