ಕನ್ಯಾಡಿಯಲ್ಲಿ ತಾಲೂಕು ಮಟ್ಟದ ಪುಸ್ತಕ ಬರಹಗಾರರು, ಸಂಪನ್ಮೂಲ ವ್ಯಕ್ತಿಗಳು, ಕೃಷಿ ಸಖಿ ಹಾಗೂ ಪಶು ಸಖಿಯರ ಸಂಘದ ಸಭೆ

0

ಬೆಳ್ತಂಗಡಿ: ಪ್ರಧಾನ ಪುಸ್ತಕ ಬರಹಗಾರರು, ಸ್ಥಳೀಯ ಸಂಪನ್ಮೂಲ ವ್ಯಕ್ತಿಗಳು, ಕೃಷಿ ಸಖಿ ಮತ್ತು ಪಶು ಸಖಿಯರ ಬೆಳ್ತಂಗಡಿ ತಾಲೂಕು ಸಂಘದ ಸಭೆಯು ಕನ್ಯಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ನಡೆಯಿತು.

ಸಂಘದ ಅಧ್ಯಕ್ಷೆ ಸಂಧ್ಯಾ ಪುದುವೆಟ್ಟು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಹಿಂದಿನ ಸಭೆಯ ವರದಿಯನ್ನು ಮಂಡಿಸಿ ಅನುಮೋದನೆ ಪಡೆಯಲಾಯಿತು. ಸಂಘದ ಸದಸ್ಯರ ಸಂಘಟನೆಗೆ ಸಂಬಂಧಿಸಿದಂತೆ ಚರ್ಚಿಸಿ ಹಲವು ನಿರ್ಣಯಗಳನ್ನು ಕೈಗೊಳ್ಳಲಾಯಿತು.

ವೇದಿಕೆಯಲ್ಲಿ ಚಂದ್ರಾವತಿ, ಅಕ್ಷತಾ, ಮಲ್ಲಿಕಾ, ಭವ್ಯ ಹಾಗೂ ಚಂದ್ರಾವತಿ ಉಪಸ್ಥಿತರಿದ್ದರು.ಎಂಬಿಕೆ ಹರಿಣಾಕ್ಷಿ ಬೆಳಾಲು ಕಾರ್ಯಕ್ರಮ ರೂಪಿಸಿದರು. ಎಲ್‌ಸಿಆರ್‌ಪಿ ಜಯಂತಿ ಸ್ವಾಗತಿಸಿ, ಕೃಷಿ ಸಖಿ ನಿರ್ಮಲ ವಂದಿಸಿದರು.

LEAVE A REPLY

Please enter your comment!
Please enter your name here