ವೇಣೂರು ಕಾಲೇಜು ವಿದ್ಯಾರ್ಥಿ ನಾಪತ್ತೆ ​

0

ಬೆಳ್ತಂಗಡಿ: ಕಾಶಿಪಟ್ಟಣ ಗ್ರಾಮದ ನೂಜಡ್ಡ ಹೊಸಮನೆಯ ನಿವಾಸಿ 16 ವರ್ಷದ ಪ್ರೀತೇಶ್ ಎಸ್. ಪೂಜಾರಿ ಎಂಬ ಬಾಲಕನು ಕಾಣೆಯಾಗಿದ್ದಾನೆಂದು ವರದಿಯಾಗಿದೆ.​

ವೇಣೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಯಾಗಿರುವ ಇವರ ತಂದೆಯ ಹೆಸರು ಶುಭಕರ್. ಸೆಪ್ಟೆಂಬರ್ 10, 2026ರಂದು ಸಂಜೆ ಸುಮಾರು 5:00 ಗಂಟೆಗೆ ಮನೆಯಿಂದ ಹೊರಟ ಈ ಬಾಲಕನು ಇದುವರೆಗೂ ಮನೆಗೆ ವಾಪಸ್ ಬಾರದೆ ನಾಪತ್ತೆಯಾಗಿದ್ದಾನೆ.​

ಈ ಹುಡುಗನ ಬಗ್ಗೆ ಯಾವುದೇ ಮಾಹಿತಿ ಅಥವಾ ಸುಳಿವು ದೊರೆತಲ್ಲಿ ಸಾರ್ವಜನಿಕರು ತಕ್ಷಣವೇ ಕೆಳಕಂಡ ಮೊಬೈಲ್ ಸಂಖ್ಯೆಗೆ ಅಥವಾ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಸಹಕರಿಸಬೇಕಾಗಿ ವಿನಂತಿಸಲಾಗಿದೆ.​ಸಂಪರ್ಕ ಸಂಖ್ಯೆ: 7349494237.

LEAVE A REPLY

Please enter your comment!
Please enter your name here