ಉಜಿರೆ ಅನುಗ್ರಹ ವಿವಿಧೋದ್ದೇಶ ಸಹಕಾರ ಸಂಘದ ಸಾಮಾನ್ಯ ಸಭೆ: ರೂ. 342 ಕೋಟಿ ವ್ಯವಹಾರ: ರೂ.1.51 ಕೋಟಿ ನಿವ್ವಳ ಲಾಭ: 18% ಡಿವಿಡೆಂಡ್*

0

ಉಜಿರೆ: ಅನುಗ್ರಹ ವಿವಿಧೋದ್ದೇಶ ಸಹಕಾರಿ ಸಂಘದ 2025- 26ನೇ ಸಾಲಿನ ಸಾಮಾನ್ಯ ಸಭೆಯು ಸಂತ ಅಂತೋನಿ ಚರ್ಚ್‌ನ ಅನುಗ್ರಹ ಸಭಾ ಭವನದಲ್ಲಿ ಸೆ.12ರಂದು ನಡೆಯಿತು.ಅನುಗ್ರಹ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ವಲೇರಿಯನ್ ರೋಡ್ರಿಗಸ್ ಅಧ್ಯಕ್ಷತೆ ವಹಿಸಿದ್ದರು.

ಉಜಿರೆ ಸಂತ ಅಂತೋನಿ ಚರ್ಚ್ ‘ಧರ್ಮಗುರು ವಂ. ಫಾ. ಅಬೆಲ್ ಲೋಬೊ ಆಶೀರ್ವಾಚನಗೈದರು. ಸಂಘದ ಅಧ್ಯಕ್ಷ ವಲೇರಿಯನ್ ರೋಡ್ರಿಗಸ್ ಅಧ್ಯಕ್ಷತೆ ವಹಿಸಿ ಮಾತನಾಡಿ ಸಂಘ ಸ್ಥಾಪನೆಗೊಂಡು 15ವರ್ಷಗಳನ್ನು ಪೂರೈಸಿ ಇದೀಗ 16ನೇ ವರ್ಷಕ್ಕೆ ಪಾದಾರ್ಪಣೆಗೊಂಡಿದೆ. ಆಡಳಿತ ಮಂಡಳಿಯವರ ಸಹಕಾರ, ಸದಸ್ಯರ ರಚನಾತ್ಮಕ ಸಹಕಾರ ಮತ್ತು ಸಿಬ್ಬಂದಿ ವರ್ಗದವರ ವೃತ್ತಿಪರತೆಯಿಂದಾಗಿ ಇದು ಸಾಧ್ಯವಾಗಿದೆ ಎಂದು ಹೇಳಿದರು.ನಮ್ಮ ಮೇಲೆ ಇಟ್ಟಿರುವ ವಿಶ್ವಾಸಕ್ಕಾಗಿ ನಿಮಗೆಲ್ಲರಿಗೂ ಋಣಿ ಎಂದ ಅವರು, ಸಂಘದಲ್ಲಿ ಒಟ್ಟು 4694 ಸದಸ್ಯರನ್ನೊಳಗೊಂಡು ರೂ. 93 ಕೋಟಿ ಠೇವಣಿ ಸಂಗ್ರಹಿಸಿ ರೂ. 62 ಕೋಟಿ ಸಾಲ ವಿತರಿಸಿ, ರೂ. 342 ಕೋಟಿ ವ್ಯವಹಾರ ನಡೆಸಿ ರೂ. 1.51 ಕೋಟಿ ನಿವ್ವಳ ಲಾಭ ಗಳಿಸಿ ಸದಸ್ಯರಿಗೆ ಶೇ. 18 ಡಿವಿಡೆಂಡ್ ಘೋಷಿಸಿದರು.

2025-26ನೇ ಸಾಲಿನಲ್ಲಿ ವೈದ್ಯಕೀಯ ನಿಧಿ, ಸಾರ್ವಜನಿಕ ಹಿತಾಸಕ್ತಿ ನಿಧಿ ಮತ್ತು ಮರಣೋತ್ತರ ನಿಧಿಗಳಿಂದ ಸಹಾಯಧನ, ಸಾಧಕರಿಗೆ ಸನ್ಮಾನ, ಪಿಗ್ಮಿ ಸಂಗ್ರಹಕರಿಗೆ ಉತ್ತೇಜಕ ಮೊತ್ತ, ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ವಿತರಿಸಲಾಗಿದೆ. ನಮ್ಮ ಸಂಘದ ಎಲ್ಲಾ ವ್ಯವಹಾರಗಳಲ್ಲಿ ಕಾನೂನು, ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ. ಇದರಿಂದಾಗಿ ಸಂಘ ಸಾಲ ನೀಡುವಿಕೆ ಮತ್ತು ವಸೂಲಾತಿಯಲ್ಲಿ ಗರಿಷ್ಠ ಸಾಧನೆ ಮಾಡಲು ಸಾಧ್ಯ ವಾಗಿದೆ ಎಂದರು.

ಕ್ರೈಸ್ತರು ಆರ್ಥಿಕವಾಗಿಸದೃಢವಾಗಲು ಪ್ರಾರಂಭಿಸಿದ ಸಹಕಾರಿ ಸಂಘವು ಬಹಳಷ್ಟು ಸಾಧನೆ ಮಾಡಿದೆ. ಪ್ರಸ್ತುತ ಕ್ರೈಸ್ತೇತರ ಬಂಧುಗಳಿಗೂ ಆರ್ಥಿಕವಾಗಿ ಹಿಂದುಳಿದವರ ನೆರವಿಗೆ ನಮ್ಮ ಸಂಘ ಸಹಕಾರಿಯಾಗಿದೆ. ಅನಾರೋಗ್ಯದಿಂದ ಬಳಲುತ್ತಿದ್ದವರ ಕುಟುಂಬಗಳಿಗೆ ಆರ್ಥಿಕ ನೆರವು, ಬಡವರ ಮನೆ ನಿರ್ಮಾಣಕ್ಕೆ, ವ್ಯಾಪಾರ ಉದ್ದಿಮೆ, ಶಿಕ್ಷಣಕ್ಕೆ ಪ್ರೋತ್ಸಾಹಧನ ಅಲ್ಪ ಪ್ರಮಾಣದಲ್ಲಿ ನೆರವಾಗಿದ್ದೇವೆ. ಕ್ರೈಸ್ತ ಮತ್ತು ಕ್ರೈಸ್ತತರ ಸಂಘ ಸಂಸ್ಥೆಗಳಿಗೆ ಸಾಮಾಜಿಕ ಚಟುವಟಿಕೆಗಳಿಗೆ ಆರ್ಥಿಕ ನೆರವು ನೀಡಲಾಗಿದೆ. ಸುಮಾರು ರೂ.26ಲಕ್ಷಕ್ಕೂ ಮಿಕ್ಕಿ ಹಣವನ್ನು ಸಾಮಾಜಿಕ ಚಟುವಟಿಕೆಗಳಿಗೆ ವ್ಯಯಿಸಲಾಗಿದೆ.

ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಲಾಗಿದೆ. ಮಹಾ ಸಭೆಯಲ್ಲಿ ಎಸ್ ಎಸ್ ಎಲ್ ಸಿ, ಪಿ. ಯು. ಸಿ. ಹಾಗೂ ಸ್ನಾತಕೋತ್ತರ ಪದವಿ ಪಡೆದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ವಿತರಿಸಲಾಯಿತು., ಸಂತ ರಾಫಯೇಲ್ ಚರ್ಚ್ನ ನೂತನ ಚರ್ಚ್ ಗೆ ಅನುದಾನ ಚೆಕ್, ಅನಾರೋಗ್ಯ ಪೀಡಿತ ಬಡ ಕುಟುಂಬ ಗಳಿಗೆ ಆರ್ಥಿಕ ನೆರವು, ಪಿಗ್ಮಿ ಸಂಗ್ರಹಕರಿಗೆ ಉತ್ತೇಜಕ ಮೊತ್ತ ವಿತರಿಸಲಾಯಿತು. ಠೇವಣಿ ಸಂಗ್ರಹಕ ಸಿಬ್ಬಂದಿಗೆ ಪ್ರೋತ್ಸಾಹಧನ ವಿತರಿಸಲಾಯಿತು. ಸಂಘದ ಅಧ್ಯಕ್ಷರಾಗಿ 10ವರ್ಷ ಸೇವೆ ಸಲ್ಲಿಸಿದ ವಲೇರಿಯನ್ ರೋಡ್ರಿಗಸ್ ಇವರನ್ನು ಸನ್ಮಾನಿಸಲಾಯಿತು.

ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ವಿಲ್ಸನ್ ನೆಲ್ಸನ್ ಮೋನಿಸ್ ಸಭೆಯ ನೋಟೀಸ್,ವರದಿ, ನಡವಳಿ ಓದಿ ಹೇಳಿದರು. ಸನ್ಮಾನಗೊಂಡ ಅಧ್ಯಕ್ಷರ ಪರಿಚಯ ಮಾಡಿದರು.ಉಪಾಧ್ಯಕ್ಷಅನಿಲ್ ಪ್ರಕಾಶ್ ಡಿಸೋಜ ಸ್ವಾಗತಿಸಿದರು. ನಿರ್ದೇಶಕಿ ಗೀತಾ ಫೇಲ್ಸಿಯಾನ ಡಿಸೋಜ ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕ ಸುನಿಲ್ ಮೊರಾಸ್ ವಂದಿಸಿದರು.ನಿರ್ದೇಶಕರುಗಳಾದ ಸುನಿಲ್ ಸಂತೋಷ್ ಮೋರಾಸ್,ಅರುಣ್ ಸಂದೇಶ್ ಡಿಸೋಜಾ, ಗೀತಾ ಫೆಲ್ಸಿಯಾನ್ ಡಿಸೋಜ,ಫೆಲಿಕ್ಸ್ ಡಿಸೋಜ,ಮೇಬಲ್ ಫ್ಲೇವಿಯಾ ಲೋಬೊ, ರೋಶನ್ ರೋಡ್ರಿಗಸ್,ಸ್ಟ್ಯಾನಿ ಡಿಕುನ್ಹಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಘದ ಹಿರಿಯ ಸದಸ್ಯ ಅತ್ತೂಸ್ ವೇಗಸ್ ದೀಪ ಬೆಳಗಿಸಿ ಮಹಾ ಸಭೆಗೆ ಚಾಲನೆ ನೀಡಿದರು. ಅನುಗ್ರಹ ಪದವಿ ಪೂರ್ವ ಕಾಲೇಜ್ ಪ್ರಾಂಶುಪಾಲ ವಂ.ಡಾ. ವಿಜಯ್ ಲೋಬೊ ಹಾಗೂ ಸದಸ್ಯರು ಭಾಗವಹಿಸಿದ್ದರು.

ಸಿಬ್ಬಂದಿಗಳಾದ ಹಿರಿಯ ವ್ಯವಸ್ತಾಪಕ ಪ್ರವೀಣ್ ಪಿಂಟೊ,ಮೂಡಬಿದ್ರೆ ಶಾಖಾ ವ್ಯವಸ್ಥಾಪಕ ಪ್ರವೀಣ್ ಕ್ಲಿಫರ್ಡ್,ಬಂಟ್ವಾಳ ಶಾಖೆಯ ವ್ಯವಸ್ಥಾಪಕವಿನೋಲ್ ಕ್ರಾಸ್ತಾ,ಬೆಳ್ತಂಗಡಿ ಶಾಖಾ ವ್ಯವಸ್ಥಾಪಕಜೈಸನ್ ಜೋಯಲ್ ಲೋಬೋ,ಹಿರಿಯ ಲೆಕ್ಕಪತ್ರಾಧಿಕಾರಿಮೆಲಿಟಾ ಪಾಯಿಸ್,ಅಕೌಂಟೆಂಟ್ಜಾನೆಟ್ ಸೆರಾವೊ,ಜೆಸ್ವಿತಾ ನಿಶಾ ಡಿಸೋಜಾ FDA,ವಿಲ್ಸನ್ ಟೆಲ್ಲಿಸ್ FDA,ಎಲ್ವಿಯಾ ಕೊರ್ಡೆರೊ SDA,ವೆಲಿಟಾ ವೇಗಸ್ SDA,ಅಶ್ಮಿತಾ ಪಿಂಟೊ SDA,ರೋಸ್ ಪ್ರಿಯಾ ಪಿಂಟೋ SDA,ವಿನೋಲ್ ಲೋಬೊ SDA ,ಅಲ್ವಿನ್ ಡಿ ಸೋಜಾSDA ,ಫಿಯೋನಾ ಮಿಶಾಲ್ ರೋಡ್ರಿಗಸ್ SDA,ರೆನಿಶಾ ವೇಗಸ್ SDAಸಹಕರಿಸಿದರು.

LEAVE A REPLY

Please enter your comment!
Please enter your name here