






ಬೆಳ್ತಂಗಡಿ: ಕೈಗಾರಿಕೋದ್ಯಮಿ ಅಶ್ವಥ್ ಹೆಗ್ಡೆ ಬಳಂಜ ಅವರ ವಿರುದ್ಧ ವೇಣೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎಫ್.ಐ.ಆರ್. ಸಂಖ್ಯೆ: 23/2020) ಹಾಗೂ ಅದಕ್ಕೆ ಸಂಬಂಧಿಸಿದ ಎಲ್ಲಾ ಕಾನೂನು ಪ್ರಕ್ರಿಯೆಗಳನ್ನು ರದ್ದುಪಡಿಸಿ ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದೆ.ಎನ್ವಿಗ್ರೀನ್ ಬಯೋಟೆಕ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ನ ಸ್ಥಾಪಕ ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಅಶ್ವಥ್ ಹೆಗ್ಡೆ ಅವರು ಹೈಕೋರ್ಟ್ನಲ್ಲಿ ಹೂಡಿದ್ದ ಕ್ರಿಮಿನಲ್ ಅರ್ಜಿ ಸಂಖ್ಯೆ: CRL.P 3684/2020 ಅನ್ನು ನ್ಯಾಯಾಲಯ ವಿಚಾರಣೆ ನಡೆಸಿ ಸಂಪೂರ್ಣವಾಗಿ ಪುರಸ್ಕರಿಸಿದೆ.


ಮಾನಹಾನಿ ನಡೆಸುವ ಏಕೈಕ ಉದ್ದೇಶದಿಂದ ಹೂಡಿದ್ದ ಈ ದೂರನ್ನು ಹೈಕೋರ್ಟ್ 2020ರಲ್ಲೇ ಸ್ಟೇ ಮಾಡಿತ್ತು. ಈ ಸ್ಟೇಯನ್ನು ರದ್ದುಗೊಳಿಸಬೇಕಾಗಿ ಅರ್ಜಿದಾರ ರಾಕೇಶ್ ಹೆಗ್ಡೆ ಮಾಡಿದ ಮನವಿಯನ್ನು ತಿರಸ್ಕರಿಸಿ ಸಂಪೂರ್ಣ ಪ್ರಕರಣವೇ ಸುಳ್ಳು ದೂರು ಎಂದು ಪರಿಗಣಿಸಿ ಹೈಕೋರ್ಟ್ ರದ್ದುಗೊಳಿಸಿದೆ.
ವೇಣೂರು ಪೊಲೀಸ್ ಠಾಣೆಯಯಲ್ಲಿ ಐ.ಪಿ.ಸಿ. 504 ಮತ್ತು 506ರ ಅಡಿಯಲ್ಲಿ ದಾಖಲಿಸಲಾಗಿದ್ದ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅರ್ಜಿದಾರ ಅಶ್ವತ್ಥ ಹೆಗ್ಡೆ ಪರ ಪ್ರಖ್ಯಾತ ಹಿರಿಯ ವಕೀಲ ಪಿ.ಪಿ. ಹೆಗ್ಡೆ ಅವರು ಮಂಡಿಸಿದ ವಾದವನ್ನು ಪರಿಗಣಿಸಿದ ಹೈಕೋರ್ಟ್ ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ಅವರು ಈ ಮಹತ್ವದ ಆದೇಶ ಹೊರಡಿಸಿದ್ದಾರೆ.









