






ಉಜಿರೆ: ರಾಷ್ಟ್ರೀಯ ಹಿಂದೂ ತಾಲೂಕು ಮತ್ತು ಸಾರ್ವಜನಿಕ ಶಿ ಇದರ ಜಂಟಿ ಆಶ್ರಯದಲ್ಲಿ 29ನೇ ಪೂಜೆ ಮತ್ತು ಶ್ರೀ ಗಣೇಶೋತ್ಸವ ಸೆ.15ರವರೆಗೆ ಉಜಿರೆಯ ಶ್ರೀ ವಠಾರದಲ್ಲಿ ನಡೆಯಲಿದೆ. ಬ್ರಹ್ಮಶಿ ಗುರುಗಳ ಮಾರ್ಗದರ್ಶನದಲ್ಲಿ ಜಾಗರಣ ವೇದಿಕೆ ಸಂಸ್ಥಾಪಕ ಅವರ ನೇತೃತ್ವದಲ್ಲಿ ಕಾರ್ಯಕ್ರಮ ಪ್ರಮುಖ ಆಕರ್ಷಣೆಯಾಗಿ ಸೌಜನ್ಯ ವೇದಿಕೆಯಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ ಜರುಗಲಿದೆ.
ಮಹೇಶ್ ಶೆಟ್ಟಿ ತಿಮರೋಡಿ ಬೀಡು ಅಧ್ಯಕ್ಷತೆ ವಹಿಸಲಿದ್ದು ಖ್ಯಾತ ನ್ಯಾಯವಾದಿ ಪ್ರಸಾದ್ ಕುಮಾರ್ ಬಿ.ಸಿ.ರೋಡ್ ಅವರು ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ರಾಷ್ಟ್ರ ಸೇವಿಕಾ ಸಮಿತಿ ಪ್ರಮುಖರಾದ ಭಗಿನಿ ಮೀನಾಕ್ಷಿ ದಿಕ್ಕೂಚಿ ಭಾಷಣ ಮಾಡಲಿದ್ದು ಗಣೇಶೋತ್ಸವ ಸಮಿತಿ ಅಧ್ಯಕ್ಷ ಮೋಹನ್ ಶೆಟ್ಟಿ ಪಾರ್ನಾಲ್ ಉಪಸ್ಥಿತಿ ಇರಲಿದ್ದಾರೆ.


ಸೆ.13ರಂದು ಗೌರಿ ಪೂಜೆಯ ಸಂಭ್ರಮ: ಬೆಳಿಗ್ಗೆ ಸಾಮೂಹಿಕ ಗೌರಿ ಪೂಜೆ ಪ್ರಾರಂಭ, ಮಧ್ಯಾಹ್ನಮಹಾಪೂಜೆ ನಂತರ, ಸಾಮೂಹಿಕ ಅನ್ನಸಂತರ್ಪಣೆ, ರಾತ್ರಿ 7-30ರಿಂದ ಶ್ರೀ ಮಾಯಾ ಮಹಾದೇವ ಕಲಾತಂಡದ ಕಲಾವಿದರಿಂದ ಆರ್ ಬುಡಯೆರ್ ಎಂಬ ಸೂಪರ್ ಹಿಟ್ ತುಳು ಹಾಸ್ಯಮಯ ನಾಟಕ ನಡೆಯಲಿದ್ದು ಸೆ.14ರಂದು ಭಕ್ತಿ ಮತ್ತು ನೃತ್ಯದ ರಸದೌತಣ, ಬೆಳಿಗ್ಗೆ 8ಕ್ಕೆ ಗಣಪತಿ ಮೂರ್ತಿ ಪ್ರತಿಷ್ಠೆ, ಗಣಹೋಮ, ತಾಲೂಕಿನ ವಿವಿಧ ಭಜನಾ ಮಂಡಳಿಗಳಿಂದ ದಿನಪೂರ್ತಿ ಭಜನಾ ಕಾರ್ಯಕ್ರಮ, ಮಹಾಪೂಜೆ, ಮಹಾ ಅನ್ನಸಂತರ್ಪಣೆ, ಮಧ್ಯಾಹ್ನ 1-15ಕ್ಕೆ ನೃತ್ಯ ವೈವಿಧ್ಯಮಯ ಕಾರ್ಯಕ್ರಮ, ಸಂಜೆ 6-15ಕ್ಕೆ ಶೃಂಗೇರಿಯವರ ಭಕ್ತಿ ರಸಮಂಜರಿ, ರಾತ್ರಿ 8ರಿಂದ ರೋಮಾಂಚನಕಾರಿ ತುಳು ನಾಟಕ ಆಕಲ್ಟಿಗಾದ ಕಾಳಿ ಮಂತ್ರದೇವತೆ ನಡೆಯಲಿದೆ.
ಸೆ.15ರಂದು ಬೆಳಿಗ್ಗೆ ಪೂಜೆ, 108 ತೆಂಗಿನಕಾಯಿ ಗಣಹೋಮ, 10-30ಕ್ಕೆ ಧಾರ್ಮಿಕ ಸಭೆ, ಮಧ್ಯಾಹ್ನ ಯಕ್ಷಗಾನ ವೈಭವ, ಮಹಾ ಅನ್ನಸಂತರ್ಪಣೆ, ಸಂಜೆ 6ಕ್ಕೆ ಮಹಾಪೂಜೆ, 6-30ಕ್ಕೆ ಅದ್ದೂರಿ ವರ್ಣರಂಜಿತ ಶೋಭಾಯಾತ್ರೆ ನಡೆಯಲಿದೆ. ಶೋಭಾಯಾತ್ರೆಯಲ್ಲಿ ಭಜನಾ ತಂಡಗಳ ಭಜನೆ, ಚೆಂಡೆ, ನಾಸಿಕ್ ಬ್ಯಾಂಡ್, ಟ್ಯಾಬ್ಲೊ, ಕೀಲುಕುದುರೆ, ಸುಡುಮದ್ದು ಪ್ರದರ್ಶನ ವಿಶೇಷ ಆಕರ್ಷಣೆಯಾಗಲಿದೆ. ರಾತ್ರಿ 8ರಿಂದ ಕಲರ್ಸ್ ಕನ್ನಡ ಎದೆ ತುಂಬಿ ಹಾಡುವೆನು ಖ್ಯಾತಿಯ ಸಂದೇಶ್ ನೀರುಮಾರ್ಗ ತಂಡದಿಂದ ಭಕ್ತಿ ಗಾನಾಮೃತ ಕಾರ್ಯಕ್ರಮ ನಡೆಯಲಿದೆ ಎಂದು ಸಮಿತಿಯ ಪ್ರಕಟಣೆ ತಿಳಿಸಿದೆ.









