






ನಾವೂರು: ಆರೋಗ್ಯ ಕ್ಲಿನಿಕ್ ಗೆ ನಿನ್ನೆ ತಡರಾತ್ರಿ ದುಷ್ಕರ್ಮಿಗಳು ಡಿಸೆಲ್ ಸುರಿದು ಬೆಂಕಿ ಹಾಕಿರುವ ಘಟನೆ ನಡೆದಿದೆ. ಆರೋ್ಗ್ಯ ಕ್ಲಿನಿಕ್ ಕಟ್ಟಡದ ಎಡಬದಿಯಲ್ಲಿರುವ ಕಿಟಕಿಯಿಂದ ಒಳಭಾಗಕ್ಕೆ ಡಿಸೆಲ್ ಸುರಿದಿರುವ ಬಗ್ಗೆ ಶಂಕೆಯಿದೆ.


ಈ ಕಟ್ಟಡದ ಮಾಲಕಿ ತನುಜಾ ಶೇಖರ್ ರವರಿಗೆ ಸೇರಿದ್ದಾಗಿದೆ. ಈ ಕೃತ್ಯ ಯಾರು ಮಾಡಿದ್ದಾರೆ ಎಂದು ಪೊಲೀಸರು ತನಿಖೆ ಕೈಗೊಳ್ಳಲಿದ್ದಾರೆ.ಈಗಾಗಲೇ ಸ್ಥಳಕ್ಕೆ ಅಗ್ನಿಶಾಮಕ ದಳ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದು,ಪೊಲೀಸರು ತನಿಖೆ ಆರಂಭಿಸಿದ್ದಾರೆ.









