ಬೆಳ್ತಂಗಡಿ ತಾಲೂಕು ಜಿಪಿಟಿ ಶಿಕ್ಷಕರ ಸಂಘದ 2026-31 ರ ಅವಧಿಗೆ ಚುನಾವಣೆ -ಅಧ್ಯಕ್ಷರಾಗಿ ರವಿಕುಮಾರ್ ಬಿ.ಆರ್ ಅವಿರೋಧ ಆಯ್ಕೆ

0

ಬೆಳ್ತಂಗಡಿ : ಕರ್ನಾಟಕ ರಾಜ್ಯ ಸರ್ಕಾರದಿಂದ ಅಧಿಕೃತವಾಗಿ ಮಾನ್ಯತೆ ಪಡೆದ ಪ್ರಾಥಮಿಕ ವಿಭಾಗದ ಎರಡು ಸಂಘಗಳ ಪೈಕಿ ರಾಜ್ಯದ ಎರಡನೇ ಅತಿದೊಡ್ಡ ಸಂಘ ಕರ್ನಾಟಕ ರಾಜ್ಯ (6-8)ಪದವೀಧರ ಪ್ರಾಥಮಿಕ ಶಿಕ್ಷಕರ ಸಂಘ (ರಿ) ಬೆಂಗಳೂರು. ಇದರ ತಾಲೂಕು ಘಟಕ -ಬೆಳ್ತಂಗಡಿಗೆ 2026-31 ರ ಅವಧಿಗೆ ಸ.ಉ.ಪ್ರಾ.ಶಾಲೆ ಉಂಬೆಟ್ಟು ಇಲ್ಲಿಯ ಜಿಪಿಟಿ ಶಿಕ್ಷಕ ರವಿಕುಮಾರ್ ಬಿ.ಆರ್ ತಾಲೂಕು ಅಧ್ಯಕ್ಷರಾಗಿ, ಸ.ಉ.ಪ್ರಾ.ಶಾಲೆ ಸರಳಿಕಟ್ಟೆ ಯ ಅಭಿಷೇಕ್ ಆರ್ ಎನ್ ತಾ. ಪ್ರಧಾನ ಕಾರ್ಯದರ್ಶಿಗಳಾಗಿ ಹಾಗೂ ಪಿ.ಎಂ.ಶ್ರೀ ಮಾದರಿ ಶಾಲೆಯ ಶುಭ ಕೆ ತಾಲೂಕು ಕೋಶಾಧಿಕಾರಿಗಳಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಈ ಸಂಬಂಧ ಸಂಘದ ರಾಜ್ಯ ಚುನಾವಣಾ ಅಧಿಕಾರಿಗಳಾದ ಲಕ್ಷ್ಮೀನಾಥ್ ಎಸ್ ಅವರ ಸೆಪ್ಟಂಬರ್ 20 ರಂದು ಚುನಾವಣಾ ಅಧಿಸೂಚನೆ ಹೊರಡಿಸಿದ್ದರು. ಚುನಾವಣಾ ಮಾರ್ಗಸೂಚಿ ಹಾಗೂ ಸಂಘದ ಬೈಲಾ ನಿಯಮಾವಳಿಗಳಂತೆ ಬೆಳ್ತಂಗಡಿ ತಾಲೂಕಿನಲ್ಲಿ 180 ಕ್ಕೂ ಹೆಚ್ಚು ಜಿಪಿಟಿ ಶಿಕ್ಷಕ ಮತದಾರರಿದ್ದ ಕಾರಣ 13 ಮಂದಿ ನಿರ್ದೇಶಕರ ಸ್ಥಾನಗಳು ಲಭ್ಯವಾಗಿದ್ದು, ಆ ಸ್ಥಾನಗಳಿಗೆ ಸೆಂ.27 ರಂದು ಚುನಾವಣೆ ನಡೆದು ಎಲ್ಲಾ 13 ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದರು.

ಆ ಪೈಕಿ ರವಿಕುಮಾರ್ ಬಿ.ಆರ್ ಉಂಬೆಟ್ಟು ಶಾಲೆ,ಅಭಿಷೇಕ್ ಆರ್ ಎನ್ ಸರಳಿಕಟ್ಟೆ ಶಾಲೆ, ಶುಭಾ ಕೆ ಪಿ.ಎಂ.ಶ್ರೀ ಮಾದರಿ ಶಾಲೆ, ಉಷಾ ಕೆ ಕರ್ನೋಡಿ ಶಾಲೆ, ಸತೀಶಾಚಾರ್ ಬರಂಗಾಯ ಶಾಲೆ ,ಪ್ರಭಾಕರ ಜಿ ಶಾಲೆತ್ತಡ್ಕ ಶಾಲೆ , ಕವನ್ ಕುಮಾರ್ ಅಂಡಿಂಜೆ ಶಾಲೆ , ಹರೀಶ್ ವಿ.ಜಿ ಪೆರಿಯೊಟ್ಟು ಶಾಲೆ ,ಮಲ್ಲಿಕಾರ್ಜುನ್ ಆರ್ ಬಳಂಜ ಶಾಲೆ, ರಂಗನಾಥ್ ಬಿ.ಕೆ ಕಜಕೆ ಶಾಲೆ, ಸಚಿನ್ ತಿಮ್ಮಣ್ಣ ಬೆಟ್ಟು ಶಾಲೆ ,ಗಣೇಶ್ ಹಳೆಪೇಟೆ ಉಜಿರೆ , ಯೋಗೇಶ ಹೆಚ್ ಆರ್ ಮಾಯ ಶಾಲೆ ಇವರೆಲ್ಲರೂ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 13 ಮಂದಿ ನಿರ್ಧೇಶಕರ ಪೈಕಿ ಚುನಾವಣಾ ವೇಳಾಪಟ್ಟಿಯಂತೆ ಸೆಂ.28 ರಂದು ತಾಲೂಕು ಅಧ್ಯಕ್ಷ, ಪ್ರಧಾನ ಕಾರ್ಯದರ್ಶಿ ಹಾಗೂ ಖಜಾಂಚಿ ಹುದ್ದೆಗಳಿಗೆ ಮೂರು ಮಂದಿ ಮಾತ್ರ ನಾಮಪತ್ರ ಸಲ್ಲಿಸಿದ್ದ ಕಾರಣ ಮೂರು ಹುದ್ದೆಗಳಿಗೂ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ತಾಲೂಕು ಚುನಾವಣಾ ಅಧಿಕಾರಿಗಳಾದ ಮಚ್ಚಿನ ಪ್ರೌಢಶಾಲೆಯ ಶಿಕ್ಷಕರಾದ ಸುರೇಶ್ ಎಂ ಪ್ರಕಟಣೆಯಲ್ಲಿ ತಿಳಿಸಿದ್ದು ನಿರ್ದೇಶಕರಾಗಿ ಆಯ್ಕೆಯಾದ ಎಲ್ಲರಿಗೂ ಪ್ರಮಾಣ ಪತ್ರಗಳನ್ನು ನೀಡಿದರು.

ಈ ಸಂದರ್ಭದಲ್ಲಿ ನೂತನ ಜಿಪಿಟಿ ಸಂಘದ ಅಧ್ಯಕ್ಷರು ಹಾಗೂ ನಿರ್ದೇಶಕರಿಗೆ ನಿಕಟಪೂರ್ವ ಅಧ್ಯಕ್ಷರಾದ ಯೋಗೇಶ್ ಹೆಚ್ ಆರ್ ಅಭಿನಂದನೆ ಸಲ್ಲಿಸಿ ಪದಾಧಿಕಾರಿಗಳಾದವರು ಸಂಘದಲ್ಲಿ ತಮ್ಮ ವೈಯಕ್ತಿಕ ಹಿತಾಸಕ್ತಿಗೆ ಆದ್ಯತೆ ನೀಡದೆ, ಶಿಕ್ಷಕರ ಸಮಸ್ಯೆಗಳಿಗೆ ತುರ್ತಾಗಿ ಸ್ಪಂದಿಸಿ ಅವರ ಧ್ವನಿಯಾಗಿ ಕೆಲಸ ನಿರ್ವಹಿಸಬೇಕೆಂದು ಕಿವಿಮಾತು ಹೇಳಿದರು.

LEAVE A REPLY

Please enter your comment!
Please enter your name here