ಕಿರಿಯಾಡಿಯಲ್ಲಿ 36ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಠಮಿ ಆಚರಣೆ ಸಾಧಕರಿಗೆ ಸನ್ಮಾನ

0

ಉಜಿರೆ : ಕಿರಿಯಾಡಿ ಶ್ರೀ ಉಮಾಮಹೇಶ್ವರ ಭಜನಾ ಮಂಡಳಿಯ ಆಶ್ರಯದಲ್ಲಿ ಸೆ. 6ರಂದು ಕಿರಿಯಾಡಿ ಶ್ರೀ ಸದಾಶಿವ ದೇವಸ್ಥಾನದ ವಠಾರದಲ್ಲಿ 36ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ ನಡೆಯಿತು.

ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ಶ್ರೀ ಸದಾಶಿವ ದೇವರಿಗೆ ಅರ್ಚಕ ಶಿವ ರಾಘವ ಭಟ್ ಇವರ ವೈದಿಕ ವಿಧಾನದೊಂದಿಗೆ ವಿಶೇಷ ಪೂಜೆ ನಡೆಯಿತು. ನಂತರ ನಡೆದ ಕಾರ್ಯಕ್ರಮದ ಉದ್ಘಾಟನೆಯನ್ನು ಉಜಿರೆ ಮೈಂದ್ರೇಲ್ ಆದರ್ಶ ನಗರ ಪುರಂದರ ಎಂ. ನೆರವೇರಿಸಿದರು.

ನಂತರ ಅಂಗವಾಡಿ ಮಕ್ಕಳಿಂದ ವಿವಿಧ ವಯೋಮಾನನದ ಬಾಲಕ, ಬಾಲಕಿಯರಿಗೆ, ಪುರುಷರಿಗೆ, ಮಹಿಳೆಯರಿಗೆ ಸಾರ್ವಜನಿಕರಿಗೆ ವಿವಿಧ ಆಟೋಟ ಸ್ಪರ್ಧೆಗಳು, ಮುದ್ದು ಕೃಷ್ಣ ವೇಷ, ಬಾಲಕೃಷ್ಣ ವೇಷ ಸ್ಪರ್ಧೆ, ರಂಗೋಲಿ ಸ್ಪರ್ಧೆ, ಮಲ್ಲಕಂಬ ಸ್ಪರ್ಧೆ ನಡೆಯಿತು.ಸಂಜೆ ನಡೆದ ಸಮಾರೋಪ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಜನಾ ಮಂಡಳಿಯ ಅಧ್ಯಕ್ಷ ಸೀತಾರಾಮ ಗೌಡ ಕೂಡಿಗೆ ವಹಿಸಿದ್ದರು.

ಸಂಪೂರ್ಣ ಸಹಜ ಕೃಷಿ ನಿರ್ದೇಶಕ ಶಿವಪ್ರಸಾದ್ ಮಲೆಬೆಟ್ಟು ಮುಖ್ಯ ಅತಿಥಿಯಾಗಿ ಭಾಗವಹಿಸಿ ಸಂಘಟನೆ ಕಾರ್ಯಕ್ರಮದ ಆಯೋಜನೆ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿಮಾತನಾಡಿದರು. ಪುರಂದರ ಎಂ. ಮೈಂದ್ರೇಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. .ಈ ಸಂದರ್ಭದಲ್ಲಿ ನಾಟಿ ವೈದ್ಯೆ ಸುಂದರಿ ಅಣ್ಣು ನಾಯ್ಕ ಪಂಚಲಿಕೆ ಇವರನ್ನು ಸನ್ಮಾನಿಸಲಾಯಿತು.

ವ್ಯವಹಾರ ಸಾಧಕ ನಂದಿನಿ ಉತ್ಪನ್ನಗಳ ವಿತರಕ ಯೋಗೀಶ್, ಶೈಕ್ಷಣಿಕ ಮತ್ತು ಕ್ರೀಡಾ ಸಾಧಕರಾದ ರಕ್ಷಾ ಕಿರಿಯಾಡಿ, ಶ್ರೇಯಸ್ ನಿನ್ನಿಕಲ್, ತನುಷ್ ಅರಳಿ, ಮೋಕ್ಷಿತ್ ಕಿರಿಯಾಡಿ, ನಿಶ್ಮಿತಾ ಇವರನ್ನು ಗೌರವಿಸಲಾಯಿತು.ಹರಿಶ್ಚಂದ್ರ ಕಕ್ಕರಬೆಟ್ಟು ಇವರಿಗೆ ವೈದ್ಯಕೀಯ ನೆರವು ನೀಡಲಾಯಿತು.

ವಿವಿಧ ಸ್ಪರ್ಧೆಗಳ ತೀರ್ಪುಗಾರರಾಗಿ ಸಹಕರಿಸಿದ ಉಜಿರೆ ಶ್ರೀ ಧ. ಮ.ನ್ಯಾಚುರೋಪತಿ ಕಾಲೇಜು ದೈಹಿಕ ಶಿಕ್ಷಣ ನಿರ್ದೇಶಕ ಧರ್ಮೇ0ದ್ರ ಕುಮಾರ್ ಬೆಳಾಲು, ನಿವೃತ್ತ ಶಿಕ್ಷಕಿ ರಾಜೇಶ್ವರಿ ಚಂದ್ರಕಾಂತ, ಮುಂಡತ್ತೋಡಿ ಪೆರ್ಲ ಶಾಲಾ ಮುಖ್ಯ ಶಿಕ್ಷಕಿ ಸೇವಂತಿ ಬಿ., ಉಮೇಶ್ ಶಿವಾಜಿನಗರ ಇವರನ್ನು ಗುರುತಿಸಿ ಗೌರವಿಸಲಾಯಿತು..ಭಜನಾ ಮಂಡಳಿಯ ಕೋಶಾಧಿಕಾರಿ ಭಗೀರಥ ಪ್ರಸ್ತಾವನೆ ಗೈದರು. ಉಪಾಧ್ಯಕ್ಷ ಮಾಧವ ಗೌಡ ಕೊಡಂಗೆ ಸ್ವಾಗತಿಸಿ ಕಾರ್ಯದರ್ಶಿ ಮೋಹನ್ ವಂದಿಸಿದರು.ಶೈಲೇಶ್ ಧರಣಿ, ರಮೇಶ್ ಗೌಡ ಸನ್ಮಾನಿತರನ್ನು ಪರಿಚಯಿಸಿದರು. ಧರ್ಣಪ್ಪ ಗೌಡ ಧರಣಿ, ಚೈತ್ರ ಶೈಲೇಶ್, ಕು. ಸುಚಿತ್ರ ಕಾರ್ಯಕ್ರಮ ನಿರೂಪಿಸಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು.

LEAVE A REPLY

Please enter your comment!
Please enter your name here