






ಬೆಳ್ತಂಗಡಿ : ರತ್ನಕರಂಡಕ ಶ್ರಾವಕಾಚಾರ ಸ್ವಾದ್ಯಾಯ ಗಣದವರು ಪ್ರಕಟಿಸಿದ “ದಶಭಕ್ತಿ” ಜಿನ ವಾಣಿ ಶಾಸ್ತ್ರ ಕೃತಿಯನ್ನು ಗುರುವಾಯನ ಕೆರೆಯ ಎಕ್ಸೆಲ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಲೋಕಾರ್ಪಣೆಗೊಳಿಸಿದರು.


ಜಿನೇಂದ್ರ ಬಂಗ ಸಹಕರಿಸಿದರು. ಬಂಗಾಡಿ ಗ್ರಾಮದ ಬೆಳ್ಳೂರು ” ಶಾಂತಿನಿಕೇತನ” ನಿವಾಸಿಗಳಾದ ಶುಭಲತಾ ಮತ್ತು ಸತೀಶ್ ಕುಮಾರ್ ಜೈನ್ “ದಶಭಕ್ತಿ” ಪ್ರಕಾಶನಕ್ಕೆ ಪ್ರಾಯೋಜಕರಾಗಿ ಸಹಕರಿಸಿದರು.ಹೊರನಾಡು ಜಯಶ್ರೀ ಡಿ. ಜೈನ್ ಮತ್ತು ಬಳಗದವರ ಸುಶ್ರಾವ್ಯ ಗಾಯನ ನೋಂಪಿ ಆರಾಧನೆಗೆ ವಿಶೇಷ ಮೆರುಗನ್ನು ನೀಡಿತು.









