






ಉಜಿರೆ: ನಾರಾವಿ ಗ್ರಾಮದಲ್ಲಿರುವ ಭಗವಾನ್ ಧರ್ಮನಾಥ ಸ್ವಾಮಿ ಬಸದಿಯಲ್ಲಿ ಗುರುವಾರ ಅನಂತನೋಂಪಿ ಆರಾಧನಾ ಪೂಜಾ ವಿಧಾನದಲ್ಲಿ 15 ಮಂದಿ ಮತ್ತು ಉದ್ಯಾಪನಾ ಪೂಜಾ ವಿಧಾನದಲ್ಲಿ 12 ಮಂದಿ ಸೇರಿದಂತೆ ಒಟ್ಟು 27 ಮಂದಿ ಶ್ರಾವಕರು- ಶ್ರಾವಕಿಯರು ಭಾಗವಹಿಸಿದರು.


ಗುರುವಾರ ಬೆಳಿಗ್ಗೆ 8:00 ಗಂಟೆಯಿಂದ ಧ್ವಜಾರೋಹಣ, ಜಿನಾಭಿಷೇಕ, ಕಂಕಣ ಬಂಧನ, ಭಗವಾನ್ ಅನಂತನಾಥ ಸ್ವಾಮಿಗೆ ಪ್ರಭಾವಳಿ ಸಮರ್ಪಣೆ ಬಳಿಕ ಧರ್ಮಶ್ರೀ ಸಭಾಭವನದಲ್ಲಿ ಅನಂತನೋಂಪಿಯ ಆರಾಧನಾ ವಿಧಾನ ನಡೆಯಿತು.
ಪಂಚ ನಮಸ್ಕಾರ ಮಂತ್ರ ಪಠಣ ದೊಂದಿಗೆ ಪಂಚಪರಮೇಷ್ಠಿಗಳ ಅಷ್ಟ ವಿಧಾರ್ಚನೆ ಪೂಜೆ, ಬಾಹುಬಲಿ ಸ್ವಾಮಿ ಪೂಜೆ, ಜಿನವಾಣಿ ಪೂಜೆ, ದಶಧರ್ಮಗಳ ಪೂಜೆ, ರತ್ನತ್ರಯ ಪೂಜೆ, ಚತುರ್ವಿಂಶತಿ(24) ತೀರ್ಥಂಕರರ ಪೂಜೆ ನಡೆಯಿತು.









