






ಕೊಯ್ಯೂರು: ಗ್ರಾಮದ ಮಲೆಬೆಟ್ಟು ಎಂಬಲ್ಲಿ ಸುಮಾರು ರೂ.65 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಆಯುಷ್ಮಾನ್ ಆರೋಗ್ಯ ಮತ್ತು ಕ್ಷೇಮ ಕೇಂದ್ರದ ಕಟ್ಟಡಕ್ಕೆ ಸಂಸದ ಕ್ಯಾ. ಬ್ರಿಜೇಶ್ ಚೌಟ ಹಾಗೂ ಶಾಸಕ ಹರೀಶ್ ಪೂಂಜ ಶಿಲಾನ್ಯಾಸ ನೆರವೇರಿಸಿದರು.


ಕಾರ್ಯಕ್ರಮದಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ. ಸಂಜಾತ್, ಕೊಯ್ಯೂರು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪರಮೇಶ್ವರ್, ಕೊಯ್ಯೂರು ಪ್ಯಾಕ್ಸ್ ಅಧ್ಯಕ್ಷ ರವೀಂದ್ರನಾಥ ಪಿ, ನಿರ್ದೇಶಕ ಕೇಶವ, ಗ್ರಾ.ಪಂ ಸದಸ್ಯರಾದ ಗಿರೀಶ್, ಯಶವಂತ್, ಮಂಡಲ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಪಾರೆಂಕಿ, ಪ.ಪಂ ಮಾಜಿ ಸದಸ್ಯ ಶರತ್, ಸೀತಾರಾಮ ಬೆಳಾಲು, ಬಾಲಕೃಷ್ಣ ಮುಗೇರಡ್ಕ ಸೇರಿದಂತೆ ಹಲವರು ಉಪಸ್ಥಿತರಿದ್ದರು.









