






ಚೈತನ್ಯ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ(ರಿ) ಸುಲ್ಕೇರಿ ಇದರ ವಾರ್ಷಿಕ ಮಹಾಸಭೆಯನ್ನು ಒಕ್ಕೂಟದ ಅಧ್ಯಕ್ಷೆ ಪುಷ್ಪಲತ ಇವರ ಉಪಸ್ಥಿತಿಯಲ್ಲಿ ಗ್ರಾಮ ಪಂಚಾಯತ್ ಸುಲ್ಕೇರಿ ಸಭಾಂಗಣದಲ್ಲಿ ಸೆ. 24 ರಂದು ನಡೆಯಿತು.
ಕಾರ್ಯಕ್ರಮವನ್ನು ಪೂರ್ಣಿಮಾ ಇವರ ಪ್ರಾರ್ಥನೆಯೊಂದಿಗೆ ಪ್ರಾರಂಭಿಸಿ ಪಶುಸಖಿ ತುಳಸಿ ಎಲ್ಲರನ್ನು ಸ್ವಾಗತಿಸಿದರು ವೇದಿಕೆಯಲ್ಲಿ ಉಪಸ್ಥಿತಿಯಲ್ಲಿದ್ದ ತಾಲೂಕು ಕೃಷಿಯೇತರ ವ್ಯವಸ್ಥಾಪಕರಾದ ನಿತೇಶ್ ರವರು ಸಂಜೀವಿನಿ ಯೋಜನೆಗಳ ಬಗ್ಗೆ ಪ್ರಸ್ತಾವಿಕ ಮಾಹಿತಿ ನೀಡಿದರು.
ಒಕ್ಕೂಟದ ವಲಯ ಮೇಲ್ವಿಚಾರಕ ಸ್ವಸ್ತಿಕ್ ಜೈನ್ ಒಕ್ಕೂಟದ ಪದಗ್ರಹಣ ನಡೆಸಿದರು ಪ್ರಾಥಮಿಕ ಆರೋಗ್ಯ ಕೇಂದ್ರ ಅಳದಂಗಡಿಯ CHO ಲೀಲಾವತಿ ಇವರು ಆರೋಗ್ಯದ ಬಗ್ಗೆ ಮಾಹಿತಿ ನೀಡಿದರು.


ಒಕ್ಕೂಟದ ಕೃಪಿಸಖಿ ಶ್ವೇತಾ ಒಕ್ಕೂಟದ ವಾರ್ಷಿಕ ವರದಿಯನ್ನು, ಮುಖ್ಯ ಪುಸ್ತಕ ಬರಹಗಾರರಾದ ವಿನುತ ಜಮಾ ಖರ್ಚಿನ ವರದಿಯನ್ನು ಮಂಡಿಸಿದರು. ಮಂಡಿಸಿದ ವರದಿಯ ಬಗ್ಗೆ ಸಂಜೀವಿನಿ ಚಪ್ಪಾಳೆಯೊಂದಿಗೆ ಅನುಮೋದನೆ ಪಡೆಯಲಾಯಿತು.
ಹಳೆಯ ಪದಾಧಿಕಾರಿಗಳನ್ನು ಗೌರವಿಸಿ ನೂತನ ಪದಾಧಿಕಾರಿಗಳನ್ನು ಹೂ ನೀಡಿ ಬರಮಾಡಿಕೊಳ್ಳಲಾಯಿತು. ಉತ್ತಮ ಸಂಘವನ್ನು ಗುರುತಿಸಿ ಗೌರವಿಸಲಾಯಿತು ಸ್ವಚ್ಛ ಘಟಕದ ಸಿಬ್ಬಂದಿಗಳನ್ನು ಗೌರವಿಸಲಾಯಿತು.
ಅತಿಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು MBK ವಿನುತ ಕಾರ್ಯಕ್ರಮ ನಿರೂಪಿಸಿ LCRP ಯಶೋಧ ಧನ್ಯವಾದ ನೀಡಿದರು ಸಂಜೀವಿನಿ ಗೀತೆಯೊಂದಿಗೆ ಸಭೆಯನ್ನು ಮುಕ್ತಾಯಗೊಳಿಸಲಾಯಿತು









