ಬೈಂದೂರು ಬ್ರಹ್ಮಾನಂದಶ್ರೀಗಳ ಚಾತುರ್ಮಸ್ಯ ವೃತಾಚರಣೆ: ಬೆಳ್ತಂಗಡಿ ಬಿಲ್ಲವ ಸಂಘದ ಪದಾಧಿಕಾರಿಗಳ ಭೇಟಿ ಶ್ರೀಗಳಿಂದ ಆಶೀರ್ವಾದ

0

ಬೆಳ್ತಂಗಡಿ : ಬೈಂದೂರಿನ ಗೋಳಿಹೊಳೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ನಡೆಯುತ್ತಿರುವ ಶ್ರೀ ರಾಮ ಕ್ಷೇತ್ರದ ಮಠಾಧೀಶ ಮಹಾಮಂಡಲೇಶ್ವರ 1008 ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಚಾತುರ್ಮಾಸ್ಯ ವೃತಾಚರಣೆಗೆ ಬೆಳ್ತಂಗಡಿ ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘದ ಪದಾಧಿಕಾರಿಗಳು ಸೆ. 6ರಂದು ಭೇಟಿ ನೀಡಿ ಶ್ರೀಗಳಿಂದ ಆಶೀರ್ವಾದ ಪಡೆದರು.

ಅವರೆಲ್ಲರನ್ನು ಬ್ರಹ್ಮಾನಂದ ಶ್ರೀಗಳು ಗೌರವಿಸಿದರು.ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಜಯವಿಕ್ರಮ್ ಕಲ್ಲಾಫು, ಪ್ರಧಾನ ಕಾರ್ಯದರ್ಶಿ ನಿತೀಶ್ ಹೆಚ್. ಕುಕ್ಕೇಡಿ, ಜತೆ ಕಾರ್ಯದರ್ಶಿ ಸಂತೋಷ ಉಪ್ಪಾರು, ಯುವ ಬಿಲ್ಲವ ವೇದಿಕೆಯ ಅಧ್ಯಕ್ಷ ಎಂ. ಕೆ. ಪ್ರಸಾದ್, ಬಿಲ್ಲವ ಮಹಿಳಾ ವೇದಿಕೆ ಅಧ್ಯಕ್ಷೆ ಸುಮತಿ ಪ್ರಮೋದ್, ಸಂಘದ ನಿರ್ದೇಶಕರುಗಳಾದ ರವೀಂದ್ರ ಬಿ. ಆಮೀನ್, ಸಂತೋಷ್ ಕೆ. ಸಿ., ಸುನಿಲ್ ಕನ್ಯಾಡಿ, ಕಮಲಾಕ್ಷ ಬೆಳ್ತಂಗಡಿ, ಮಾಜಿ ನಿರ್ದೇಶಕ ರಾಜೀವ ಸಾಲಿಯಾನ್ ಇನ್ನಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here