






ಬೆಳಾಲು : ಬೆಳಾಲು ಗ್ರಾಮದ ಅನಂತೋಡಿ ಶ್ರೀ ಅನಂತ ಪದ್ಮನಾಭ ದೇವರಿಗೆ ಪಂಚಾಮೃತ ಅಭಿಷೇಕ, ಪವಮಾನ ಕಲಶಾಭಿಷೇಕ ಹಾಗೂ ಕಲ್ಪೋಕ್ತ ಪೂಜೆಗಳು ಅತ್ಯಂತ ಶ್ರದ್ಧಾಭಕ್ತಿಯಿಂದ ನಡೆದವು.


ಊರ ಹಾಗೂ ಪರವೂರ ಹತ್ತಾರು ಋತ್ವಿಜರ ನೇತೃತ್ವದಲ್ಲಿ ಲಕ್ಷ ತುಳಸಿ ಅರ್ಚನೆ ನೆರವೇರಿಸಲಾಯಿತು. ಬಳಿಕ ಮಧ್ಯಾಹ್ನ ತುಳುನಾಡಿನ ಸಾಂಪ್ರದಾಯಿಕ ಮಣ್ಣಿನ ತೆನೆ ಕಟ್ಟುವ ಪೂಜೆಯನ್ನು ಕೈಗೊಂಡು, ಆಗಮಿಸಿದ ಭಕ್ತಾದಿಗಳಿಗೆ ತೆನೆಯನ್ನು ಪ್ರಸಾದವಾಗಿ ವಿತರಿಸಲಾಯಿತು. ನಂತರ ದೇವರಿಗೆ ಮಹಾಪೂಜೆ, ತೀರ್ಥಪ್ರಸಾದ ವಿತರಣೆ ಜರುಗಿ, ಸಮಸ್ತ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು.
ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಅಸ್ರಣ್ಣರು, ಅರ್ಚಕರು, ವಿವಿಧ ಸಮಿತಿಗಳ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು ಹಾಗೂ ಹತ್ತಾರು ಭಕ್ತಾಭಿಮಾನಿಗಳು ಉಪಸ್ಥಿತರಿದ್ದು ದೇವರ ಕೃಪೆಗೆ ಪಾತ್ರರಾದರು.









