ಬೆಳ್ತಂಗಡಿಯಲ್ಲಿ ವಕೀಲರ ವೃತ್ತಿ ನಡತೆ ಕುರಿತು ಕಾನೂನು ಉಪನ್ಯಾಸ

0

ಬೆಳ್ತಂಗಡಿ : ವಕೀಲರ ಸಂಘ ಬೆಳ್ತಂಗಡಿ ಹಾಗೂ ಯುವ ವಕೀಲರ ವೇದಿಕೆ ಬೆಳ್ತಂಗಡಿ ಇದರ ಜಂಟಿ ಆಶ್ರಯದಲ್ಲಿ ಬೆಳ್ತಂಗಡಿ ವಕೀಲ ಭವನದಲ್ಲಿ “ವಕೀಲರ ವೃತ್ತಿ ನಡತೆ” ವಿಷಯದಲ್ಲಿ ಹಿರಿಯ ನ್ಯಾಯವಾದಿ ಕೆ. ಆರ್. ಆಚಾರ್ಯ ಪುತ್ತೂರು ಇವರಿಂದ ಕಾನೂನು ಉಪನ್ಯಾಸ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ಅವರು ಮಾತನಾಡುತ್ತ ವೃತ್ತಿ ನಿಯಮ ಪಾಲಿಸದ ವಕೀಲರು ಕಾನೂನು ಸೇವೆ ಮಾಡಲು ಅರ್ಹರಲ್ಲ ಕಾಕ್ಷಿದಾರರ ಹಿತದೊಂದಿಗೆ ಸಮಾಜ ಪ್ರತಿಯೊಬ್ಬರೊಂದಿಗೆ ಪ್ರಾಮಾಣಿಕವಾಗಿರುವ ಮೂಲಕ ವಕೀಲ ವೃತ್ತಿಯ ಘನತೆಯನ್ನು ಕಾಪಾಡಬೇಕು ಎಂದು ಅಭಿಪ್ರಾಯ ಪಟ್ಟರು.

ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷ ಅಲೋಶಿಯಸ್ ಲೋಬೊ, ಕಾರ್ಯದರ್ಶಿ ಪ್ರಶಾಂತ್ ಎಂ., ಹಿರಿಯ ಶ್ರೇಣಿ ನ್ಯಾಯಾದೀಶ ಮನು ಬಿ. ಕೆ, ಪ್ರಧಾನ ಸಿವಿಲ್ ನ್ಯಾಯಾದೀಶ ರಾಮಲಿಂಗಯ್ಯ, ಹೆಚ್ಚುವರಿ ನ್ಯಾಯಾಲಯದ ನ್ಯಾಯಾ ದೀಶ ಶಶಾಂಕ್ ನಾಗೇಂದ್ರ ಭಟ್,ಯುವ ವಕೀಲರ ವೇದಿಕೆ ಅಧ್ಯಕ್ಷ ಉದಯ ಬಿ.ಕೆ.,ಹಿರಿಯ ವಕೀಲರ ಸಮಿತಿ ಅಧ್ಯಕ್ಷ ಶಿವಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಉದಯ ಬಿ.ಕೆ. ಸ್ವಾಗತಿಸಿ ಪ್ರಶಾಂತ್ ಎಂ.ಧನ್ಯವಾದಗಳು ನೀಡಿದರು ವಕೀಲರ ಸಂಘದ ಮಾಜಿ ಅಧ್ಯಕ್ಷ ವಸಂತ ಮರಕಡ ಕಾರ್ಯಕ್ರಮ ನಿರೂಪಿಸಿದರು .

LEAVE A REPLY

Please enter your comment!
Please enter your name here