






ಬೆಳಾಲು : ಬೆಳಾಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2025- 26ನೇ ಸಾಲಿನ ವಾರ್ಷಿಕ ಮಹಾಸಭೆ ಸೆ. 6ರಂದು ಬೆಳಾಲು ಶ್ರೀ ಧ. ಮ. ಪ್ರೌಢ ಶಾಲೆಯಲ್ಲಿ ಸಂಘದ ಅಧ್ಯಕ್ಷಹೆಚ್. ಪದ್ಮ ಗೌಡ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.ಆರ್ಥಿಕ ವರ್ಷದಲ್ಲಿ ರೂ. 72,37,903/ ನಿವ್ವಳ ಲಾಭ ಗಳಿಸಿದ್ದು ಶೇ. 14.50 ಪಾಲು ಬಂಡವಾಳದ ಮೇಲೆ ಡಿವಿಡೆಂಟ್ ಘೋಷಣೆ ಮಾಡಲಾಯಿತು.

ಸಂಘದ ಉಪಾಧ್ಯಕ್ಷ ದಿನೇಶ್ ಕೋಟ್ಯಾನ್ ಸ್ವಾಗತಿಸಿ, ನಿರ್ದೇಶಕ ಸುರೇಂದ್ರ ಗೌಡ ವಂದಿಸಿದರು. ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ನಾರಾಯಣ ಗೌಡ ವರದಿ ವಾಚಿಸಿ ಮಹಾಸಭೆಯ ಕಾರ್ಯ ಕಲಾಪ ನಡೆಸಿದರು.


ನಿರ್ದೇಶಕರುಗಳಾದ ದಾಮೋದರ ಗೌಡ ಸುರುಳಿ, ರಾಜಪ್ಪ ಗೌಡ ಪುಚ್ಚೆಹಿತ್ಲು, ರಮೇಶ್ ಗೌಡ ಅಂಗಡಿಬೆಟ್ಟು , ಪ್ರವೀಣ್ ವಿಜಯ್, ಶೀನಪ್ಪ ಗೌಡ ಕೊಲ್ಲಿಮಾರು, ಸೀತಾರಾಮ ಬಿ. ಎಸ್., ಚೀ0ಕ್ರ, ಸುಕನ್ಯಾ ನಾರಾಯಣ ಸುವರ್ಣ, ಹೇಮಾವತಿ, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಪ್ರತಿನಿಧಿ ಸುದರ್ಶನ್ ಉಪಸ್ಥಿತರಿದ್ದರು.
ಸಂಘದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಲಹೆ ಸೂಚನೆ ನೀಡಿದರು.ಸಿಬ್ಬಂದಿ ವರ್ಗದವರು ಸಹಕರಿಸಿದರು.









