ಬೆಳ್ತಂಗಡಿ ತಾಲೂಕು ಪ್ರಧಾನ ಪುಸ್ತಕ ಬರಹಗಾರರು, ಸಂಪನ್ಮೂಲ ವ್ಯಕ್ತಿಗಳು, ಕೃಷಿ ಸಖಿ ಹಾಗೂ ಪಶುಸಖಿಯರ ಸಂಘಕ್ಕೆ ನೂತನ ಪದಾಧಿಕಾರಿಗಳ ಆಯ್ಕೆಅಧ್ಯಕ್ಷೆಯಾಗಿ ಭವ್ಯ ಚಾರ್ಮಾಡಿ, ಕಾರ್ಯದರ್ಶಿಯಾಗಿ ಮಲ್ಲಿಕಾ ಅಂಡಿಂಜೆ

0

ಬೆಳ್ತಂಗಡಿ: ತಾಲೂಕು ಪ್ರಧಾನ ಪುಸ್ತಕ ಬರಹಗಾರರು, ಸ್ಥಳೀಯ ಸಂಪನ್ಮೂಲ ವ್ಯಕ್ತಿಗಳು, ಕೃಷಿ ಸಖಿ ಹಾಗೂ ಪಶುಸಖಿಯರ ಸಂಘದ ಸಭೆಯು ಕನ್ಯಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ನಡೆಯಿತು.

ಸಭೆಯಲ್ಲಿ 2026–27ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.ಸಂಘದ ನೂತನ ಅಧ್ಯಕ್ಷೆಯಾಗಿ ಭವ್ಯ ಚಾರ್ಮಾಡಿ, ಉಪಾಧ್ಯಕ್ಷೆಯಾಗಿ ಚಂದ್ರಿಕಾ ಕುಕ್ಕೇಡಿ, ಕಾರ್ಯದರ್ಶಿಯಾಗಿ ಮಲ್ಲಿಕಾ ಅಂಡಿಂಜೆ, ಕೋಶಾಧಿಕಾರಿಯಾಗಿ ಚಂದ್ರಾವತಿ ಧರ್ಮಸ್ಥಳ ಹಾಗೂ ಜತೆ ಕಾರ್ಯದರ್ಶಿಯಾಗಿ ಅಕ್ಷತಾ ನಾರಾವಿ ಆಯ್ಕೆಯಾದರು. ಸಮಿತಿಯ ಸಲಹೆಗಾರರಾಗಿ 15 ಸದಸ್ಯರನ್ನು ಆಯ್ಕೆ ಮಾಡಲಾಯಿತು.

ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷೆ ಸಂಧ್ಯಾ ಪುದುವೆಟ್ಟು ವಹಿಸಿದ್ದರು. ಹಿಂದಿನ ಸಭೆಯ ವರದಿಯನ್ನು ಮಂಡಿಸಿ ಅನುಮೋದನೆ ಪಡೆಯಲಾಯಿತು. ಸಂಘದ ಸದಸ್ಯರ ಸಂಘಟನೆಗೆ ಸಂಬಂಧಿಸಿದಂತೆ ಚರ್ಚಿಸಿ ಹಲವು ನಿರ್ಣಯಗಳನ್ನು ಕೈಗೊಳ್ಳಲಾಯಿತು.

ಎಂಬಿಕೆ ಹರಿಣಾಕ್ಷಿ ಬೆಳಾಲು ಕಾರ್ಯಕ್ರಮ ರೂಪಿಸಿದರು. ಎಲ್‌ಸಿಆರ್‌ಪಿ ಜಯಂತಿ ಸ್ವಾಗತಿಸಿ, ಕೃಷಿ ಸಖಿ ನಿರ್ಮಲ ವಂದಿಸಿದರು.

LEAVE A REPLY

Please enter your comment!
Please enter your name here