






ಬೆಳಾಲು:ಮಂಗಳೂರಿನ ಕಾರ್ಲ ಡೇವಿಡ್ ಮತ್ತು ಕೋಸೆಸ್ ಪಿಂಟೋ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ (ರಿ.) ವತಿಯಿಂದ ನೀಡಲ್ಪಡುವ ಪ್ರತಿಷ್ಠಿತ ಸಹಾಯಕ ವಿದ್ಯಾರ್ಥಿ ವೇತನಕ್ಕೆ, ಬೆಳಾಲು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯ 2025-26ನೇ ಸಾಲಿನ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಾದ ರಕ್ಷಾ ಹಾಗೂ ಹೇಮಲತಾ ಆಯ್ಕೆಯಾಗಿದ್ದಾರೆ.


ಆಯ್ಕೆಯಾದ ವಿದ್ಯಾರ್ಥಿಗಳಿಗೆ ಸಂಸ್ಥೆಯು ನೀಡಿದ ರೂ. 3,000/- (ಮೂರು ಸಾವಿರ ರೂಪಾಯಿಗಳು) ಮೌಲ್ಯದ ಚೆಕ್ ಹಾಗೂ ಪ್ರಮಾಣಪತ್ರವನ್ನು ಶಾಲಾ ಮುಖ್ಯೋಪಾಧ್ಯಾಯರಾದ ಜಯರಾಮ ಮಯ್ಯ ಅವರು ವಿದ್ಯಾರ್ಥಿಗಳ ಪೋಷಕರ ಉಪಸ್ಥಿತಿಯಲ್ಲಿ ಹಸ್ತಾಂತರಿಸಿ, ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಆರ್ಥಿಕ ನೆರವಿನ ಸಹಕಾರ ಹಾಗೂ ವಿದ್ಯಾರ್ಥಿವೇತನವನ್ನು ನೀಡಿದ ಟ್ರಸ್ಟ್ನ ಉದಾರತೆಗೆ ಶಾಲೆಯ ಹಾಗೂ ಪೋಷಕರ ಪರವಾಗಿ ಕೃತಜ್ಞತೆಗಳನ್ನು ಸಲ್ಲಿಸಲಾಯಿತು.









