







ಧರ್ಮಸ್ಥಳ: ಇಲ್ಲಿನ ನೇತ್ರಾವತಿಯ ಬಂಗ್ಲೆಗುಡ್ಡೆಯ ಒಳ ಹೋಗಿ ವೀಡಿಯೋ ಮಾಡುತ್ತಿದ್ದ ವೇಳೆ ಯುನೈಟೆಡ್ ಮೀಡಿಯಾದ ಯೂ ಟ್ಯೂಬರ್ ಅಭಿಷೇಕ್ ಹಾಗೂ ಮತ್ತೋರ್ವನನ್ನು ಸ್ಥಳೀಯರು ಪ್ರಶ್ನಿಸಿದ ಘಟನೆ ನೇತ್ರಾವತಿಯಲ್ಲಿ ನಡೆದಿದೆ.


ಘಟನೆಯ ವಿವರ:ಸುದ್ದಿಗೆ ಸಿಕ್ಕ ಮಾಹಿತಿಯ ಪ್ರಕಾರ “ಯಾತ್ರಾರ್ಥಿಯೊಬ್ಬ ಇಬ್ಬರು ಗುಡ್ಡದ ಮೇಲೆ ಹೋಗಿರುವುದನ್ನು ನೋಡಿ ನೇತ್ರಾವತಿಯ ಮಾಹಿತಿ ಕಚೇರಿಗೆ ಮಾಹಿತಿ ನೀಡಿದ್ದು, ಅವರು ಗುಡ್ಡದ ಮೇಲೆ ಹೋದವರು ಯಾರೆಂದು ತಿಳಿಯಲು ಮೇಲೆ ಹೋಗಿದ್ದು ಈ ವೇಳೆ ಯೂ ಟ್ಯೂಬರ್ಸ್ ಅನ್ನುವ ಮಾಹಿತಿ ಗೊತ್ತಾಗಿದೆ.
ಸ್ಥಳೀಯ ಕೆಲವರಿಗೆ ವಿಷಯ ಗೊತ್ತಾಗಿದ್ದು, ಕೂಡಲೇ ಪೊಲೀಸ್ ಠಾಣೆಗೆ ಕರೆ ಮಾಡಿ ತಿಳಿಸಲಾಗಿದೆ. ಆದ್ದರಿಂದ ಸ್ಥಳಕ್ಕೆ ಬಂದ ಪೊಲೀಸರು ಯೂ ಟ್ಯೂಬರ್ಸ್ ಮತ್ತು ಸ್ಥಳದಲ್ಲಿದ್ದವರನ್ನು ಠಾಣೆಗೆ ಕರೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ಗೊತ್ತಾಗಬೇಕಿದೆ.









