ಪಟ್ಟೂರು: ನ. 6 ಶ್ರೀರಾಮ ವಿದ್ಯಾಸಂಸ್ಥೆಯಲ್ಲಿ ದುರ್ಗಾ ಹೋಮ, ವಿದ್ಯಾಸರಸ್ವತಿ ಪೂಜೆ ಹಾಗೂ ನೂತನ ಕೊಠಡಿ, ಕಂಪ್ಯೂಟರ್ ಪ್ರಯೋಗಾಲಯ ಉದ್ಘಾಟನೆ

0

ಪಟ್ಟೂರು : ಇಲ್ಲಿನ ಶ್ರೀರಾಮ ವಿದ್ಯಾಸಂಸ್ಥೆಯಲ್ಲಿ ನ. 6 ರಂದು ಕೆ . ಎಂ.ಶರ್ಮ ಮುಳ್ಳೇರಿಯ ಮಾರ್ಗದರ್ಶನದಲ್ಲಿ ದುರ್ಗಾ ಹೋಮ ಹಾಗೂ ವಿದ್ಯಾಸರಸ್ವತಿ ಪೂಜೆ ನಡೆಯಲಿದೆ. ಜೊತೆಗೆ ನೂತನ ತರಗತಿ ಕೊಠಡಿ ಹಾಗೂ ಕಂಪ್ಯೂಟರ್ ಪ್ರಯೋಗಾಲಯ ಉದ್ಘಾಟನೆಗೊಳ್ಳಲಿದೆ .

ಈ ಎಲ್ಲಾ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್ ನ ಅಧ್ಯಕ್ಷ ಕೃಷ್ಣ ಭಟ್ ಹಿತ್ತಿಲು ಬಿಡುಗಡೆಗೊಳಿಸಿದರು. ವಿದ್ಯಾಸಂಸ್ಥೆಯ ಸಾನಿಧ್ಯ ಬಲವರ್ಧನೆಯ ಪ್ರಯುಕ್ತ ಪ್ರಶ್ನಾ ಚಿಂತನೆಯಲ್ಲಿ ದುರ್ಗಾಹೋಮ ಹಾಗೂ ವಿದ್ಯಾಸರಸ್ವತಿ ಪೂಜೆಯನ್ನು ಶಾಲಾ ಆವರಣದಲ್ಲಿ ಕೈಗೊಳ್ಳುವಂತೆ ಸೂಚಿಸಿರುತ್ತಾರೆ.

ಸುತ್ತಮುತ್ತಲಿನ ಹತ್ತು ಗ್ರಾಮಗಳ ಗ್ರಾಮಸ್ಥರನ್ನು ಸೇರಿಸಿಕೊಂಡು ಪೂಜಾಕಾರ್ಯವನ್ನು ನಡೆಸಬೇಕು, ಈ ಮೂಲಕ ವಿದ್ಯಾಸಂಸ್ಥೆಯ ಜೊತೆಗೆ ಈ ಪೂಜೆಯ ಫಲ, ಅನುಗ್ರಹ ಎಲ್ಲಾ ಮನೆ-ಮನೆಗೂ ತಲುಪುವಂತಾಗಬೇಕು ಎಂದು ತಿಳಿಸಿರುತ್ತಾರೆ.

ಆಮಂತ್ರಣ ಪತ್ರಿಕೆ ಬಿಡುಗಡೆಯ ಸಂದರ್ಭ ವಿದ್ಯಾ ಸಂಸ್ಥೆಯ ಆಡಳಿತ ಸಮಿತಿ ಅಧ್ಯಕ್ಷ ಜನಾರ್ಧನ ಕಜೆ, ಸಂಚಾಲಕ ಪ್ರಶಾಂತ್ ಶೆಟ್ಟಿ ದೇರಾಜೆ, ಶಾಲಾ ಮುಖ್ಯೋಪಾಧ್ಯಾಯ ಚಂದ್ರಶೇಖರ ಶೇಟ್, ಆಡಳಿತ ಸಮಿತಿ ಪದಾಧಿಕಾರಿಗಳು, ಶಾಲಾ ಪೋಷಕರು, ಹಿರಿಯ ವಿದ್ಯಾರ್ಥಿಗಳು, ವಿದ್ಯಾಭಿಮಾನಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here