ಸೋಜಾ ಎಲೆಕ್ಟ್ರಾನಿಕ್ಸ್ ಅಂಡ್ ಫರ್ನಿಚರ್ ಸಂಸ್ಥೆಗೆ ಎಸ್ ಡಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಿಯಾಜ್ ಪರಂಗಿಪೇಟೆ ಭೇಟಿ

0

ಬೆಳ್ತಂಗಡಿ ತಾಲೂಕಿನ ಅತಿ ಹಿರಿಯ ಮತ್ತು ವಿಶಾಲವಾದ ಸೋಜಾ ಎಲೆಕ್ಟ್ರಾನಿಕ್ಸ್ ಅಂಡ್ ಫರ್ನಿಚರ್ಸ್ ಮಳಿಗೆಗೆ ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಪ್ರಧಾನ ಕಾರ್ಯದರ್ಶಿ ರಿಯಾಜ್ ಪರಂಗಿಪೇಟೆ ಭೇಟಿ ನೀಡಿ ಸಂಸ್ಥೆಯ ಪ್ರಾಮಾಣಿಕ ಸೇವೆ ಮತ್ತು ಬದ್ಧತೆಯ ಕಂಡು ಹರ್ಷ ವ್ಯಕ್ತಪಡಿಸಿದರು.

ಸೋಜಾ ಸಂಸ್ಥೆಯ ಮಾಲಕ ಅಲ್ಫಾನ್ಸೋ ಫ್ರಾಂಕೋ ಗುಲಾಬಿ ಹೂ ನೀಡಿ ಅವರನ್ನು ಸ್ವಾಗತಿಸಿದರು. ಸಂಸ್ಥೆಯಲ್ಲಿ ನಡೆಯುವ ಪ್ರಾರ್ಥನಾ ಸಂಗಮದ ಬಳಿಕ ಸಂಸ್ಥೆಯ ಸಿಬ್ಬಂದಿಗಳ ಜೊತೆ ಮಾತನಾಡಿದ ರಿಯಾಜ್ ಅವರು ಸೋಜಾ ಎಲೆಕ್ಟ್ರಾನಿಕ್ಸ್ ಸಂಸ್ಥೆಯು ಕಳೆದ 31 ವರ್ಷಗಳಿಂದ ತಾಲೂಕಿನ ಜನರ ಮನಸ್ಸು ಗೆದ್ದಿದೆಯಂತಾದರೆ ಇಲ್ಲಿನ ಸಿಬ್ಬಂದಿಗಳ ನಗುಮುಖದ ಸೇವೆ,ಬದ್ಧತೆ,ಪ್ರಾಮಾಣಿಕ ತೆ ಹಾಗೂ ಮಾಲಕರ ಮೇಲಿನ ನಂಬಿಕೆ, ಪ್ರೀತಿಯಿಂದಾಗಿದೆ.

ಸಿಬ್ಬಂದಿಗಳಲ್ಲಿ ಪ್ರಾಮಾಣಿಕತೆ, ಸತ್ಯ, ಹಾಗೂ ಮಾತುಗಾರಿಕೆ ಇವು ಮೂರು ಇದ್ದರೆ ಸಂಸ್ಥೆ ಇನ್ನೂ ಎತ್ತರಕ್ಕೆ ಬೆಳೆಯಲು ಸಾಧ್ಯವಾಗುತ್ತದೆ ಎಂದು ಹೇಳಿದರು. ಸಂಸ್ಥೆಯ ಸಿಬ್ಬಂದಿಗಳಿಗೆ ಹಾರೈಸಿ, ಸಂಸ್ಥೆ ಇನ್ನೂ ಎತ್ತರಕ್ಕೆ ಬೆಳೆದು ಇನ್ನೂ ಉತ್ತಮವಾಗಿ ಕಾರ್ಯನಿರ್ವಹಿಸಲಿ ಎಂದು ಶುಭ ಹಾರೈಸಿದರು.

ಕೊನೆಗೆ ಸಂಸ್ಥೆಯ ಮ್ಯಾನೇಜರ್ ಲ್ಯಾನ್ಸಿ ಡಿಸೋಜಾ ರವರು ಹಾಗೂ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಮತ್ತು ಎಲ್ಲಾ ಸಿಬ್ಬಂದಿಗಳೊಂದಿಗೆ ಸೇರಿ ಹಾರ ಹಾಕಿ,ಮೈಸೂರ್ ಪೇಟ ಧರಿಸಿ ಸನ್ಮಾನಿಸಿದರು. ಸಂಸ್ಥೆಯ ಪಿ. ಆರ್. ಒ ಗಳಾದ ಅಮೀನಾ ಬೀ ಶಬಾನ ರವರು ಸ್ವಾಗತಿಸಿ, ಅಬ್ದುಲ್ ಖಾದರ್ ರವರು ವಂದಿಸಿದರು.

LEAVE A REPLY

Please enter your comment!
Please enter your name here