ಸೇಕ್ರೆಡ್ ಹಾರ್ಟ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಮಹಾಸಭೆ ಸದಸ್ಯರಿಗೆ ಶೇ.25 ಡಿವಿಡೆಂಡ್ ಘೋಷಣೆ ಸೇಕ್ರೆಡ್ ಹಾರ್ಟ್ ಕಾಲೇಜಿನ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ

0

ಮಡಂತ್ಯಾರು : ಸೇಕ್ರೆಡ್ ಹಾರ್ಟ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ 202-26ನೇ ಸಾಲಿನ ಮಹಾಸಭೆಯು ಸೆ.12ರಂದು ಸಂಘದ ಅಧ್ಯಕ್ಷ ಲೆನ್ಸಿ ಪಿಂಟೊ ಅವರ ಅಧ್ಯಕ್ಷತೆಯಲ್ಲಿ ಮಡಂತ್ಯಾರು ಸೇಕ್ರೆಡ್ ಹಾರ್ಟ್ ಚರ್ಚ್ ಸಭಾಭವನದಲ್ಲಿ ನಡೆಯಿತು.

ಸಂಘವು 2025-26ನೇ ಆರ್ಥಿಕ ವರ್ಷದಲ್ಲಿ ಉತ್ತಮ ವ್ಯವಹಾರ ನಡೆಸಿ ಲಾಭ ಗಳಿಸುತ್ತಾ ಮುನ್ನಡೆಯುತ್ತಿದ್ದು, ಲೆಕ್ಕಪರಿಶೋಧನೆಯಲ್ಲಿ ಸಂಘವನ್ನು ‘ಎ’ ವರ್ಗಕ್ಕೆ ವರ್ಗಿಕರಿಸಲಾಗಿದೆ ಎಂದು ತಿಳಿಸಲು ಹೆಮ್ಮೆಯಾಗುತ್ತಿದೆ. 2025-26ನೇ ಸಾಲಿನ ಆರ್ಥಿಕ ವರ್ಷದ ಅಂತ್ಯಕ್ಕೆ ಒಟ್ಟು 2863 ಸದಸ್ಯರಿದ್ದು, ರೂ.39 ಕೋಟಿ 47 ಲಕ್ಷ ದುಡಿಯುವ ಬಂಡವಾಳ ಹೊಂದಿರುತ್ತದೆ. ಆರ್ಥಿಕ ವರ್ಷದಲ್ಲಿ ರೂ. 124 ಕೋಟಿ 98 ಲಕ್ಷ ವ್ಯವಹಾರ ನಡೆಸಿ ವರ್ಷಾಂತ್ಯಕ್ಕೆ ಶೇ.96 ಸಾಲ ವಸೂಲಾತಿಯನ್ನು ಮಾಡಿ 2025-26 ನೇ ಆರ್ಥಿಕ ವರ್ಷಾಂತ್ಯಕ್ಕೆ ರೂ.1,02,75,992 ಒಟ್ಟು ಲಾಭ ಗಳಿಸಿದ್ದು ಇದರಲ್ಲಿ ರೂ.39,29,258.31 ನಿವ್ವಳ ಲಾಭವಾಗಿರುತ್ತದೆ ಎಂದು ಸಂಘದ ಅಧ್ಯಕ್ಷ ಲೆನ್ಸಿ ಪಿಂಟೊ ತಿಳಿಸಿದರು ಸದಸ್ಯರಿಗೆ 25 ಶೇ. ಡಿವಿಡೆಂಡ್ ಘೋಷಣೆ ಮಾಡಲಾಯಿತು.

ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಾರ್ಷಿಕ ವರದಿಯನ್ನು ಮಂಡಿಸಿದರು. ಸಭೆಯಲ್ಲಿ ಸೇಕ್ರೆಡ್ ಹಾರ್ಟ್ ಕಾಲೇಜಿನ ಸಾಧಕ ವಿದ್ಯಾರ್ಥಿಗಳನ್ನು ಗೌರವಿಸಿ ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಸಂಘದ ಗೌರವಾಧ್ಯಕ್ಷ ವಂ. ಫಾ. ಲಾರೆನ್ಸ್ ಮಸ್ಕರೇನಸ್, ಮುಖ್ಯ ಸಲಹೆಗಾರ ಮೋನಪ್ಪ ಪೂಜಾರಿ, ವೃತ್ತಿಪರ ನಿರ್ದೇಶಕರಾದ ಲಿಯೋ ನೊರೊನ್ಹಾ, ಫೆಲಿಕ್ಸ್ ಡಿ’ಕೊಸ್ತಾ, ಸಂಘದ ನಿರ್ದೇಶಕರಾದ ಸಿರಿಲ್ ಸಿಕ್ವೇರಾ, ವಿವೇಕ್ ವಿನ್ಸೆಂಟ್ ಪಾಯ್ಸ್, ಜೋಯಲ್ ಗೊಡ್ ಫ್ರೀ ಮೆಂಡೋನ್ಸಾ, ಲಿಯೋ ರೊಡ್ರಿಗಸ್, ಗ್ರೆಗೋರಿ ಸೇರಾ, ರೊನಾಲ್ಡ್ ಸಿಕ್ವೇರಾ, ಮೋಲಿ ಫೆರ್ನಾ೦೯ಡೀಸ್, ಸೆಲೆಸ್ತಿನ್ ಡಿ’ಸೋಜಾ ಹಾಗೂ ಗ್ರೇಸಿ ರೀಟಾ ಉಪಸ್ಥಿತರಿದ್ದರು.ಸಂಘದ ಉಪಾಧ್ಯಕ್ಷ ಫ್ರಾನ್ಸಿಸ್ ವಿ.ವಿ. ಅವರು ಸ್ವಾಗತಿಸಿದರು.

ಮಡಂತ್ಯಾರು ಸೆಕ್ರೆಡ್ ಹಾರ್ಟ್ ಕಾಲೇಜ್ ಉಪನ್ಯಾಸಕ ರೋಬಿನ್ ಸೇರಾ ನಿರೂಪಿಸಿದರು. ಸಂಘದ ನಿರ್ದೇಶಕಿ ಸೆಲೆಸ್ತಿನ್ ಡಿ’ಸೋಜಾ ಅವರು ವಂದಿಸಿದರು.

LEAVE A REPLY

Please enter your comment!
Please enter your name here