






ಉಜಿರೆ : ಕೇಂದ್ರ ಸರಕಾರದ ಅನುದಾನದಲ್ಲಿ ನಡೆಸಲ್ಪಡುವ ಉಜಿರೆ ರೈತಉತ್ಪಾದಕರ ಕಂಪನಿ ವತಿಯಿಂದ ಜೇನು ಪೆಟ್ಟಿಗೆಯನ್ನು ಜೇನು ಕುಟುಂಬ ದೊಂದಿಗೆ ವಿತರಿಸಲು ಬೆಳ್ತಂಗಡಿ ತಾಲುಕಿನ ಆಸಕ್ತ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.


ಬೆಳ್ತಂಗಡಿ ತಾಲೂಕಿನ ರೈತರಿಗೆ ಮಾತ್ರ ಅವಕಾಶವಿದ್ದು ಉಜಿರೆ ರೈತ ಉತ್ಪಾದಕರ ಕಂಪನಿ ಓಡಲ ಉಜಿರೆ ಇಲ್ಲಿ ಕಚೇರಿಗೆ ಬಂದು ಅ. 24 ರ ಒಳಗೆ ಕಚೇರಿಯಲ್ಲಿ ಸಿಗುವ ಅರ್ಜಿ ನಮೂನೆ ಯೊಂದಿಗೆ ಅರ್ಜಿ ಸಲ್ಲಿಸ ತಕ್ಕದ್ದು. ಅರ್ಜಿಯ ಜೊತೆ ರೈತರ ಆಧಾರ್ ಕಾರ್ಡ್ ಪ್ರತಿ ಹಾಗು ಒಂದು ಪೆಟ್ಟಿಗೆಗೆ 2400 ರೂ. ರಂತೆ ಹಣ ಪಾವತಿಸಿ ಸ್ವಿಕೃತಿ ಪಡೆದು ಖಚಿತ ಪಡಿಸಿಕೊಳ್ಳಬೇಕು.
ನಂತರ ಬಂದ ಅರ್ಜಿಗಳನ್ನು ಸ್ವಿಕರಿಸಲಾಗುವುದಿಲ್ಲ. ಅರ್ಜಿ ಸಲ್ಲಿಸಿದ ರೈತರಿಗೆ ಅ. 31ನೇ ಶನಿವಾರ ಸಂಜೆ 7.30 ಗಂಟೆಗೆ ಜೇನು ಪೆಟ್ಟಿಗೆ ಕಂಪನಿಯ ಕಛೇರಿಯಲ್ಲಿ ವಿತರಣೆ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.









